BREAKING NEWS
Search

ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳ ಐ ಫೋನ್ ಎಗರಿಸಿದ!ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

1311

ಕಾರವಾರ :-ಮೊಬೈಲ್ ಕೊಂಡುಕೊಳ್ಳುವ ನೆಪದಲ್ಲಿ ಮೊಬೈಲ್ ಶಾಪ್ ಗೆ ಬಂದು ಚಾಲಾಕಿ ಕಳ್ಳ ಮೊಬೈಲ್ ಎಗುರಿಸಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ
ಬಿಎಲ್ ಟೆಲಿಕಾಂ ಮೊಬೈಲ್ ಶಾಪ್ ನಲ್ಲಿ ನಡೆದಿದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳ್ಳತನ ಮಾಡಿದ ವಿಡಿಯೋ ನೋಡಿ:-

ಗ್ರಾಹಕನ ಸೋಗಿನಲ್ಲಿ ಬಂದ ಯುವಕ ಹೊಸ ಮೊಬೈಲ್ ಕರೀದಿಗೆ ವಿಚಾರಿಸಿದ್ದು ಈ ವೇಳೆ ಅಂಗಡಿ ಮಾಲೀಕನ ಗಮನ ಬೇರೆಡೆ ಇದ್ದಾಗ 30ಸಾವಿರದ ಐ ಪೋನ್ ನನ್ನು ಅಂಗಡಿ ಇಂದ ಎಗರಿಸಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ
ಕುಮಟ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾ ದಲ್ಲಿ ಇದು ಮೊದಲಲ್ಲ!

ಗ್ರಾಹಕನ ಸೋಗಿನಲ್ಲಿ ಬಂದು ಮಾಲೀಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಕೂಡ ಕುಮಟಾದ ಮೊಬೈಲ್ ಶಾಪ್ ಒಂದರಲ್ಲಿ ವಿದೇಶಿ ಮಹಿಳೆಯೊಬ್ಬಳು ಮೊಬೈಲ್ ಎಗರಿಸಿ ಪರಾರಿಯಾಗಿದ್ದಳು ,ಇದರ ನಂತರ ಇದು ಮೂರನೇ ಪ್ರಕರಣವಾಗಿದೆ.




Leave a Reply

Your email address will not be published. Required fields are marked *