BREAKING NEWS
Search

ತರಕಾರಿ ಬೆಳದ ರೈತರಿಗೆ ಸ್ಪಂದಿಸಿದ ಸಿದ್ದಾಪುರ ತಾಲೂಕು ಆಡಳಿತ-28 ಎಕರೆ ತರಕಾರಿ ಬೆಳದ ರೈತರ ಮುಖದಲ್ಲಿ ಮಂದಹಾಸ

374

ಕಾರವಾರ:- ಲಾಕ್ ಡೌನ್ ಘೋಷಣೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಳ್ ಗೋಡ್ ನಲ್ಲಿ ತರಕಾರಿ ಬೆಳೆಗಾರರು ಬೆಳೆದ ಬೆಳೆ ಗಳಿಗೆ ಮಾರುಕಟ್ಟೆ ಇಲ್ಲದೆ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ
ಸಾರ್ವಜನಿಕರು ಮನೆಯಿಂದ ಹೊರ ಬರಬಾರದು ಎಂಬ ಆದೇಶ ಇರುವುದರಿಂದ ಹಳ್ಳಿಯ ರೈತರು ತಮಗೆ ಯಾವುದೇ ಸೌಲಭ್ಯಗಳಿಲ್ಲದೆ ಇರುವ ಕಾರಣ ಅವರು ತಮ್ಮ ಮನೆಯಲ್ಲಿ ಉಳಿದರು.

ಹೀಗಿರುವಾಗ ಅವರು ತಾವು ಬೆಳೆದ ಬೆಳೆಯನ್ನು ಯಾವ ರೀತಿಯಲ್ಲಿ ಅನುಮತಿ ಪಡೆದು ವ್ಯಾಪಾರ ಮಾಡಬೇಕು ಎನ್ನುವುದರ ಬಗ್ಗೆ ಸರಿಯಾದಂತಹ ಸಲಹೆಗಳು ಇಲ್ಲದ ಕಾರಣ ಅವರು ಬೆಳೆದ ಬೆಳೆಯು ವ್ಯಾಪಾರ ವಹಿವಾಟು ಇಲ್ಲದೆ ಗದ್ದೆಯಲ್ಲಿ ಇರುವಂತಹ ಪರಿಸ್ಥಿತಿ ಉಂಟಾಗಿದೆ.

ಸುಮಾರು 28ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಂತಹ ತರಕಾರಿಗಳಾದ ತೊಂಡೆಕಾಯಿ ಬೆಂಡೆಕಾಯಿ ಬೀನ್ಸು ಮೂಲಂಗಿ, ಮತ್ತು ಸೊಪ್ಪುಗಳನ್ನು ಬೆಳೆಯಲಾಗಿದೆ.

ಇದರ ಮಾಹಿತಿ ಪಡೆದಂತಹ ತಾಲೂಕಾಡಳಿತ (ಇಂದು) ರೈತರ ಗದ್ದೆಗಳಿಗೆ & ಮನೆಗಳಿಗೆ ಭೇಟಿ ನೀಡಿ ಅವರು ಬೆಳೆದ ಬೆಳೆಯನ್ನು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡುವಂತಹ ಅನುಮತಿ ನೀಡುವ ಮೂಲಕ ರೈತರ ಕಷ್ಟಕ್ಕೆ ನಿಂತಿದೆ.

ಇಲ್ಲಿ ಬೆಳೆದ ತರಕಾರಿ & ಸೊಪ್ಪು ಗಳು ತಾಲೂಕಿನ ಸುಮಾರು ಅರ್ಧ ಭಾಗಕ್ಕೆ ಸಾಕಾಗುವಷ್ಟು ಈ ಪ್ರದೇಶದಲ್ಲಿ ಬೆಳೆಯ ಲಾಗಿದೆ.

ಇಲ್ಲಿಯ 9 ಕ್ಕೂ ಹೆಚ್ಚು ರೈತರಿಗೆ ತಮ್ಮ ವಾಹನ ದ ಮೂಲಕ ನಗರ ಹಾಗೂ ಪಟ್ಟಣ ದಲ್ಲಿ ಮನೆಮನೆಗಳಿಗೆ ಹೋಗಿ ಮಾರಾಟ ಮಾಡುವ ಅನುಮತಿಯನ್ನು ತಾಲೂಕು ಆಡಳಿತ ನೀಡಿದೆ.

ಸದ್ಯ ತಾಲೂಕಿಗೆ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕಿನಿಂದ ತರಕಾರಿ ತರಲಾಗುತ್ತಿತ್ತು ಅವು ಅಷ್ಟೊಂದು ತಾಜಾ ಸಿಗುವುದಿಲ್ಲ ಎನ್ನುವಂತ ಗ್ರಾಹಕ ರಿಗೆ ಇದರಿಂದ ತಾಜಾ ಹಾಗೂ ಸಾವಯವ ಯುಕ್ತ ಸ್ಥಳೀಯ ತರಕಾರಿ ಸಿಗುವಂತಾಗಿದೆ.

“ಲಾಕ್ ಡೌನ್ ನಿಂದಾಗಿ ಇಲ್ಲಿಯ ರೈತರಿಗೆ ತರಕಾರಿ ಯನ್ನ ಮಾರುಕಟ್ಟೆ ಗೆ ತಲುಪಿಸಲು ಸಾಧ್ಯ ವಾಗಿಲ್ಲ ನಮ್ನ ಗಮನಕ್ಕೆ ವಿಷಯ ತಿಳಿದ ಕೂಡಲೇ ಇವರಿಗೆ ವಾಹನ ದ ಮೂಲಕ ಮಾರಾಟ ಮಾಡಲು ಅನುಮತಿ ನೀಡಿದ್ದೇವೆ ಎಂದು ಸಿದ್ದಾಪುರ ತಾಲೂಕು ತಹಶಿಲ್ದಾರ್ ಮಂಜುಳಾ ಭಜಂತ್ರಿ ಮಾಹಿತಿ ನೀಡಿದರು.

“ಮಾರುಕಟ್ಟೆ ಗೆ ತರಕಾರಿ ತರಲು ಹೋದಾಗ ಸ್ಥಳೀಯ ರೈತರೊಬ್ಬ ರು ತಮ್ಮ ಕಷ್ಟ ಹೇಳಿಕೊಂಡರು ತಕ್ಷಣ ತಹಸೀಲ್ದಾರ್ ರಿಗೆ ವಿಷಯ ವನ್ನು ತಿಳಿಸಿ ಸ್ಥಳೀಯ ರೈತರ ಬಗ್ಗೆ ಗಮನ ನೀಡುವಂತೆ ಕೇಳಿಕೊಂಡಾಗ ಉತ್ತಮ ಸ್ಪಂದನೆ ನೀಡಿದರು ಎಂದು ಸಿ ಎಸ್ ಗೌಡರ್ ನಿವೃತ ನೌಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
Leave a Reply

Your email address will not be published. Required fields are marked *