BREAKING NEWS
Search

ಬಿಜೆಪಿ ಕಾರ್ಯಕರ್ತರಿಂದ ಕಾಗೇರಿಗೆ ಗೆರಾವ್!ಸ್ವ ಪಕ್ಷದವರೇ ಗೆರಾವ್ ಹಾಕಿ ಅಕ್ರೋಶ ತೊರಿದ್ದೇಕೆ ಗೊತ್ತಾ!

651

ಕಾರವಾರ :-ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಕಾರ್ಯಕರ್ತರಿಂದ ಗೆರಾವ್ ಹಾಕಿ ತರಾಟೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರದಲ್ಲಿ ಕಾಂಕ್ರೇಟ್ ರಸ್ತೆಯ ಶಂಕುಸ್ಥಾಪನೆ ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಬಿಜೆಪಿ ಕಾರ್ಯಕರ್ತರು ಕಾಗೇರಿ ರವರಿಗೆ ಮುತ್ತಿಗೆ ಹಾಕಿ ಅಸಮಾಧಾನ ತೋಡಿಕೊಂಡರು.


ಸಂಘಟನೆಯಿಂದ ದೂರ ಸರಿಯುತ್ತಿರೋ ಸ್ಪೀಕರ್
ಪಕ್ಷದಲ್ಲಿ ನಿಷ್ಠೆಯಿಂದ ದುಡಿದವರಿಗೆ ಬೆಲೆ ಇಲ್ಲ,ಅವರನ್ನು ದೂರುತಿದ್ದೀರಿ,ಅಭಿವೃದ್ಧಿ ಕೆಲಸದಲ್ಲಿ ಕ್ಷೇತ್ರದಿಂದ ಕ್ಷೇತ್ರಕ್ಕೆ ತಾರತಮ್ಯ ಮಾಡುತಿದ್ದೀರಿ ,ಪಕ್ಷಕ್ಕೆ ದುಡಿದವರ ಮೇಲೆ ಇಲ್ಲದ ಆರೋಪ ಹೊರಿಸುತ್ತಿರುವಿರಿ ಎಂದು ಸ್ಪೀಕರ್ ಕಾಗೇರಿರವರಿಗೆ ತರಾಟೆ ತೆಗೆದುಕೊಂಡರು.

ಈವೇಳೆ ಕಾರ್ಯಕರ್ತರ ಮಾತಿಗೆ ಸ್ಪೀಕರ್ ಸಿಟ್ಟಾಗಿದ್ದು
ಇನ್ನೊಂದು ದಿನ ಟೈಮ್ ಕೊಡ್ತೀನಿ, ಮಾತನಾಡೋಣ ಎಂದು ಜಾರಿಕೊಂಡರು.
Leave a Reply

Your email address will not be published. Required fields are marked *