ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬ್ಯಾಂಕ್ ವಿವರ ಸಲ್ಲಿಸಲು ಸೂಚನೆ.

4905

ಕಾರವಾರ:- ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಕಾರ್ಮಿಕರಿಗೆ ಸಹಾಯಧನ ನೀಡಲು ಸರ್ಕಾರ ನಿರ್ದೇಶಿಸಿದ್ದು, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳ ವಿವರವನ್ನು ತಕ್ಷಣ ಒದಗಿಸಬೇಕೆಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ ಬಿ.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಂದಾಯಿತ ಕಾರ್ಮಿಕರ ಖಾತೆಗಳಿಗೆ ಹಣ ಜಮಾ ಮಾಡಲು ಅವರವರ ಬ್ಯಾಂಕ್ ಖಾತೆ ಅವಶ್ಯವಿರುವ ಕಾರಣ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆ ನಂಬರ್, ಬ್ಯಾಂಕ್ ಮತ್ತು ಬ್ರಾಂಚ್ ಹೆಸರು,ಇಫ್ಸ್ಕಿ code ವಿವರಗಳನ್ನು ಮತ್ತು ಆಧಾರ್ ಕಾರ್ಡ್ ಮತ್ತು ಕಾರ್ಮಿಕ ಇಲಾಖೆಯ ವತಿಯಿಂದ ಪಡೆದ ನೋಂದಣಿ ಪತ್ರ ಮತ್ತು ರೇಷನ್ ಕಾರ್ಡ್ (ಇದ್ದಲ್ಲಿ) ವಿವರವನ್ನು ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರುಗಳ ಕಚೇರಿಗಳಿಗೆ ಕೂಡಲೇ ವಾಟ್ಸಾಪ್ ಮೂಲಕ ಸಲ್ಲಿಸಲು (ಯಾವುದೇ ಕಾರಣಕ್ಕೂ ಕಛೇರಿಗೆ ಖುದ್ದು ಭೇಟಿ ನೀಡದೆ) ಕೋರಲಾಗಿದೆ.

ಸಂಪರ್ಕಿಸುವ ದೂರವಾಣಿ:-

ಕಾರವಾರ ಕಾರ್ಮಿಕ ನಿರೀಕ್ಷಕರು 9902961745, ಅಂಕೋಲಾ 7349570383, ಹೊನ್ನಾವರ 7483794947, 9620269047, ಕುಮಟಾ 9902762624, ಭಟ್ಕಳ 9606564127, 9036670507, ಶಿರಸಿ 9483207715, ಸಿದ್ಧಾಪುರ 9742850006, ಹಳಿಯಾಳ 9632626157, ಯಲ್ಲಾಪುರ 9886205742, ಮುಂಡಗೋಡ 7406909645, , ದಾಂಡೇಲಿ (ಜೋಯಿಡಾ ಮತ್ತು ದಾಂಡೇಲಿಗೆ ಸಂಬಂಧಿಸಿದಂತೆ) 9632143637 ಈ ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಫಲಾನುಭವಿಯ ನೋಂದಣಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಇದ್ದಲಿ ಪೋಟೋ ತೆಗೆದು ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ