BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ 14 ರ ನಂತರ ಲಾಕ್ ಡೌನ್ ಮುಂದುವರಿಕೆ?

1540

ಕಾರವಾರ:- ಇಡೀ ದೇಶವೇ ಕೊರೋನಾ ವೈರೆಸ್ ಸೊಂಕಿನಿಂದಾಗಿ ಇದೇ ತಿಂಗಳ 14 ರ ವರೆಗೆ ಲಾಕ್ ಡೌನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿತ್ತು .
ಇದರ ಬೆನ್ನಲ್ಲೇ 14 ನೇ ತಾರೀಕಿನ ವರೆಗೆ ಇಡೀ ದೇಶ ಸಂಪೂರ್ಣ ಸ್ಥಬ್ಧವಾಗಿದ್ದು ಇನ್ನೇನು 14 ತಾರೀಕು ಸಹ ಮುಗಿಯಲಿದೆ. ಆದರೇ ಇಷ್ಟೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಬರುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಅವಧಿಯನ್ನು ಇನ್ನೂ ಮುಂದುವರೆಸುವ ಯೋಚನೆಯಲ್ಲಿದ್ದು ಸಂಪುಟ ಸಭೆ ಕೂಡ ಕರೆದಿದೆ.


ಇನ್ನು ಕರ್ನಾಟಕದಲ್ಲಿ ಸಹ ಮುಂದುವರೆಸುವ ಕುರಿತು ರಾಜ್ಯ ಸರ್ಕಾರ ಬಹುತೇಕ ನಿರ್ಧಾರ ಕೈಗೊಳ್ಳುವುದು ಪಕ್ಕಾ ಆಗಿದೆ.
ಇನ್ನು ಕೇಂದ್ರ ಸರ್ಕಾರ ಕರ್ನಾಟಕದ ಐದು ಜಿಲ್ಲೆಗಳನ್ನು ಕೆಂಪು ಪಟ್ಟಿಗೆ ಸೇರಿಸಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆ ಸಹ ಒಂದಾಗಿದೆ.
ಹೀಗಾಗಿ ಒಂದುವೇಳೆ ಕರ್ನಾಟಕ ಬಂದ್ ಮುಂದುವರೆಸದೇ ಇದ್ದಲ್ಲಿ ಕೆಂಪು ಪಟ್ಟಿಯಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಬಂದ್ ಅನಿರ್ಧಿಷ್ಟಾವಧಿ ಮುಂದುವರೆಯಲಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.


ಸದ್ಯ ಕೆಂಪು ಪಟ್ಟಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್ ಮುಂದುವರೆಯಲಿದ್ದು ಈ ಕುರಿತು ಈಗಾಗಲೇ ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿಕೊಂಡಿದೆ.
ಇದಲ್ಲದೇ ಇಷ್ಟು ದಿನ ಜಿಲ್ಲಾಡಳಿತ ಜನರಿಗೆ ಹೆಚ್ಚು ಒತ್ತಡ ನೀಡದೇ ಜಿಲ್ಲೆಯನ್ನು ಬಂದ್ ಮಾಡಿತ್ತು.ಆದರೇ 14 ನೇ ತಾರೀಕಿನ ನಂತರ ಇನ್ನೂ ಹೆಚ್ಚಿನ ಕಟೋರ ಕ್ರಮ ಅನುಸರಿಸುವ ಸಾಧ್ಯತೆಗಳಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್ ಮುಂದುವರೆಯಲಿದೆ.
Leave a Reply

Your email address will not be published. Required fields are marked *