BREAKING NEWS
Search

ಕುಮಟಾದ ತಂಡ್ರಕುಳಿ ಬಳಿ ಬೀಕರ ಅಪಘಾತ- ಸಿದ್ದಾಪುರದ ವ್ಯಕ್ತಿ ಸಾವು.

1952

ಕಾರವಾರ:- ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಸಿದ್ದಾಪುರ ಮೂಲದ ಓರ್ವ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಂಡ್ರಕುಳಿಯ ರಾಷ್ಟ್ರೀಯ ಹೆದ್ದಾರಿ 66 ರ ಶಿರಸಿ ಕ್ರಾಸ್ ಬಳಿ ನಡೆದಿದೆ.

ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಕಾರು ಮಂಗಳೂರಿನಿಂದ ಅಂಕೋಲ ಕಡೆ ಬರುತಿದ್ದ ಲಾರಿಗೆ ಮುಖಾ ಮುಖಿ ಡಿಕ್ಕಿಯಾಗಿದೆ.
ಈ ವೇಳೆ ಕಾರಿನಲ್ಲಿ ಚಾಲಕ ಸೇರಿ ಸಿದ್ದಾಪುರದ ಇಬ್ಬರು ಇದ್ದು ಇಬ್ಬರಿಗೂ ಗಂಭೀರ ಗಾಯವಾಗಿದ್ದು ಅಪಘಾತ ನಡೆದ ವೇಳೆ ಸಿದ್ದಾಪುರದ ಮಂಜುನಾಥ್ ಆಚಾರಿ ಎಂಬುವ ವ್ಯಕ್ತಿ ಮೃತನಾಗಿದ್ದಾನೆ.ಇನ್ನೂರ್ವನ ಸ್ಥಿತಿ ಚಿಂತಾಜನಕವಾಗಿದ್ದು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ.
ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ