ಒಂದು ವಾರದಿಂದ ಹಸಿದ ಬಡ ಜನರಿಗೆ ಅನ್ನಾಹಾರ ನೀಡುತ್ತಿರುವ ಕುಮಟಾದ ಯುವಕ-ಪತ್ರಕರ್ತರು ಸಾಥ್

454

ಕಾರವಾರ :- ಇಡೀ ಭಾರತವೇ ಲಾಕ್ ಡೌನ್ ಆಗಿದೆ.ಹಲವು ಭಾಗದಲ್ಲಿ ದಿನದ ಮೂಲಭೂತ ಅಗತ್ಯ ವಸ್ತುಗಳೂ ಜನರಿಗೆ ಸಿಗುವುದು ದುಸ್ತರವಾಗಿದೆ.ಜಿಲ್ಲಾಡಳಿತಗಳು ಒಂದಿಷ್ಟು ಪ್ರಯತ್ನ ಮಾಡಿದರೂ ಬೀದಿಯಲ್ಲಿರುವ ಅನಾಥರು,ಕೂಲಿ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ದುಸ್ತರವಾಗಿದ್ದು ಅಲ್ಲಿ ಇಲ್ಲಿ ಸಿಗುವ ನಳದ ನೀರೇ ಮೃಷ್ಟಾನ್ನ ಭೋಜನವಾಗಿದೆ.

ಆದರೇ ಇವರ ಸ್ಥಿತಿಯನ್ನು ಅರಿತ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶ್ರೀಧರ್ ಕುಮಟೇಕರ್ ಎಂಬ ಯುವಕನೊಬ್ಬ ಬೀದಿಯಲ್ಲಿರುವ ಬಿಕ್ಷಕರಿಗೆ ಕಳೆದ ಒಂದು ವಾರದಿಂದ ತನ್ನ ಸ್ವಂತ ಹಣ ಬಳಸಿ ಮೂರು ಹೊತ್ತು ಊಟ ,ತಿಂಡಿಗಳನ್ನು ನೀಡುತಿದ್ದು ಹಸಿದವರಿಗೆ ನೆರವಾಗುತಿದ್ದಾರೆ.

ಕುಮಟಾ ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಶ್ರೀಧರ್ ರವರು ಭಾರತ್ ಬಂದ್ ನಂತರ ಮನೆಯಲ್ಲಿದ್ದರು.ಆದರೇ ರಸ್ತೆ ಬದಿ ಊಟವಿಲ್ಲದೇ ಹಸುವಿನಿಂದ ಬಳಲಿ ಬೆಂಡಾಗಿದ್ದ ಬಿಕ್ಷುಕರನ್ನು ನೋಡಿ ತನ್ನ ಮನೆಯಲ್ಲಿಯೇ ಪ್ರತಿ ದಿನ ಊಟ,ತಿಂಡಿಯನ್ನು ತಯಾರಿಸಿ ಅದನ್ನು ನಿಡುತಿದ್ದರು.ಇವರ ಈ ಕೆಲಸವನ್ನು ನೋಡಿದ ಸ್ಥಳೀಯ ಪತ್ರಕರ್ತರು ಸಹ ಸಾಥ್ ನೀಡಿದ್ದು ಒಂದಿಷ್ಟು ಜಿನಸಿ,ಅಗತ್ಯ ವಸ್ತುಗಳನ್ನು ಕೊಡಿಸಿ ಇವರ ಕೆಲಸಕ್ಕೆ ಸಹಕಾರ ನೀಡಿದ್ದಾರೆ.

ಪ್ರತಿ ದಿನ ಆಹಾರವನ್ನು ತಯಾರಿಸಿ ಬಸ್ ನಿಲ್ದಾಣ,ರಸ್ತೆಗಳಲ್ಲಿರುವ ಅನಾಥರಿಗೆ ,ಕೂಲಿ ಕೆಲಸದವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದು ಎಲ್ಲರಿಗೂ ಮಾದರಿಯಾಗುವಂತಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ