
ಕುಮಟಾ ಪಟ್ಟಣದ ನಾಗರಿಕ ಬಂಧುಗಳೇ ಪುರಸಭೆ ಒಂದು ಪ್ರಕಟಣೆ ಹೊರಡಿಸಿದೆ. ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವ ಸಲುವಾಗಿ ಪಟ್ಟಣದ ವ್ಯಾಪ್ತಿಯಲ್ಲಿ ದಿನಸಿ ವಸ್ತುಗಳನ್ನು, ತರಕಾರಿಗಳನ್ನು, ಮೊಟ್ಟೆ ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಈಗಾಗಲೇ ಪ್ರಾರಂಭಿಸಲಾಗಿರುತ್ತದೆ.

ಪುರಸಭೆ ವತಿಯಿಂದ ವ್ಯವಸ್ಥೆ ಮಾಡಿದರೂ ಕೆಲವು ಅಂಗಡಿಕಾರರು ಅನಧಿಕೃತವಾಗಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು ಆದೇಶ ಉಲ್ಲಂಘನೆ ಮಾಡಿದೆ.

ಔಷಧಿ ಅಂಗಡಿ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಂದಿನ ಅದೇಶದವರೆಗೆ ಬಂದ್ ಇಡತಕ್ಕದ್ದಾಗಿದ್ದು ತಪ್ಪಿದಲ್ಲಿ ಅಂಗಡಿಗಳನ್ನು ಸೀಜ್ ಮಾಡಿ ಅಂಥವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುರಸಭಾ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ರಸ್ತೆಗಳಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿರುವುದು ಕಂಡು ಬರುತಿದ್ದು ಅಂಥವರ ವಾಹನಗಳನ್ನು ಪೋಲೀಸ ಇಲಾಖೆಯು ಜಪ್ತಿ ಮಾಡಿ ಕಾನೂನಿನ ಕ್ರಮ ತೆಗೆದುಕೋಳ್ಳಲಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಇದಕ್ಕೆ ಆಸ್ಪದ ಕೊಡದೇ ತಮ್ಮ ತಮ್ಮ ಮನೆಯಲ್ಲಿಯೇ ಇದ್ದು ಕೊರೋನಾ ವಿರುದ್ಧ ಹೋರಾಡಲು ಸಹಕರಿಸಬೇಕೆಂದು ಪುರಸಭಾ ಮುಖ್ಯಾಧಿಕಾರಿ ಸುರೇಶ್.ಎಂ.ಕೆ.
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.