BREAKING NEWS
Search

ಸಿದ್ದರಾಮಯ್ಯನವರಿಗೆ ಬೇಜಾರಾಗಿದೆ-ಜನ ನಮ್ಮನ್ನು ಮಾನ್ಯ ಮಾಡಿದ್ದಾರೆ-ಶಿವರಾಮ್ ಹೆಬ್ಬಾರ್!

477

ಕಾರವಾರ:- ಪಕ್ಷಾಂತರ ಮಾಡಿದ ಶಾಸಕರನ್ನು ಸಚಿವ ಸ್ಥಾನ ನೀಡಬಾರದು ಎಂದು ಸಿದ್ದರಾಮಯ್ಯ ಹೇಳಿಕೆಗೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು ನಮ್ಮನ್ನು ಮಂತ್ರಿ ಮಾಡುವುದಿಲ್ಲ ಎಂಬ ಕಾಲ ಬಂದಾಗ ಸಿದ್ದರಾಮಯ್ಯನವರೇ ಮಾತನಾಡಿದ್ರು
ನಮಗೆ ಮೋಸ ಮಾಡಿದ್ರು ಮೋಸ ಮಾಡಿದ್ರು ಎಂದು.

ಇವತ್ತು ಅವರಿಗೆ ಯಾವ ಬೇಸರವಾಗಿದೆಯೋ ಗೊತ್ತಿಲ್ಲ,ಅವರು ಬೇಸರ ಮಾಡಿಕೊಳ್ಳುವುದು ಬೇಡ ಜನ ನಮ್ಮನ್ನು ಮಾನ್ಯ ಮಾಡಿದ್ದಾರೆ ಅವರನ್ನು ಅಮಾನ್ಯ ಮಾಡಿದ್ದಾರೆ.

ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದರು.
ಇನ್ನು ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಗುಂಪಿನ ಸೋತವರ ಕುರಿತು ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ ಅವರು ಸಚಿವ ಸಂಪುಟ ವಿಸ್ತರಣೆ ಆರನೇ ತಾರೀಕಿನಂದು ಆಗಲಿದೆ ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.ಅದರಂತೆ ಆಗುತ್ತದೆ,
ಯಾವುದೇ ವಿಷಯವಾದ್ರೂ ಮುಖ್ಯಮಂತ್ರಿಗಳಿಗೆ ಕೇಳಿ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಜಾರಿಕೊಂಡರು.




Leave a Reply

Your email address will not be published. Required fields are marked *