ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿ, ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಉತ್ತರ ಕನ್ನಡ ಜಿಲ್ಲೆಯ ಹುಡುಗ!

919

ಕಾರವಾರ : ಅಮೇರಿಕಾದ ಟೆಕ್ಸಾಸ್ ನಗರದಲ್ಲಿ ಭಾನುವಾರ ನಡೆದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗು ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಜೊತೆಗೆ ಜಿಲ್ಲೆಯ ಕುವರ ಸಾತ್ವಿಕ್ ಹೆಗಡೆ ಎಂಬ ಹುಡುಗನೊಬ್ಬ ಸೆಲ್ಪಿ ಕ್ಲಿಕ್ಕಿಸಿದ್ದು ಜಗತ್ತಿನಾದ್ಯಂತ ವೈರಲ್ಲಾಗಿದೆ.

ಹೌದು, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮೋದಿ ಯವರನ್ನ ವೆಲ್ ಕಂ ಮಾಡೋ ಕಾರ್ಯಕ್ರಮದಲ್ಲಿ ಸಾತ್ವಿಕ್ ಹೆಗಡೆ ಭಾಗವಹಿಸಿದ್ದು, ಅಲ್ಲಿ ಸೂರ್ಯ ನಮಸ್ಕಾರ ಪ್ರದರ್ಶನವನ್ನ ಕೂಡ ನೀಡಿದ್ದ. ನಂತರ ಅಮೇರಿಕಾ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಅಮೇರಿಕಾದ ದಿ ವೈಟ್ ಹೌಸ್ ಅಧಿಕೃತ ಟ್ವಿಟರ್ ಖಾತೆ ಈ ಪೋಟೊವನ್ನು ಹಂಚಿಕೊಂಡಿದ್ದು, ಈಗ ಅದು ಎಲ್ಲೆಡೆ ವೈರಲ್ ಆಗಿದೆ. ಟೆಕ್ಸಾಸ್ ನ ಲೂಯಿಸ್ ಡಿ ಬ್ರಾಂಡಿಸ್ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರೋ 13 ವರ್ಷ ವಯಸ್ಸಿನ ಸಾತ್ವಿಕ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ನ ಮೇಧಾ ಮತ್ತು ಪ್ರಭಾಕರ ಹೆಗಡೆ ದಂಪತಿಯ ಪುತ್ರನಾಗಿದ್ದಾನೆ.

ದಂಪತಿಗಳು ಕಳೆದ 17 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ರಜೆಯ ಅವಧಿಯಲ್ಲಿ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗೆ ಬಂದು ಕಾಲ ಕಳೆದು ಹೋಗುತ್ತಾರೆ. ಸಾತ್ವಿಕ್ ಅಜ್ಜ ಕೂಡ ನಿವೃತ್ತ ಮುಖ್ಯಾಧ್ಯಾಪಕರಾಗಿದ್ದು, ತಾಯಿ ಕೂಡ ಅಮೆರಿಕದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
Leave a Reply

Your email address will not be published. Required fields are marked *