BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಸದ್ಯಕ್ಕಿಲ್ಲ! ಜನರ ಮೂಗಿಗೆ ತುಪ್ಪ ವರೆಸಿದ ರಾಜ್ಯ ಸರ್ಕಾರ!

1045

ಕಾರವಾರ :- ಕರೋನಾ ಸೊಂಕಿತರ ಸಂಖ್ಯೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದಂತೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದ್ದು ಪಟ್ಟಿ ಸಹ ಬಿಡುಗಡೆ ಮಾಡಿದೆ.

ಆದ್ರೆ ಪಟ್ಟಿಯಲ್ಲಿ ಬಿಡುಗಡೆಯಾದ ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಯಾವುದೇ ವ್ಯವಸ್ಥೆ ಸಹ ಇಲ್ಲ‌.ಇನ್ನು ಕೆಲವು ಆಸ್ಪತ್ರೆಗೆ ಮಾಹಿತಿ ಸಹ ನೀಡಿಲ್ಲ. ಜಿಲ್ಲೆಯಲ್ಲಿ ನಿಗದಿ ಮಾಡಿದ ಕೋವಿಡ್ ಚಿಕಿತ್ಸಾ ಖಾಸಗಿ ಆಸ್ಪತ್ರೆ ಸ್ಥಿತಿ ಹೇಗಿದೆ ಇಲ್ಲಿದೆ ರಿಯಾಲಿಟಿ ವರದಿ.

ಉತ್ತರ ಕನ್ನಡ ಜಿಲ್ಲೆಯಲ್ಲಿ 14 ಖಾಸಗಿ ಆಸ್ಪತ್ರೆಗಳ ಪಟ್ಟಿ ಮಾಡಿದ್ದು ಈ ಆಸ್ಪತ್ರೆಗಳಲ್ಲಿ ಕೋವಿಡ್-೧೯ ಚಿಕಿತ್ಸೆ ಪಡೆಯಬಹುದು ಎಂದು ರಾಜ್ಯಸರ್ಕಾರದ ಪಟ್ಟಿ ಬಿಡುಗಡೆ ಮಾಡಿದೆ.

ಜಿಲ್ಲೆಯ ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್, ಡಾ.ಜಾನು ಮಣಕೀಕರ್ಸ್ ಮೆಟರ್ನಿಟಿ ಆ್ಯಂಡ್ ನರ್ಸಿಂಗ್ ಹೋಮ್, ಅಚ್ಯುತ್ ಪಂಡಿತ್ ಹಾಸ್ಪಿಟಲ್, ರಾಮಲೀಲಾ ಹಾಸ್ಪಿಟಲ್, ಹೈಟೆಕ್ ಲೈಫ್ ಲೈನ್, ಹೊನ್ನಾವರದ ಶ್ರೀದೇವಿ ನರ್ಸಿಂಗ್ ಹೋಮ್, ಸೇಂಟ್ ಇಗ್ನೇಷಿಯಸ್ ಹಾಸ್ಪಿಟಲ್, ಡಾ.ವಿ.ಕೆ.ಬಿ ಬಳ್ಕೂರ್ ಮೆಮೋರಿಯಲ್ ಹಾಸ್ಪಿಟಲ್, ಶಿರಸಿಯ ವಿಶ್ವ ಸೇವಾ ಸಮಿತಿ ರೋಟರಿ ಚಾರಿಟೇಬಲ್ ಆಸ್ಪತ್ರೆ, ಟಿ.ಎಸ್.ಎಸ್ ಆಸ್ಪತ್ರೆ, ಕಾರವಾರದ ಶೆಟ್ಟಿ ಕಣ್ಣಿನ ಆಸ್ಪತ್ರೆ, ಮುರುಡೇಶ್ವರದ ಆರ್.ಎನ್.ಎಸ್. ಹಾಸ್ಪಿಟಲ್, ಯಲ್ಲಾಪುರದ ಸಾಯಿ ನೇತ್ರಾಲಯದಲ್ಲಿ ಕೋವಿಡ್- 19 ಚಿಕಿತ್ಸೆಗೆ ರಾಜ್ಯ ಸರ್ಕಾರದಿಂದ ಪಟ್ಟಿ ಮಾಡಿದ ಆಸ್ಪತ್ರೆಗಳಾಗಿವೆ.

ಆಸ್ಪತ್ರೆಗಳಲ್ಲಿ ಸಿಗುತ್ತಾ ಕೋವಿಡ್ ಗೆ ಚಿಕಿತ್ಸೆ!

ಇನ್ನು ಈ ಬಗ್ಗೆ ರಿಯಾಲಿಟಿ ಚಕ್ ಮಾಡಿದ್ದು ಜಿಲ್ಲೆಯ ಜನರಿಗೆ ಶಾಕ್ ನೀಡದೆ!

ಹೌದು ನಾವು ಈ ಆಸ್ಪತ್ರೆಗಳ ಬಗ್ಗೆ ರಿಯಾಲಿಟಿ ಚಕ್ ಮಾಡಿದ್ದು ಅದರ ವಿವರ ಹೀಗಿದೆ ನೋಡಿ.

ರಾಜ್ಯ ಸರ್ಕಾರ ದ ಪಟ್ಟಿಯಲ್ಲಿರುವ ಶಿರಸಿಯ ಟಿ.ಎಸ್ ಎಸ್ ಆಸ್ಪತ್ರೆಯಲ್ಲಿ ಕರೋನಾ ಸೊಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಬದಲಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸುವ ಜೊತೆಗೆ ಯಾವುದೇ ತಯಾರಿಯನ್ನು ಸದ್ಯಕ್ಕೆ ಮಾಡಿಕೊಂಡಿಲ್ಲ‌ .

ಇದಲ್ಲದೇ ತಾಲೂಕು ಆರೋಗ್ಯ ಅಧಿಕಾರಿಯಿಂದ ತಿಳಿಸಿದರೆ ಮಾತ್ರ ಅವಕಾಶ ವಿದ್ದು ಬೇರೆ ತಾಲೂಕಿನ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಾರೆ.ಇಲ್ಲಿ ಕೂಡ ವೆಂಟಿಲೇಷನ್ ವ್ಯವಸ್ಥೆಗಳಿಲ್ಲ.

ವಾರ್ಡ ಗೆ ಐಸೋಲೇಶನ್ ಬೋರ್ಡ ಹಾಕಿ ಇಟ್ಟಿದೆ,ಮ್ಯಾನೇಜ್ಮೆಂಟ್ ಜೊತೆ ಮಾತನಾಡಿಕೊಂಡು ತಿಳಿಸುತ್ತೇವೆ. ಪ್ರವೇಟ್ ಆಸ್ಪತ್ರೆಗಿಂತ ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ,ಅಲ್ಲೇ ಸೆಕ್ಯುರ್ ಆಗಿದೆ.ಸರ್ಕಾರಿ ಆಸ್ಪತ್ರೆಯವರು ಎಲ್ಲಾ ರೀತಿಯಿಂದ ರೆಡಿ ಇದ್ದಾರೆ.ಗೋರ್ನಮೆಂಟ್ ನಲ್ಲಿ ಕಾಲಿ ಇದ್ದಾಗ ಇಲ್ಲಿಗೆ ಕಳುಹಿಸುವುದಿಲ್ಲ ಎಂಬುದು ಅಲ್ಲಿನ ಸಿಬ್ಬಂದಿಗಳ ಮಾತು.

ಇನ್ನು ಶಿರಸಿಯ ರೋಟರಿ ಆಸ್ಪತ್ರೆಯಲ್ಲಿ ಸದ್ಯ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ.
ಇನ್ನು ಕುಮಟಾದ ಕೆನರಾ ಹೆಲ್ತ್ ಕೇರ್ ನಲ್ಲಿ ಹತ್ತು ಬೆಡ್ ಗಳನ್ನು ಕಾಯ್ದಿರಿಸಲಾಗಿದೆ.ಆದರೇ ವೆಂಟಿಲೇಟರ್ ವ್ಯವಸ್ಥೆ ಇಲ್ಲ , ಮುರಡೇಶ್ವರದ ಆರ್.ಎನ್ .ಎಸ್ ಹಾಸ್ಪೆಟಲ್ ನಲ್ಲಿ ಈಗಾಲೇ ಕ್ವಾರಂಟೈನ್ ಇರುವ ವ್ಯಕ್ತಿಗಳು ಇಲ್ಲಿದ್ದಾರೆ‌.ಇಡೀ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಸಿದ್ದಗೊಂಡಿದೆ.ಹೊನ್ನಾವರದ ಶ್ರೀದೇವಿ ನರ್ಸಿಂಗ್ ಹೋಮ್ ನಲ್ಲಿ ಕೊಟ್ಟಿರುವ ನಂಬರ್ ಅನ್ನು ರಿಸೀವ್ ಮಾಡುತಿಲ್ಲ. ಇವರಂತೆಯೇ ಕುಮಟಾದ
ಡಾ.ಜಾನು ಮಣಕೀಕರ್ಸ್ ಮೆಟರ್ನಿಟಿ ಆ್ಯಂಡ್ ನರ್ಸಿಂಗ್ ಹೋಮ್, ಅಚ್ಯುತ್ ಪಂಡಿತ್ ಹಾಸ್ಪಿಟಲ್, ರಾಮಲೀಲಾ ಹಾಸ್ಪಿಟಲ್, ಹೈಟೆಕ್ ಲೈಫ್ ಲೈನ್ ಆಸ್ಪತ್ರೆಯವರು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ.

ಇನ್ನು ಕಾರವಾರದ ಶಟ್ಟಿ ಕಣ್ಣಿನ ಆಸ್ಪತ್ರೆಯಲ್ಲಿ ವೆಂಟಿಲೇಶನ್ ಹಾಗೂ ಜಾಗದ ಕೊರತೆ ಇದೆ. ಕಣ್ಣಿನ ಆಸ್ಪತ್ರೆಯಾಗಿದ್ದರಿಂದ ಕರೋನಾ ಚಿಕಿತ್ಸೆಗೆ ನುರಿತ ತಜ್ಞರು ಇಲ್ಲಿಲ್ಲ. ಇನ್ನು ಕಣ್ಣಿನ ಆಸ್ಪತ್ರೆ ಹಾಗೂ ಡೆಂಟಲ್ ಕ್ಲೀನಿಕ್ ಅನ್ನು ಪಟ್ಟಿಯಿಂದ ಕೈಬಿಡುವಂತೆ ಆರೋಗ್ಯ ಸಚಿವರಿಗೆ ಮನವಿ ಕೂಡ ಸಲ್ಲಿಸಲಾಗಿದ್ದು ಇದಕ್ಕೆ ಆದೇಶವಾಗುವ ಸಾಧ್ಯತೆಗಳಿವೆ.

ಕೋವಿಡ್ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ಸಮಸ್ಯೆಗಳೇನು?

ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳಾದ ಯಶಸ್ವಿನಿ ಸೆರಿದಂತೆ ವಿವಿಧ ಸರ್ಕಾರಿ ಯೋಜೆನೆಗಳನ್ನು ಅಳವಡಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆ ನೀಡಲು ಅಲ್ಲಿನ ಮೂಲಸೌಕರ್ಯದ ಕುರಿತು ಯೋಚಿಸದೇ ಸರ್ಕಾರದ ಯೋಜನೆಗಳಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದೆ.

ಆದರೇ ಬಹುತೇಕ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಸದ್ಯಕ್ಕೆ ವ್ಯವಸ್ಥೆಗಳೇ ಇಲ್ಲ. ಪ್ರತ್ತೇಕ ವಾರ್ಡ ,ಐಸೋಲೇಷನ್ ವಾರ್ಡ ,ತಜ್ಞ ವೈದ್ಯರು, ಆಸ್ಪತ್ರೆಗಳಲ್ಲಿ ಸ್ಥಳದ ವ್ಯವಸ್ಥೆಗಳ ಸಮಸ್ಯೆಗಳಿವೆ.

ಇನ್ನು ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳು ಜನರಿಗೆ ಚಿಕಿತ್ಸೆ ನೀಡಲು ಸಿದ್ದವಿದೆ.ಆದರೇ ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ಹಲವು ಖಾಸಗಿ ವೈದ್ಯರ ಅಭಿಪ್ರಾಯ.

ಆದರೇ ಇನ್ನು ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಕೂಡ ಹೆದರುತಿದ್ದು ಮಾಹಿತಿ ಕೇಳುವ ಜನರನ್ನು ಒಂದಲ್ಲಾ ಒಂದು ಕಾರಣ ಹೇಳಿ ಸಾಗುಹಾಕುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯದ ಮಟ್ಟಿಗೆ ಯಾವುದೇ ವ್ಯವಸ್ಥೆ ಈವರೆಗೆ ಮಾಡಿಕೊಂಡಿಲ್ಲ.

ಸದ್ಯ ಸರ್ಕಾರದಿಂದ ಆದೇಶ ಪ್ರತಿ ಬಂದಿದ್ದು ಎಲ್ಲಾ ತಾಲೂಕಿನಲ್ಲೂ ಖಾಸಗಿ ಆಸ್ಪತ್ರೆಯ ವೈದ್ಯರ ಸಭೆ ನಡೆಸಿ ಮಾಹಿತಿ ಪಡೆದು ವ್ಯವಸ್ಥೆ ಕಲ್ಪಿಸಲಾಗುತ್ತದೆ.ಕೋವಿಡ್ ಬಗ್ಗೆ ಈಗಾಗಲೇ ವೈದ್ಯರಿಗೆ ಮಾಹಿತಿಗಳನ್ನು ನೀಡಲಾಗಿದೆ. ಯಾವುದೇ ಸಮಸ್ಯೆ ಇದ್ದರೂ ಶೀಘ್ರ ಬಗೆಹರಿಸಲಾಗುವುದು ಎಂದು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ರವರು ಹೇಳುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಕರೋನಾ ಸೊಂಕಿತರಿಗೆ ಚಿಕಿತ್ಸೆ ಸದ್ಯಕ್ಕಂತು ದೊರೆಯುವುದಿಲ್ಲ.ಖಾಸಗಿ ಆಸ್ಪತ್ರೆಗಳು ಒಂದಲ್ಲಾ ಒಂದು ನೆಪ ಹೇಳಿ ಸರ್ಕಾರಿ ಆಸ್ಪತ್ರೆಗೆ ದೂಡುತಿದ್ದು ರಿಸ್ಕ್ ತೆಗೆದುಕೊಳ್ಳುತ್ತಿಲ್ಲ.ಜಿಲ್ಲೆಯ ಯಾವ ಖಾಸಗಿ ಆಸ್ಪತ್ರೆಯಲ್ಲೂ ವೆಂಟಿಲೇಷನ್ ಹಾಗೂ ಪ್ರತ್ತೇಕ ಕೋವಿಡ್ ವಾರ್ಡ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಆದರೂ ಜಿಲ್ಲೆಯಲ್ಲಿ ಸರ್ಕಾರಿ ಕೋವಿಡ್ ಚಿಕಿತ್ಸಾ ವಾರ್ಡ ಗಳು ಕಾಲಿ ಇರುವುದರಿಂದ ಜನ ನೆಮ್ಮದಿಯ ಉಸಿರು ಬಿಡಬಹುದಾಗಿದೆ.

ಆದರೂ ಖಾಸಗಿ ವಲಯದಲ್ಲಿ ಇಷ್ಟೆಲ್ಲಾ ನ್ಯೂನ್ಯತೆ ಇದ್ದರೂ ಸರ್ಕಾರ ಮಾತ್ರ ಜನರ ಕಣ್ಣೊರೆಸಲು ಖಾಸಗಿ ಆಸ್ಪತ್ರೆಯ ಪಟ್ಟಿ ಬಿಡುಗಡೆ ಮಾಡಿ ಜನರಿಗೆ ಮಂಕುಬೂದಿ ಎರಚಲು ಹೊರಟಿದ್ದು ಮಾತ್ರ ದುರಂತ.

ಓದುಗರ ಗಮನಕ್ಕೆ:- ಈ ಸುದ್ದಿ ಸಂಬಂದ ಜಿಲ್ಲೆಯ ಸರ್ಕಾರ ನಿಗದಿ ಮಾಡಿದ 14 ಖಾಸಗಿ ಆಸ್ಪತ್ರೆಗಳನ್ನು ಸಂದರ್ಶಿಸಿ ಜೊತೆಗೆ ದಾಖಲೆಗಳೊಂದಿಗೆ ವರದಿ ಸಿದ್ದಪಡಿಸಿದೆ.

…..ಸಂಪಾದಕರು.ಕನ್ನಡವಾಣಿ.ನ್ಯೂಸ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ