ಉತ್ತರ ಕನ್ನಡ ಜಿಲ್ಲೆಯಲ್ಲಿ 92ಜನರಿಗೆ ಕರೋನಾ ಪಾಸಿಟಿವ್! ಜಿಲ್ಲೆಯ ಪ್ರಮುಖ ಮಾಹಿತಿ ಇಲ್ಲಿದೆ.

1379

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 92 ಜನರಲ್ಲಿ ಪಾಸಿಟಿವ್ ವರದಿಯಾಗಿದೆ.
83 ಜನ ಗುಣಮುಖರಾಗಿ ಇಂದು ಬಿಡುಗಡೆಹೊಂದಿದ್ದಾರೆ.ಜಿಲ್ಲೆಯಲ್ಲಿ ಈವರೆಗೆ 2119 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 63 ಜನರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆಪಡೆಯುತಿದ್ದಾರೆ.

682 ಜನ ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 23 ಈ ವರೆಗೆ ಕರೋನಾದಿಂದ ಸಾವು ಕಂಡವರ ಜಿಲ್ಲಾವಾರು ಸಂಖ್ಯೆಯಾಗಿದೆ.

ಕಾರವಾರ- 4
ಕುಮಟಾ-1
ಅಂಕೋಲ-14
ಹೊನ್ನಾವರ-6
ಭಟ್ಕಳ-2
ಶಿರಸಿ-5
ಯಲ್ಲಾಪುರ -1
ಮುಂಡಗೋಡು-8
ಹಳಿಯಾಳ- 49
ಜೋಯಿಡಾ-2

ರಾಜ್ಯ ಆರೋಗ್ಯ ಇಲಾಖೆಯ ಜಿಲ್ಲಾವಾರು ಕೋವಿಡ್ ಸೊಂಕಿತರ ವಿವರ:-

ಇನ್ನೆರಡು ವರ್ಷದೊಳಗೆ ಸಂಪೂರ್ಣ ಕಾಳಿ ನದಿ ಮಾಲಿನ್ಯ ಮುಕ್ತವಾಗಬೇಕು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ.

ಕಾರವಾರ : -ಕಾಳಿ ನದಿಯ ನೀರನ್ನು ಮಾಲಿನ್ಯ ಮುಕ್ತ ಮಾಡಬೇಕಿದೆ ಈ ಬಗ್ಗೆ ಕೂಡಲೇ ಕ್ರಮ ವಹಿಸಲು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಕರ್ನಾಟಕಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿಗಳು ಮಾನ್ಯ ನ್ಯಾಯಾಲಯದ ಆದೇಶದಂತೆ ಈಗಾಗಲೇ District Level Special Environment Surveillance Task Force ರಚನೆಗೊಂಡಿದ್ದು, ಈ ಕಮೀಟಿಯು ಕಾಳಿ ನದಿಯ 10 ಕೀಮಿ. ಸ್ಟ್ರೆಚ್ ಮಾಲಿನ್ಯ ಮುಕ್ತ ಮಾಡಲು ಶ್ರಮಿಸಬೇಕಿದೆ. ಕಾಳಿ ನದಿಯು (ದಾಂಡೇಲಿ ಇಂದ ಬೊಮ್ಮನಹಳ್ಳಿ ಹಳ್ಳಿಯವರೆಗೆ) ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಿಯಾ ಯೋಜನೆಯಂತೆ ಕಾಳಿ ನದಿಯ ನೀರನ್ನು ಮಾಲಿನ್ಯ ಮುಕ್ತ ಹಾಗೂ ಇದು ಕೇವಲ ಆ 10 ಕೀಮಿ ವ್ಯಾಪ್ತಿಗೆ ಒಳಪಡದೇ ಇಡೀ ನದಿ ಉಗಮಸ್ಥಾನದಿಂದ ಸಮುದ್ರ ಸೇರುವವರೆಗೂ ಮಾಲಿನ್ಯ ಮುಕ್ತವಾಗಬೇಕಿದೆ. ಉಗಮ ಸ್ಥಾನದಲ್ಲಿರುವ ನೀರಿನ ಗುಣಮಟ್ಟ ಸಮುದ್ರ ಸೇರುವ ಸ್ಥಳದಲ್ಲಿಯೂ ಹಾಗೆಯೇ ಇರಬೇಕಿದೆ ಅದಕ್ಕೆ ಎಲ್ಲಾ ಇಲಾಖೆಗಳು ಈ ಕುರಿತು ಸೂಕ್ತ ಕ್ರಮ ವಹಿಸಬೇಕಿದೆ. ನದಿಯ ಪಾತ್ರದಲ್ಲಿ ಮಾಲಿನ್ಯ ಕಾರಕಗಳು ನೀರನ್ನು ಸೇರುವುದನ್ನು ಗುರುತಿಸಿ ಅದನ್ನು ನಿಲ್ಲಿಸಬೇಕು ಹಾಗೂ ಈ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತ ಹಾಗೂ ತಾಲ್ಲೂಕು ಪಂಚಾಯತಗಳು ನದಿಗೆ ಯಾವುದೇ ಮಲೀನ ನೀರು ಅಥವಾ ಕಸ ಕಡ್ಡಿಗಳು (ಘನ ತ್ಯಾಜ್ಯ) ಯಾವುದೇ ಮೂಲದಿಂದ ನದಿಗೆ ಸೇರುವಂತಹ ಪ್ರದೇಶಗಳನ್ನು ಗುರುತಿಸಿ, ನಕ್ಷೆಯನ್ನು ತಯಾರಿಸಿ, ಇದನ್ನು ತಡೆಗಟ್ಟಲು ಕೂಡಲೇ ಕ್ರಮ ವಹಿಸಲು ಸೂಚಿಸಿದರು. ನದಿಯನ್ನು ಮಲೀನಗೊಳಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ ಜಿಲ್ಲಾಧಿಕಾರಿಗಳು ಮುಂದಿನ ಎರಡು ವರ್ಷದೊಳಗೆ ಸಂಪೂರ್ಣ ಕಾಳಿ ನದಿ ಮಾಲಿನ್ಯ ಮುಕ್ತವಾಗಬೇಕು ಈ ಬಗ್ಗೆ ಕೂಡಲೇ ಕ್ರಮ ವಹಿಸಲು ಎಲ್ಲ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಘನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ಅನುಷ್ಠಾನ ವಿಷಯವಾಗಿ ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಪೀಠವು ನೀಡಿರುವ ಆದೇಶದÀನ್ವಯ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ (ಟಾಸ್ಕ್ ಫೋರ್ಸ ಸಮಿತಿ) ರಚಿಸಲಾಗಿರುತ್ತದೆ. ಘನತ್ಯಾಜ್ಯ ವಿಲೇವಾರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಆದಾಗ್ಯೂ, ಮನೆ ಮನೆಯಿಂದ ಕಸ ಸಂಗ್ರಹಣೆ, ವಿಂಗಡಣೆ ಮತ್ತು ಮುಂದುವರೆದು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಂಗಡಿಸಿದ ಕಸವನ್ನು ವೈಜ್ಞಾನಿಕವಾಗಿ ಶೇಕಡಾ 100 ರಷ್ಟು ನಿರ್ವಹಣೆ ಮಾಡಲೂ ಸಹ ಇನ್ನಷ್ಟು ಕ್ರಮಗಳನ್ನು ಮತ್ತು ಈ ಕುರಿತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯು ಘನತ್ಯಾಜ್ಯ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರನ್ವಯ ಸ್ಥಳೀಯ ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಬಗ್ಗೆ ಕೂಲಂಕುಷವಾಗಿ ಪರಿವೀಕ್ಷಣೆ ನಡೆಸಿ ಆಗಾಗ್ಗೆ ಸೂಕ್ತ ತಂತ್ರಜ್ಞಾನ ಅಳವಡಿಕೆಗಳ ಬಗ್ಗೆ ಮಾರ್ಗದರ್ಶನ ನೀಡಲು ಮತ್ತು ಕಮೀಟಿಯ ಗಮನಕ್ಕೆ ತರಲು ಸೂಚಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ತಾಲೂಕು, ಗ್ರಾಮ ಪಂಚಾಯತಿ ಹಾಗೂ ನಗರಸಭೆಗಳಲ್ಲಿ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಇನ್ನು ಹೆಚ್ಚಿನ ಒತ್ತು ನೀಡಲು ತಿಳಿಸಿದರು.

    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪರಿಸರ ಅಧಿಕಾರಿಗಳಾದ  ಡಾ. ಹೆಚ್ ಲಕ್ಷ್ಮೀಕಾಂತ, ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ, ಪೊಲೀಸ್ ಉಪಾಧೀಕ್ಷಕರಾದ ಅರವಿಂದ ಕಲಗುಜ್ಜಿ ಹಾಗೂ ಇತರರು ಹಾಜರಿದ್ದರು.

ದಿನಾಂಕ: 31-7-2020 ರ ಮಳೆ ಹಾಗೂ ಜಲಾಶಯದ ಮಟ್ಟದ ವಿವರ ಈ ಕೆಳಗಿನಂತಿದೆ : –

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 54.0 ಮಿ.ಮೀ, ಭಟ್ಕಳ 52.8 ಮಿ.ಮೀ, ಹಳಿಯಾಳ 00 ಮಿ.ಮೀ, ಹೊನ್ನಾವರ 23.3 ಮಿ.ಮೀ, ಕಾರವಾರ 84.0 ಮಿ.ಮಿ, ಕುಮಟಾ 20.3 ಮಿ.ಮೀ, ಮುಂಡಗೋಡ 0.8 ಮಿ.ಮೀ, ಸಿದ್ದಾಪುರ 4.2 ಮಿ.ಮೀ ಶಿರಸಿ 6.5 ಮಿ.ಮೀ, ಜೋಯಡಾ 2.6 ಮಿ.ಮೀ, ಯಲ್ಲಾಪುರ 0.6 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ:-

ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.30 ಮೀ (2020), 6542.00 ಕ್ಯೂಸೆಕ್ಸ್ (ಒಳಹರಿವು) 7658.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.95 ಮೀ. (2020), 6440.0 ಕ್ಯೂಸೆಕ್ಸ್ (ಒಳ ಹರಿವು) 5054.0 (ಹೊರಹರಿವು) ಸೂಪಾ: 564.00 ಮೀ (ಗ), 533.73 ಮೀ (2020), 2651.933 ಕ್ಯೂಸೆಕ್ಸ್ (ಒಳ ಹರಿವು), 3992.558 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 453.05 ಮೀ (2020), 0.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 434.02 ಮೀ (2020), 3854.0 ಕ್ಯೂಸೆಕ್ಸ್ (ಒಳ ಹರಿವು) 6155.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 47.89 ಮೀ (2020) 5773.000 ಕ್ಯೂಸೆಕ್ಸ್ (ಒಳ ಹರಿವು) 8005.000 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1770.90 ಅಡಿ (2020) 3940.00 ಕೂಸೆಕ್ಸ (ಒಳ ಹರಿವು) 4921.00 ಕ್ಯೂಸೆಕ್ಸ್ (ಹೊರ ಹರಿವು)
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ