ಕಾರವಾರ ಪೊಲೀಸರಿಂದ ಕೊರೋನಾ ಜಾಗೃತಿ-ನೋವು ತೋಡಿಕೊಳ್ಳಲಾಗದ ಪೊಲೀಸರ ಸ್ಥಿತಿ ಹೇಗಿದೆ ಗೊತ್ತಾ?

587

ಕಾರವಾರ:-ಇಡೀ ಭಾರತ ಲಾಕ್ ಡೌನ್ ಆಗಿದೆ.ಕೊರೋನಾ ಮಹಾ ಮಾರಿಯನ್ನು ದೇಶದಿಂದ ಓಡಿಸಲು ಎಲ್ಲರೂ ಒಂದಾಗಿದ್ದಾರೆ.ಆದರೇ ಸರ್ಕಾರದ ಆದೇಶವಿದ್ದರೂ ಹಲವು ಜನರು ತಮಗೆ ಸಂಬಂಧವೇ ಇಲ್ಲವಂತೆ ರಸ್ತೆಗಿಳಿದು ಓಡಾಡುವ ಮೂಲಕ ಕೊರೋನಾ ಹರಡುವ ಸದಸ್ಯರಂತೆ ವರ್ತಿಸುತಿದ್ದಾರೆ. ಇವರನ್ನ ನಿಯಂತ್ರಿಸಲು ನಮ್ಮ ರಾಜ್ಯದ ಪೊಲೀಸರ ಶ್ರಮ ನಿಜವಾಗಿಯೂ ಶ್ಲಾಘನೀಯ.


ಇಂದು ಉತ್ತರ ಕನ್ನಡ ಸಂಪೂರ್ಣ ಬಂದ್ ಆಗುವ ಜೊತೆ ಭಟ್ಕಳದಲ್ಲಿ ಹಬ್ಬಿರುವ ಕೊರೋನಾ ಇಡೀ ಜಿಲ್ಲೆಗೆ ಹರಡದಂತೆ ನಿಯಂತ್ರಣ ತರುವಲ್ಲಿ ಜಿಲ್ಲಾಡಳಿತದ ಶ್ರಮಕ್ಕೆ ಬೆಲೆ ಕಟ್ಟಲಾಗದು.ತಮ್ಮ ಜೀವವನ್ನೇ ಒತ್ತೆಯಿಟ್ಟು ಜನರ ಜೀವಕ್ಕಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ.ಇನ್ನು ಜಿಲ್ಲೆಯಲ್ಲಿ ಪೊಲೀಸರ ಶ್ರಮ ಕ್ಕೆ ಬೆಲೆ ಕಟ್ಟಲಾಗದು.ಹೌದು ಇಂದಿನವರೆಗೂ ಸಮಾದಾನದಿಂದ ತಪ್ಪು ಮಾಡುವ ಜನರನ್ನು ಸಹಿಸಿಕೊಂಡು ಬುದ್ದಿ ಹೇಳಿ ಕಳುಹಿಸುತಿದ್ದ ಪೊಲೀಸರು.ಬೀದಿಯಲ್ಲಿ ಪ್ಲಕ್ಸ್ ಹಿಡಿದು ಜನರಲ್ಲಿ ಜಾಗೃತಿ ಮೂಡಿಸುತಿದ್ದಾರೆ.

ಕಾರವಾರ ನಗರದ ಪೊಲೀಸರು ಕೊರೋನಾ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲೇ ಇರುವಂತೆ ಪ್ಲಕ್ಸ್ ಹಿಡಿದು ಇಡೀ ಕಾರವಾರ ನಗರದಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ಕೊರೋನಾ ವಿರುದ್ಧ ಜಾಗೃತಿ ಮೂಡಿಸಿದರು.

ಕರ್ತವ್ಯದಲ್ಲಿ ಮನೆಗೆ ತೆರಳಿ ಮಕ್ಕಳನ್ನು ಮುದ್ದಿಸಲಾಗದ ಪೊಲೀಸರು.

ಕೊರೋನಾ ಹರಡದಂತೆ ತಡೆಯಲು,ಜನರನ್ನು ಗುಂಪು ಸೇರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸುವ ಹೊಣೆ ಪೊಲೀಸರದ್ದು. ಇಂತಹವಸ್ಥಿತಿಯಲ್ಲಿ ಕಳೆದ ಆರೇಳು ದಿನದಿಂದ ಪೊಲೀಸರು ಮನೆಯಿಂದ ಬೇರ್ಪಟ್ಟು ಜನರ ನೆಮ್ಮದಿಗಾಗಿ ಕಾರ್ಯ ನಿರ್ವಹಿಸುತಿದ್ದಾರೆ.ಹಲವು ಪೊಲೀಸರು ತಮ್ಮ ಮನೆಯ ಮುಂದೆ ಬಂದರೂ ಮಕ್ಕಳನ್ನು ಮುಟ್ಟಿ ಮಾತನಾಡಿಸಲಾಗುತಿಲ್ಲ,ತಮ್ಮ ಕುಟುಂಬಕ್ಕೆ ತಗಲದಿರಲಿ ಎಂದು ಕುಟುಂಬದಿಂದ ಪ್ರತ್ತೇಕವಾಗಿಯೇ ವಾಸಿಸುವಂತ ಪೊಲೀಸರ ನೋವಿನ ಕಥೆ ಇದು. ಹೌದು ಭಟ್ಕಳದಲ್ಲಿ ಕೊರೋನಾ ಸಂಖ್ಯೆ ದೊಡ್ಡದಿದೆ. ಇದೇ ವಿಭಾಗಕ್ಕೆ ಹೊಂದಿಕೊಂಡಿರುವ ಹೊನ್ನಾವರ ತಾಲೂಕು.ಹೊನ್ನಾವರದ ಪಿ.ಎಸ್.ಐ ಶಶಿಕುಮಾರ್ ಜಿಲ್ಲೆಯಲ್ಲಿ ಸೊಂಕು ಕಾಣಿಸಿಕೊಂಡಾಗಿನಿಂದ ಭಟ್ಕಳ ,ಹೊನ್ನಾವರ ಭಾಗದಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ.

ಕುಮಟಾ ಪುರಸಭೆ ಪ್ರಕಟಣೆ ವೀಡಿಯೋ ನೋಡಿ.

ಕರ್ತವ್ಯ ಮುಗಿದ ನಂತರ ಅವರು ಮನೆಗೆ ತೆರಳುತಿಲ್ಲ. ಮನೆಯ ಸಲ್ಪ ದೂರದಲ್ಲಿ ಪ್ರತ್ತೇಕವಾಗಿ ವಾಸಿಸುತಿದ್ದು ಪ್ರತಿ ದಿನ ಕರ್ತವ್ಯಕ್ಕೆ ಹೋಗುವ ಮುಂಚೆ ಮನೆಯ ಮುಂದೆ ಬರುವ ಮೂಲಕ ತಮ್ಮ ಮಕ್ಕಳನ್ನು ಕಣ್ತುಂಬಿಕೊಂಡು ಹೋಗುತಿದ್ದು ಎಂತವರ ಹೃದಯವನ್ನೂ ಹಿಂಡುವಂತೆ ಮಾಡಿದೆ.ಇದು ಅವರೊಬ್ಬರ ಸ್ಥಿಯಲ್ಲ. ಭಟ್ಕಳ ಸೇರಿದಂತೆ ಜಿಲ್ಲೆಯ ಬಹುತೇಕ ಪೊಲೀಸರ ಪರಿಸ್ಥಿತಿ ಇದೇ ರೀತಿಯದ್ದಾಗಿದ್ದು ವೈದ್ಯರ ಸ್ಥಿತಿಯೂ ಇದಕ್ಕಿಂತ ಬಿನ್ನವಾಗಿಲ್ಲ.

ಮನೆಯಿಂದ ಹೊರಬರುತ್ತಿರುವವರಿಗೆ ದಂಡ!

ಕಾರವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಮನೆಯಿಂದ ಹೊರ ಬರುತ್ತಿರುವ ಜನರ ವಾಹನಗಳನ್ನು ಪೊಲೀಸರು ತಡೆದು ಕೇಸ್ ದಾಖಲು ಮಾಡುತಿದ್ದಾರೆ. ಕೆಲವು ಭಾಗದಲ್ಲಿ ವಾಹನವನ್ನು ಸೀಜ್ ಮಾಡಲಾಗಿದೆ.

ಪೊಲೀಸರಿಂದ ಸಹಾಯ

ಭಟ್ಕಳ ಸೇರಿದಂತೆ ಕರಾವಳಿ ಭಾಗದ ಪೊಲೀಸರು ನಿರ್ಗತಿಕ ರಿಗೆ ಅನ್ನಾಹಾರ ನೀಡುವ ಮೂಲಕ ಸೇವೆ ನೀಡುತಿದ್ದಾರೆ.ಭಟ್ಕಳ ದಲ್ಲಿ ಪೊಲೀಸರು ಬಿಕ್ಷುಕರಿಗೆ ಆಹಾರ ನೀಡಿ ಹಸಿವು ನೀಗಿಸಿದರೆ ಕರಾವಳಿ ಭಾಗದಲ್ಲಿನ ಪೊಲೀಸರು ತೊಂದರೆಗೆ ಸಿಲುಕಿದವರಿಗೆ ಸಹಾಯ ದಾತರಾಗಿದ್ದು ಜಿಲ್ಲೆಯಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ