BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಸರ್ಗ ಚಂಡಮಾರುತದ ಆರ್ಭಟ! ಎಲ್ಲಿ ಎಷ್ಟು ಮಳೆ ಹಾನಿ ಗೊತ್ತಾ!

1243

ಕಾರವಾರ:-ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್ ಭರ್ಜರಿಯಾಗಿದೆ.

ಬೆಳಗ್ಗೆಯಿಂದ ಜಿಲ್ಲೆಯಾಧ್ಯಾಂತ ಅಬ್ಬರದ ಗಾಳಿ,ಗುಡುಗು ಸಹಿತ ಮಳೆಯಾಗುತ್ತಿದೆ.
ಇದರಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಮರಗಳು ಉರುಳಿ ಹಾನಿಯಾಗಿದೆ.

ಮಳೆ ಅಬ್ಬರಕ್ಕೆ ವಿದ್ಯತ್ ಶಾರ್ಟ ಸರ್ಕ್ಯೂಟ್!

ಕಾರವಾರ ನಗರದ ಬಳಿಯಿರುವ ಬಾಷಾ ಪ್ಲಾಝಾದಲ್ಲಿನ ಜಮೀರ್ ಎಂಬವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದೆ.

ಸ್ಥಳಕ್ಕೆ ಆಗಮಿಸುದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಮುಂಡಗೋಡಿನಲ್ಲಿ ಕೊಚ್ಚಿಹೋದ ತಾತ್ಕಾಲಿಕ ಸೇತುವೆ!

ಭಾರೀ ಮಳೆ‌ ಹಿನ್ನಲೆ ಹೆಚ್ಚಿನ ನೀರು ಹರಿದುಬಂದ ಹಿನ್ನಲೆಯಲ್ಲಿ ಮುಂಡಗೋಡಿನ ಶಿಡ್ಲಗುಂಡಿ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ.

ಕಳೆದ ವರ್ಷದ ಮಳೆಗೆ ಪೂರ್ತಿಯಾಗಿ ಕೊಚ್ಚಿಹೋಗಿದ್ದ ಶಿಡ್ಲಗುಂಡಿ ಸೇತುವೆಗೆ ತಾತ್ಕಾಲಿಕ ಸೇತುವೆ ನೀರ್ಮಿಸಲಾಗಿತ್ತು.

ಸೇತುಗೆ ಕುಸಿದ ಹಿನ್ನಲ್ಲೆ ಯಲ್ಲಾಪುರ-ಮುಂಡೋಡ ಸಂಚಾರ ಸಂಪರ್ಕ ಕಡಿತಗೊಂಡಿದೆ.

ಜಿಲ್ಲೆಯಲ್ಲಿ ಇಂದು ಸುರಿದ ಮಳೆ ಪ್ರಮಾಣ ಈ ಕೆಳಗಿನಂತಿದೆ.

ಅಂಕೋಲಾ 7 ಮಿಲಿ ಮೀಟರ್ , ಭಟ್ಕಳ 7.2 ಮಿ ಮೀ, ಹಳಿಯಾಳ 3.9 ಮಿ ಮೀ, ಹೊನ್ನಾವರ 4.1 ಮಿ ಮೀ, ಕಾರವಾರ 31.8 ಮಿ ಮೀ, ಕುಮಟಾ 7.2 ಮಿ ಮೀ, ಮುಂಡಗೋಡ 24.6 ಮಿ ಮೀ, ಸಿದ್ದಾಪುರ 5.2 ಮಿ ಮೀ, ಶಿರಸಿ 0.5 ಮಿ ಮೀ, ಜೋಯಿಡಾ 21.8ಮಿ ಮೀ, ಯಲ್ಲಾಪುರ 22.2 ಮಿ ಮೀ ನಂತೆ ಜಿಲ್ಲೆಯಲ್ಲಿ ಒಟ್ಟು 135.5 ಮಿ ಮೀ ಮಳೆಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ