ಕಾರವಾರದಲ್ಲಿ ಸಮುದ್ರಕ್ಕೆ ಅಪ್ಪಳಿಸಿ ಪ್ಯಾರಾ ಮೋಟರ್ – ನೌಕಾನೆಲೆಯ ಕ್ಯಾಪ್ಟನ್ ಸಾವು.

4563

ಕಾರವಾರ :-ಆಕಾಶದಲ್ಲಿ ಹಾರಾಡುತ್ತಿರುವ ವೇಳೆ ಗಾಳಿಗೆ ಪ್ಯಾರಾ ಮೊಟಾರ್ ನ ದಾರ ತುಂಡಾಗಿ ಕಾರವಾರದ ಟ್ಯಾಗೋರ್ ಕಡಲಿನಲ್ಲಿ ಪತನಗೊಂಡು ಅದರಲ್ಲಿದ್ದ ನೌಕಾನೆಲೆಯ ಕ್ಯಾಪ್ಟನ್ ಸಾವು ಕಂಡ ಘಟನೆ ಇಂದು ನಡೆದಿದೆ.

ಇನ್ಸ್ಟ್ರಕ್ಟರ್ ಜೊತೆಗೆ ಪ್ಯಾರಾ ಮೊಟಾರ್ ನಲ್ಲಿ ಹಾರಾಟ ನಡೆಸುತ್ತಿದ್ದ ಆಂದ್ರ ಪ್ರದೇಶ ಮೂಲದ ನೌಕಾ ನೆಲೆಯ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಪ್ರಾಣ ಬಿಟ್ಟಿದ್ದಾರೆ.

ಪ್ಯಾರಾ ಮೂಟರ್ ಆಕಾಶದಲ್ಲಿ ಹಾರುತ್ತಿರುವ ವೇಳೆ ಗೈಡರ್ ನ ಮೇಲ್ಭಾಗದ ಪ್ಯಾರಾಚುಟ್ ದಾರ ಹರಿದಿದೆ.ಈ ವೇಳೆ ಗಾಳಿ ಹೆಚ್ಚಿದ್ದರಿಂದ ಇಂಜಿನ್ ಗೆ ಹಾಗು ಪೈಲೆಟ್ ದೇಹಕ್ಕೆ ಈ ನೈಲನ್ ದಾರಗಳು ಸುತ್ತಿದ್ದು ಗ್ಲಡರ್ ನೊಂದಿಗೆ ಮೇಲಿಂದ ಇಬ್ಬರೂ ಸಮುದ್ರಕ್ಕೆ ಇಬ್ಬರೂ ಬಿದ್ದಿದ್ದಾರೆ. ಈ ವೇಳೆ ಇನ್ಸ್ಟ್ರಕ್ಟರ್ ಕ್ಯಾಪ್ಟನ್ ವಿದ್ಯಾದರ್ ವೈದ್ಯ ಅಪಾಯದಿಂದ ಪಾರಾಗಿದ್ದು, ಪ್ರವಾಸಿಗ ಆಂದ್ರ ಮೂಲದ ನೌಕಾನಲೆಯ ಕ್ಯಾಪ್ಟನ್ ಮಧುಸೂದನ್ ರೆಡ್ಡಿ ಗಂಭೀರವಾಗಿದ್ದು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೇ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಬಾರದ ಅಂಬ್ಯುಲೆನ್ಸ್-ಸಾವಿಗೆ ಕಾರಣವಾಯ್ತು.

ಘಟನೆ ನಡೆದು ಅರ್ಧ ಗಂಟೆಗೂ ಮೇಲಾದರೂ ಒಂದೂ ಅಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ಬಂದಿಲ್ಲ. ಮಾರು ದೂರದಲ್ಲಿ ಜಿಲ್ಲಾ ಆಸ್ಪತ್ರೆ ಇದ್ದರೂ, ಅಂಬ್ಯುಲೆನ್ಸ್ ಗಾಗಿ ಗೋಗರೆದರೂ ಬಾರದ ಕಾರಣ‌ ನಗರ ಠಾಣೆಯ ಪಿಎಸ್ಐ ಸಂತೋಷ್ ಅವರ ಜೀಪಿನಲ್ಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿಸಲಾಗಿತ್ತು. ಆದರೇ ಇನ್ಸ್ಟ್ರಕ್ಟರ್ ಕ್ಯಾಪ್ಟನ್ ವಿದ್ಯಾಧರ್ ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದು ಆಂದ್ರ ಮೂಲದ ನೌಕಾ ನೆಲೆಯ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಸಾವನ್ನಪ್ಪಿದ್ದಾರೆ.

ವೀಡಿಯೋ ನೋಡಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ