BREAKING NEWS
Search

ರಾಜಕೀಯ ಪಕ್ಕ ಅಲ್ಲ!ನಾನು ಪಕ್ಷದಲ್ಲೇ ಇರಬೇಕೂ ಎಂದೇನಿಲ್ಲ-ಮಾಜಿ ಶಾಸಕ ಸತೀಶ್ ಸೈಲ್ ಪಕ್ಷ ಬಿಡುವ ಬಗ್ಗೆ ಹೇಳಿದ್ದೇಕೆ?

475

ಕಾರವಾರ :- ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ತಾರೆ ಎಂಬ ಮಾತುಗಳು ಕೇಳಿ ಬರುತಿತ್ತು.ಆದರೇ ಇಂದು ಅದನ್ನು ಅಧಿಕೃತವಾಗಿ ಮಾಧ್ಯಮವೊಂದರ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

ನಾನು ಗೆದ್ದಿದ್ದು ಕಾಂಗ್ರೆಸ್ ಪಕ್ಷದಿಂದ ಅಲ್ಲ ,ಪಕ್ಷೇತರನಾಗಿ ರಿಕ್ಷ ಚಿಹ್ನೆಯಲ್ಲಿ ಗೆದ್ದಿದ್ದೇನೆ ,
ರಾಜಕೀಯ ಪಕ್ಕ ಅಲ್ಲ.ಮಾಡುವಷ್ಟು ದಿನ ಮಾಡಬೇಕು ಬಾಕಿ ಟೈಮ್ ನಲ್ಲಿ ಬೇರೆಯವರನ್ನು ಮುಂದೆ ತರಬೇಕು,ನಮ್ಮ ಡಿಶೀಷನ್ ಅನ್ನು ಜನರ ಮುಂದೆ ಹೇಳಬೇಕು ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಕಾರವಾರದ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಪಕ್ಷ ತೊರೆಯುವ ಕುರಿತು ಮಾತನಾಡಿದರು.

ಸಾಗರಮಾಲಾ ಯೋಜನೆ ವಿರೋಧಿ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದ ಅವರು ನಾನು ಕಾರವಾರದ ಸಲವಾಗಿ ಸಮಸ್ತ ಜೀವವನ್ನು ಮುಡಿಪಾಗಿಟ್ಟಿದ್ದೇನೆ, ಪಕ್ಷ ತೊರೆಯುವ ಕುರಿತು ನಾನು ನನ್ನ ನಿರ್ಣಯ ನಾನು ತೆಗೆದುಕೊಳ್ಳುತ್ತೇನೆ
ಪಕ್ಷದಲ್ಲಿ ಇರಲಿ ಹೊರಗಿರಲಿ ನನ್ನ ಕೆಲಸ ಮಾಡುತ್ತೇನೆ ,ನಾನು ಪಕ್ಷದಲ್ಲೇ ಇರಬೇಕು ಎಂದೇನೂ ಇಲ್ಲ ಎಂದ ಅವರು ಈ ಕುರಿತು
ನಮ್ಮ ಡಿಶೀಷನ್ ಅನ್ನು ಜನರ ಮುಂದೆ ಹೇಳಬೇಕು ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಪಕ್ಷ ತೊರೆಯುವ ಕುರಿತು ಹೇಳಿದರು.

ಸಾಗರಮಾಲ ಯೋಜನೆ ಸತೀಶ್ ಸೈಲ್ ಅವಧಿಯಲ್ಲಿ ಬಂದಿದ್ದಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದು ಹೀಗೆ:-

ಸತೀಶ್ ಸೈಲ್ ಅವಧಿಯಲ್ಲಿ ಸಾಗರಮಾಲಾ ಯೋಜನೆಗೆ ಸಿದ್ದರಾಮಯ್ಯನವರು ಶಿಲಾನ್ಯಾಸಕ್ಕೆ ಬಂದಾಗಿನ ಆಹ್ವಾನ ಪತ್ರಿಕೆ.

ನಾನು ಮೀನುಗಾರರ ಪರವಾಗಿ ಇದ್ದೇನೆ.
ಯಾರೋದ್ರು ಊಹಾ ಪೋಹದಿಂದ ಹೇಳಿದರೇ ಆ ದೇವರು ನನ್ನನ್ನು ನೋಡಿಕೊಳ್ಳುತ್ತಾನೆ,
ನಾನು ಏನಾದ್ರು ಮೀನುಗಾರರ ಸಮಸ್ಯೆಗೆ ಸ್ಪಂದಿಸದಿದ್ರೆ ಆ ದೇವರು ನನ್ನ ನೋಡಿಕೊಳ್ಳುತ್ತಾನೆ,ಯೋಜನೆಬಗ್ಗೆ ಸಾಧಕ ಬಾಧಕದ ಮಾಹಿತಿ ನೀಡದೇ ಯೋಜನೆ ಅನುಷ್ಟಾನ ಮಾಡುವುದು ತಪ್ಪು.
ಸಿದ್ದರಾಮಯ್ಯನವರ ಕಾಲದಲ್ಲಿ ಶಿಲನ್ಯಾಸ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ,
ಯೋಜನೆ ಬಂದಾಗ ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು ಎಂಬುದು ಎಲ್ಲರಿಗೂ ತಿಳಿದಿದೆ.

ಯೋಜನೆ ಬಂದಾಗಲೇ ಇದರ ಬಗ್ಗೆ ಮೀನುಗಾರ ಮುಖಂಡರೊಂದಿಗೆ ಸಮರ್ಪಕವಾಗಿ ಹೇಳಿ ಮಾಹಿತಿ ಕೊಟ್ಟಿದ್ದೇನೆ. ನಿನ್ನೆ ಜಿಲ್ಲಾಧಿಕಾರಿಗಳಿಗೂ ಸಂಪರ್ಕ ಮಾಡಿ ಮೀನುಗಾರರಿಗೆ ತೊಂದರೆ ಯಾಗುವ ಬಗ್ಗೆ ಹೇಳಲು ಕಾಲ್ ಮಾಡಿದ್ದೆ ಆದರೆ ಅವರು ಸಿಗಲಿಲ್ಲ.

ಮೀನುಗಾರ ಪರವಾಗಿ ಇರುತ್ತೇನೆ,ರಾಜಕೀಯದಲ್ಲಿ ಇಲ್ಲದಿದ್ದರೂ ಮೀನುಗಾರರ ಪರವಾಗಿ ಇರುತ್ತೇನೆ.ನಾನು ಕಾರವಾರದ ಸಲವಾಗಿ ಸಮಸ್ತ ಜೀವವನ್ನು ಮುಡಿಪಾಗಿಟ್ಟಿದ್ದೇನೆ.ನಾನು ಪಕ್ಷದಲ್ಲಿ ಇರಲಿ ಹೊರಗಿರಲಿ ನನ್ನ ಕೆಲಸ ಮಾಡುತ್ತೇನೆ ,ನಾನು ಪಕ್ಷದಲ್ಲೇ ಇರಬೇಕು ಎಂದೇನೂ ಇಲ್ಲ.
ಎಂದು ಹೇಳಿದ್ದು ತಪ್ಪು ಮಾಡಿದರೆ ದೇವರಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Leave a Reply

Your email address will not be published. Required fields are marked *