ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ಭಾಗದಲ್ಲಿ ಇಂದು ಸಂಜೆ ಅಬ್ಬರದ ಮಳೆ ಸುರಿದಿದೆ.
ಮಳೆಯಿಂದಾಗಿ ಶಿರಸಿ ಭಾಗದ ವಿಕಾಸಾಶ್ರಮದ ತರಕಾರಿ ಮಾರುಕಟ್ಟೆ ಬಳಿ ಹಾನಿಯಾದರೇ ಕೋಟಗೇರಿ ಎದುರು ವಿದ್ಯುತ್ ಕಂಬಗಳು ದರೆಗುರಿಳಿವೆ. ಇನ್ನು ಮಾರಿಗುಡಿ ರಸ್ತೆಯಲ್ಲಿ ಮರ ಉರುಳಿ ಕಂಬಗಳು ಬಿದ್ದಿವೆ. ದೊಡ್ಡ ಗಣಪತಿ ದೇವಸ್ಥಾನದ ಬಳಿ ಮರ ಉರುಳಿ ದೇವಸ್ಥಾನದ ಭಾಗಕ್ಕೆ ಹಾನಿ ಸಂಭವಿಸಿದೆ. ಶಿರಸಿ ನಗರದ ಕೋರ್ಟ ರಸ್ತೆ ಬಳಿ ಮರ ಉರುಳಿ ಬಿದ್ದು ಶಾಲಾ ಕಾಂಪೌಂಡ್ ಗೆ ಹಾನಿಯಾಗಿದ್ದು ಇಂದು ಸಂಜೆ ಸುರಿದ ಭಾರಿ ಮಳೆಗೆ ಹಲವು ಭಾಗಗಳಲ್ಲಿ ಹಾನಿ ಸಂಭವಿಸಿದೆ.
ಮಳೆಯ ಅಬ್ಬರದ ವಿಡಿಯೋ ನೋಡಿ:-
ಹಾನಿ ಸಂಭವಿಸಿದ ಸ್ಥಳದ ಪೊಟೋಗಳು ಇಲ್ಲಿವೆ:-





