ಇಂದು ಬಂದ ಬುಲಟಿನ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಶಾಕ್ ! ಭಟ್ಕಳ ದಿಂದ ಕುಮಟಾಕ್ಕೂ ಹಬ್ಬಿದ ಸೊಂಕು! ಕೊರಂಟೈನ್ ಸೀಲ್ ಇರುವ ವ್ಯಕ್ತಿ ಹೃದಯಾಘಾತದಲ್ಲಿ ಸಾವು!

19066

ಕಾರವಾರ:- ಉತ್ತರ ಕನ್ನಡ ಜಿಲ್ಲೆ ಭಟ್ಕಕ ಹಾಗೂ ಕುಮಟಾ ಸೇರಿ ಎರಡು ಕರೋನಾ ಪಾಸಿಟಿವ್ ಇಂದಿನ ಬುಲಟಿನ್ ನಲ್ಲಿ ಬರುವ ಮೂಲಕ ಭಟ್ಕಳ ದಿಂದ ಕುಮಟಾಕ್ಕೂ ಹಬ್ಬಿದೆ.

ಭಟ್ಕಳದ ರೋಗಿ ಸಂಖ್ಯೆ 659 ರ ಎರಡನೇ ಹಂತದ ಸಂಪರ್ಕ ಹೊಂದಿದ ರೋಗಿ ಸಂಖ್ಯೆ 786 ರ ಎರಡು ವರ್ಷದ ಹೆಣ್ಣು ಮಗುವಿಗೂ ಸೊಂಕು ದೃಡಪಟ್ಟಿದೆ.

ಇನ್ನು ಮಹರಾಷ್ಟ್ರದ ರತ್ನಗಿರಿ ಮೂಲಕ ಮೀನಿನ ಲಾರಿಯಲ್ಲಿ ಆಗಮಿಸಿದ್ದ 26 ವರ್ಷದ ಯುವಕನಿಗೂ ಕರೋನಾ ಪಾಸಿಟಿವ್ ಬಂದಿದೆ.

ಈತ ಮೀನಿನ ಲಾರಿಯಲ್ಲಿ ಕ್ಲೀನರ್ ಎಂದು ಸುಳ್ಳುಹೇಳಿ ಕುಮಟಾಕ್ಕೆ ಆಗಮಿಸಿದ್ದ. ಹಿರೆಗುತ್ತಿ ಚಕ್ ಪೊಸ್ಟ್ ನಲ್ಲಿ ತಪಾಸಣೆ ವೇಳೆ ಈತ ನನ್ನು ಹಿಡಿದು ಕುಮಟಾದ ಶಾಲೆಯೊಂದರಲ್ಲಿ ಕೊರಂಟೈನ್ ಮಾಡಲಾಗಿದೆ. ಇನ್ನು ಕೊರಂಟೈನ್ ಸ್ಥಳದಲ್ಲಿ ಸಹ ಈತ ಅಲ್ಲಿರುವ ಜನರ ಜೊತೆ ಸಂಪರ್ಕ ಮಾಡಿರುವ ಸಾಧ್ಯತೆಗಳಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಕ್ವಾರಂಟೈನ್ ಸೀಲ್ ಇದ್ದ ವ್ಯಕ್ತಿ ಹೃದಯಾಘಾತದಿಂದ ಸಾವು !

ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಹಿರೇಗುತ್ತಿ ಚೆಕ್‌ಪೊಸ್ಟ್ ಬಳಿ ಮಹಾರಾಷ್ಟ್ರದಿಂದ ಉಡುಪಿಗೆ ಹೊರಟಿದ್ದ ಕರುಣಾಕರ ಶೆಟ್ಟಿ (೭೮) ಎಂಬ
ವ್ಯಕ್ತಿ ಹೃದಯಾಘಾತದಲ್ಲಿ ಸಾವುಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹಿರೆಗುತ್ತಿ ಬಳಿ ನಡೆದಿದೆ.

ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಸುರಕ್ಷತೆಯೊಂದಿಗೆ ಮೃತದೇಹ ವನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಸಿಬ್ಬಂದಿ ಕೊಂಡೊಯ್ದಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ