ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು-ಶಿರಸಿಯಲ್ಲಿ ಒಂದು ಫಾಸಿಟಿವ್ ! ಎಂಟು ಜನ ಗುಣಮುಖ

2243

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಐದು ಕರೋನಾ ಫಾಸಿಟಿವ್ ದೃಡಪಟ್ಟಿದೆ. ಇದರಲ್ಲಿ ಭಟ್ಕಳ ದ ಮೂರು ಜನರಲ್ಲಿ ಫಾಸಿಟಿವ್ ವರದಿಯಾಗಿದ್ದರೆ , ಮುಂಡಗೋಡು ಒಂದು ,ಶಿರಸಿಯ ಮರಾಟಿ ಕೊಪ್ಪದ ಓರ್ವ ಪುರುಷನಿಗೆ ಕರೋನಾ ಫಾಸಿಟಿವ್ ವರದಿಯಾಗಿದ್ದು ಈತನ ಸಂಪರ್ಕ ಪತ್ತೆಯಾಗದೇ ಆತಂಕ ಮೂಡಿಸಿದೆ. ಈ ಮೂಲಕ ಜಿಲ್ಲೆಯಲ್ಲಿ 298 ನಷ್ಟು ಸೊಂಕಿತರಿದ್ದು 151ಜನ ಗುಣಮುಖರಾಗಿದ್ದು 147 ಸಕ್ರಿಯ ಪ್ರಕರಣಗಳಿದ್ದು ಇಂದು ಎಂಟು ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಸೊಂಕಿತರಾದವರ ತಾಲೂಕು ವಾರು ವಿವರ :-

ಭಟ್ಕಳ :- ವಿಜಯವಾಡ ದಿಂದ ಮರಳಿದ 13 ವರ್ಷದ ಬಾಲಕಿ , 10 ವರ್ಷದ ಬಾಲಕ ,34 ವರ್ಷದ ಮಹಿಳೆಗೆ ಸೊಂಕು ( ಒಂದೇ ಕುಟುಂಬದವರು)

ಮುಂಡಗೋಡು :- 70 ವರ್ಷದ ವೃದ್ಧ

ಶಿರಸಿ:- ಸಂಪರ್ಕವೇ ಪತ್ತೆಯಾಗದ 40 ವರ್ಷದ ಪುರುಷ.

ಶಿರಸಿಯ ಮರಾಟಿಕೊಪ್ಪ ಸೀಲ್ ಡೌನ್ !

ಬೆಂಗಳೂರಿನಿಂದ ವಾಪಾಸಾಗಿದ್ದ ಶಿರಸಿಯ ವ್ಯಕ್ತಿಯೊರ್ವನಿಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಇಲ್ಲಿನ ಮರಾಠಿಕೊಪ್ಪದ ೬ ಮನೆಗಳು ಹಾಗೂ ಎರಡು ಖಾಸಗಿ ಆಸ್ಪತ್ರೆಗಳನ್ನು ಸೀಲ್ ಮಾಡಲು ಆಡಳಿತ ಮುಂದಾಗಿದ್ದು, ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ.

ಜೂನ್ ೨೩ ರಂದು ಬೆಂಗಳೂರಿಗೆ ಹೋಗಿದ್ದ ಇಲ್ಲಿನ ವ್ಯಕ್ತಿ ಜೂ.೨೪ ರಂದು ಶಿರಸಿಗೆ ವಾಪಾಸ್ಸಾಗಿದ್ದ. ನಂತರ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಜೂ.೨೯ ರಂದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದ. ನಂತರ ಗುಳಿಗೆ ನೀಡಿದ್ದ ವೈದ್ಯರು ತಾಲೂಕಾ ಆಡಳಿತದ ಗಮನಕ್ಕೆ ತಂದಿದ್ದರು.

ಜ್ವರದ ಹಿನ್ನಲೆಯಲ್ಲಿ ವ್ಯಕ್ತಿಯ ಗಂಟಲು ದ್ರವ ತೆಗೆದು ಲ್ಯಾಬ್ ಗೆ ಪರೀಕ್ಷೆಗೆ ಕಳಿಸಲಾಗಿತ್ತು. ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟಿದ್ದು, ಹೋಮ್ ಕ್ವಾರಂಟೈನ್ ಇದ್ದ ಆ ವ್ಯಕ್ತಿಯನ್ನು ಕಾರವಾರಕ್ಕೆ ಕರೆದೊಯ್ಯಲಾಗಿದೆ.

ಇದರ ಪರಿಣಾಮ ಮರಾಠಿಕೊಪ್ಪದ ೬ ಮನೆಗಳು ಹಾಗೂ ಚಿಕಿತ್ಸಗೆ ತೆರಳಿದ್ದ ಎರಡು ಖಾಸಗಿ ಆಸ್ಪತ್ರೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಇಂದು ಎಂಟು ಜನ ಸೊಂಕಿನಿಂದ ಗುಣಮುಖ .

ಜಿಲ್ಲೆಯಲ್ಲಿ ಸೊಂಕಿತರಾದ ಭಟ್ಕಳ ದ 75 ವರ್ಷದ ವೃದ್ಧ ಮತ್ತು 3 ವರ್ಷದ ಹೆಣ್ಣುಮಗು ,ಚಿಕ್ಕಮಗಳೂರಿನ 25 ವರ್ಷದ ಪುರುಷ , ಹೊನ್ನಾವರದ 33 ವರ್ಷದ ಮಹಿಳೆ ,ದಾಂಡೇಲಿಯ 50 ವರ್ಷದ ಪುರುಷ ,ಜೋಯಿಡಾ ದ 50 ವರ್ಷದ ಪುರುಷ ,ಶಿರಸಿಯ 55 ವರ್ಷದ ಪುರುಷ ,ಮುಂಡಗೋಡಿನ 27 ವರ್ಷದ ಪುರುಷ ಇಂದು ಗುಣಮುಖರಾಗಿದ್ದು ಇವರನ್ನು ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ನಿಂದ ಕಳುಹಿಸಿಕೊಡಲಾಯಿತು.
Leave a Reply

Your email address will not be published. Required fields are marked *