ಸಂಸದ ಅನಂತಕುಮಾರ್ ಹೆಗಡೆಗೆ ಕರೋನಾ ಪಾಸಿಟಿವ್!

526

ಕಾರವಾರ :- ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಕರೋನಾ ಸೋಂಕು ದೃಢಗೊಂಡಿದೆ. ಮುಂಗಾರು ಅಧಿವೇಶನ ನಡೆಯುವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಸಿದ ಕೋವಿಡ್-19 ಕಡ್ಡಾಯ ಪರೀಕ್ಷೆಯಲ್ಲಿ ಅವರಿಗೆ ಸೋಂಕು ದೃಢಗೊಂಡಿದೆ. ಅವರ ಜೊತೆ ಹದಿನಾರು ಸಂಸದರಿಗೆ ಸೋಂಕು‌ ತಗುಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪಾರ್ಲಿಮೆಂಟ್ ಹೌಸ್‌ನಲ್ಲಿ ಲೋಕಸಭಾ ಸದಸ್ಯರುಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಕರೋನ ಸೋಂಕಿತ ಸಂಸದರಲ್ಲಿ 12 ಬಿಜೆಪಿ, ವೈಆರ್‌ಎಸ್ ಕಾಂಗ್ರೆಸ್‌ನ ಇಬ್ಬರು, ಶಿವಸೇನೆ, ಡಿಎಂಕೆ ಹಾಗೂ ಆರ್‌ಎಲ್‌ಪಿ ಪಕ್ಷಗಳ ತಲಾ ಒಬ್ಬರು ಇದ್ದಾರೆ.

ಸಂಸದ ಅನಂತಕುಮಾರ್ ಹೆಗಡೆ ಶಿರಸಿಯಿಂದ ಹುಬ್ಬಳ್ಳಿ ವಿಮಾನದ ಮೂಲಕ ಸಂಸತ್ ಅಧಿವೇಶನಕ್ಕೆ ತೆರಳಿದ್ದು ಅಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ದೆಹಲಿಯ ಲೋದಿ ಸ್ಟ್ರೀಟ್ ನಲ್ಲಿರುವ ಅವರ ನಿವಾಸದಲ್ಲಿ ಹೋನ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು ಯಾವುದೇ ಸಮಸ್ಯೆಗಳಿಲ್ಲದೇ ಚೇತರಿಸಿಕೊಳ್ಳುತ್ತಿರುವುದಾಗಿ ಪಬ್ಲಿಕ್ ಟಿವಿಗೆ ಅವರ ಕುಟುಂಬವರ್ಗ ಮಾಹಿತಿ ನೀಡಿದೆ.
ಇನ್ನು ಅವರಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಶಿರಸಿ ನಿವಾಸದಲ್ಲಿರುವ ಅವರ ಪತ್ನಿ ಮಕ್ಕಳಿಗೂ ಕರೋನಾ ಟೆಸ್ಟ್ ಮಾಡಿದ್ದು ನೆಗಟಿವ್ ಬಂದಿದೆ.

ಕರೋನಾವನ್ನು ಆಲಸ್ಯ ಮಾಡಿ ವಿವಾದಿತ ಹೇಳಿಗೆ ನೀಡಿದ್ದ ಅನಂತಕುಮಾರ್ ಹೆಗಡೆ.!

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಕೊರೊನಾ ಎಲ್ಲಾ ಏನು ಇಲ್ಲ, ಇವೆಲ್ಲ ಗಿಮಿಕ್, ಇದು ಕೆಲವೊಂದು ಕಂಪನಿಗಳ ಲಾಭ ಗಳಿಕೆಗಾಗಿ ಕ್ರಿಯೇಟ್ ಮಾಡಿದ್ದು, ಎಂದು ಹೇಳಿದ್ದ ಅವರು ಮಾಸ್ಕ್ ಧರಿಸಿದವರನ್ನು ರಾಮಾಯಣದ ಕಪಿಗಳಿಗೆ ಹೋಲಿಸಿದ್ದರು. ಇದಲ್ಲದೇ ತಾವು ಯಾವುದೇ ಸಭೆ ಸಮಾರಂಭಕ್ಕೆ ತೆರಳಿದರೂ ಮಾಸ್ಕ ಅನ್ನು ದರಿಸದೇ ಹಾಜುರಾಗುತಿದ್ದು ಈಗ ಇವರಿಗೇ ಕರೋನಾ ಪಾಸಿಟಿವ್ ಬರುವಂತಾಗಿದೆ.
Leave a Reply

Your email address will not be published. Required fields are marked *