BREAKING NEWS
Search

ಉತ್ತರ ಕನ್ನಡ:ಮಳೆ ತಂದ ಆಪತ್ತು ಎಲ್ಲಿ ಏನು!

656

ಕಾರವಾರ:- ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡು ಸಮುದ್ರದಲ್ಲಿ ಕ್ಯೂರಿ ಚಂಡಮಾರುತ ತನ್ನ ಅಬ್ಬರ ಮೆರೆದಿದ್ದಾನೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜನ ಅಕ್ಷರಶಃ ಭಯಪಡುವಂತೆ ಮಾಡಿತ್ತು.

ಕಾರವಾರದ ಹಾನಿಯ ದೃಶ್ಯ

ದೇವಭಾಗ್
ಬೈತಖೋಲ್ ಬಂದರಿನಲ್ಲಿ ಮೀನಿನ ಲಾರಿಗಳು ನಿಂತಿರುವುದು
ಕಾಳಿ ಬ್ರಿಡ್ಜ್ ಬಳಿ
ಕಾರವಾರ ಬಂದರು

ಸಮುದ್ರದಲ್ಲಿ ಮುಂಜಾನೆಯಿಂದ ಅಬ್ಬರ ಪ್ರಾರಂಭವಾಗಿದ್ರೆ ಆಕಾಶದಲ್ಲಿ ಕರಿ ಕಟ್ಟಿದ ಮೋಡ ಬಿರುಗಾಳಿ ಸಹಿತ ಅಬ್ಬರದ ಮಳೆ ಸುರಿಸುತಿತ್ತು.

ಕಾರವಾರ,ಅಂಕೋಲ, ಕುಮಟಾ,ಹೊನ್ನಾವರ, ಭಟ್ಕಳ ಭಾಗದ ಕಡಲ ತಡದಲ್ಲಿ ಸಮುದ್ರ ರುದ್ರ ನರ್ತನ ಗೈದಿದೆ.

ಅಂಕೋಲ ಭಾಗದ ಹಾನಿ ದೃಶ್ಯ

ಸಮುದ್ರದ ಅಲೆಯ ಹೊಡೆತಕ್ಕೆ ಕಾರವಾರದ ಸದಾಶಿವ ಗಡ ಭಾಗದ ಕಡಲ ಪ್ರದೇಶ,ಕಾಳಿ ಬಿಡ್ಜ್,ಬೈತಕೋಲ್ ಬಂದರು,ಮಾಜಾಳಿ ಅಂಕೋಲ ಭಾಗದ ಕೇಣಿ,ಗಾವ್ಕರ್ ವಾಡ,ಬೆಳಂಬರ್ ,ಕುಮಟಾ ಭಾಗದ ಗೋಕರ್ಣ ,ತದಡಿ,ಅಘನಾಶಿನಿ ನದಿ ತಡದ ಪ್ರದೇಶ ಹೊನ್ನಾವರದ ಕಡಲ ಪ್ರದೇಶಗಳ ಸುತ್ತಮುತ್ತ ಸಮುದ್ರದ ನೀರು ಮನೆಗಳಿಗೆ ನುಗ್ಗಿವೆ.

ಕರಾವಳಿ ಭಾಗದ ಮಳೆಯ ವೀಡಿಯೋ ನೋಡಿ:-


https://youtu.be/BvC-aHdOses

http:// https://youtu.be/BvC-aHdOses

ಇನ್ನು ಮಳೆ ಗಾಳಿಯಿಂದ ಕಾರವಾರ,ಕುಮಟಾ,ಹೊನ್ನಾವರ, ಗೋಕರ್ಣ ಭಾಗದ ಹಲವು ಪ್ರದೇಶಗಳಲ್ಲಿ ಮರಗಳು,ವಿದ್ಯುತ್ ಕಂಬ,ಹಾಗೂ ಮನೆಗಳು ಸಹ ಮುರಿದು ಬಿದ್ದಿವೆ.

ವಿದ್ಯುತ್ ವ್ಯತ್ಯಯ!
ಕರಾವಳಿ ಭಾಗದಲ್ಲಿ ಮಳೆ ಗಾಳಿ ಅಧಿಕವಾಗಿದ್ದು ಹಲವು ಭಾಗದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.ಹೀಗಾಗಿ ಕಾರವಾರ,ಗೋಕರ್ಣ, ಅಂಕೋಲ, ಕುಮಟಾ ಭಾಗದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

ಗಂಜಿ ಕೇಂದ್ರ ತೆರೆದ ಜಿಲ್ಲಾಡಳಿತ!
ಕರಾವಳಿಯ 11 ಪ್ರದೇಶದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಹೊನ್ನಾವರ- 1
ಕುಮಟಾ- 3
ಅಂಕೋಲ- 6
ಕಾರವಾರ- 1

ಕದ್ರಾ ಡ್ಯಾಮ್ ನಿಂದ ನೀರು ಬಿಡುಗಡೆ

ಡ್ಯಾಮ್ ನಲ್ಲಿ ನೀರು ಬಿಟ್ಟಿರುವುದು

ಕುಮಟಾ ಭಾಗದ ದೃಶ್ಯ ಗಳು

ಕುಮಟಾ ಶಾಸಕ ದಿನಕರ್ ಶಟ್ಟಿ ರವರಿಂದ ಮರ ತೆರವು ಮಾಡುತ್ತಿರುವುದು

ಕರಾವಳಿ ,ಮಲೆನಾಡಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿರುವ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯದಿಂದ
31 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಕ್ಕೆ ಬಿಡಲಾಗಿದೆ.ಇಂದು ಮಧ್ಯಾನದ ವೇಳೆ ಮೂರು ಗೇಟ್ ತೆರೆದು ನೀರು ಬಿಡಲಾಗಿದ್ದು ನಾಳೆ ಕೂಡ ಹೆಚ್ಚಿನ ಮಳೆಯಾದಲ್ಲಿ ನೀರನ್ನು ಬಿಡಲಾಗುವುದೆಂದು ಜಲಾಶಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೇರುಸೊಪ್ಪ ಡ್ಯಾಮ್ ನಲ್ಲಿ ನೀರು ಬಿಡುಗಡೆ

ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಗೇರುಸೊಪ್ಪ ಡ್ಯಾಮ್ ನಲ್ಲಿ ಇಂದು 35000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು ಇನ್ನು ಕೆಲವೇ ಗಂಟೆಗಳಲ್ಲಿ 45 ಸಾವಿರ ಕ್ಯೂಸೆಕ್ಸಗೆ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳಿಗೆ ರಜೆ ರದ್ದು!

ಆದೇಶ ಪ್ರತಿ


ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ದೀಪಾವಳಿಯಂದು ರಜೆಯನ್ನು ರದ್ದುಮಾಡಿ ಆದೇಶ ಹೊರಡಿಸಿದೆ.

ಇದೇ ತಿಂಗಳು 23 ರಂದು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ವೀಡಿಯೋ ಕಾನ್ಫರೆನ್ಸ್ ಮಾಡಿದ್ದು ಈ ಮೂಲಕ ಆದೇಶ ಹೊರಡಿಸಿದ್ದು ತುರ್ತು ಸಂದರ್ಭದಲ್ಲಿ ಮಾತ್ರ ರಜೆ ತೆಗೆದುಕೊಳ್ಳಲು ವಿನಾಯಿತಿ ನೀಡಿದ್ದು ಎಲ್ಲಾ ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚಿಸಿದೆ.
Leave a Reply

Your email address will not be published. Required fields are marked *