ನಮ್ಮೂರಿಗೆ ಮೋಜು ಮಸ್ತಿಗೆ ಬರಬೇಡಿ!ಸಿದ್ದಾಪುರದ ಬುರಡೆ ಪಾಲ್ಸ್ ರಸ್ತೆ ಬಂದ್ ಮಾಡಿದ ಗ್ರಾಮಸ್ತರು

259

ಕಾರವಾರ:- ಹಲವು ಜನರಿಗೆ ಫ್ರೀ ಸಿಕ್ರೆ ಸಾಕು ಮೋಜು ಮಸ್ತಿ ಪಾರ್ಟಿ ಮಾಡೋದು ಮಾಮೂಲು. ಹೀಗಾಗಿ ಹಲವರು ಮನೆಯಲ್ಲಿದ್ದು ಏನು ಮಾಡೋದು ಎಂದು ಸರ್ಕಾರದ ಆದೇಶ ಪಾಲನೆ ಮಾಡದೇ ಪ್ರವಾಸಿ ಸ್ಥಳಗಳಿಗೆ ಹೋಗುವ ಸಾಹಸಕ್ಕೆ ಕೈಹಾಕುತಿದ್ದಾರೆ. ಹೀಗಾಗಿ ಅಲ್ಲಿನ ಹಳ್ಳಿಯ ಜನರು ಎಚ್ಚೆತ್ತುಕೊಂಡಿದ್ದು ತಮ್ಮ ಊರಿಗೆ ಈ ಮಹಾ ಮಾರಿ ಬರಬಾರದೆಂಬ ಕಾರಣದಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬುರುಡೆ ಫಾಲ್ಸ್ ಇರುವ ಬೂದಗಿತ್ತಿ ಗ್ರಾಮಕ್ಕೆ ತೆರಳುವ ರಸ್ತೆಯನ್ನ ಗ್ರಾಮಸ್ಥರು ಬಂದ್ ಮಾಡಿ ಮುಂಜಾಗೃತೆ ವಹಿಸಿದ್ದಾರೆ.

ಸಿದ್ದಾಪುರ ಶಿರಸಿ ಭಾಗದ ಜನ ರಸ್ತೆ ಬಂದ್ ಮಾಡಿರುವ ವೀಡಿಯೋ ನೋಡಲು ಕೆಳಗಿನ ಲಿಂಕ್ ಬಳಸಿ:-

ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಮಾಡಿದ್ದರು ಮನೆಯಲ್ಲಿ ಇರಲಾಗದೇ ಟೈಮ್ ಪಾಸ್ ಮಾಡಲು ಫಾಲ್ಸ್ ಗೆ ಕೆಲವರು ಆಗಮಿಸುತ್ತಿದ್ದರು‌. ಈ ಹಿನ್ನಲೆ ಎಚ್ಚೆತ್ತುಕೊಂಡ ಗ್ರಾಮಸ್ಥರು ಬೂದಗಿತ್ತಿ ಗ್ರಾಮದ ಮೂಲಕ ಫಾಲ್ಸ್ ಗೆ ಜನರು ತೆರಳುತ್ತಿದ್ದರಿಂದ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿ ಮುಂಜಾಗ್ರತೆ ವಹಿಸಿದ್ದಾರೆ.

ಮಳಲಗಾಂವ್ ಗ್ರಾಮದ ರಸ್ತೆ ಬಂದ್!

ಶಿರಸಿ ತಾಲೂಕಿನ ಮಳಲಗಾಂವ್ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಬರುವ ರಸ್ತೆಯನ್ನ ಬಂದ್ ಮಾಡಿದ್ದಾರೆ. ಬೇರೆ ಊರಿನಿಂದ ಗ್ರಾಮಕ್ಕೆ ಬಂದವರಿಂದ ಕೊರೋನಾ ವೈರಸ್ ಹರಡಬಹುದು ಎನ್ನುವ ಭೀತಿಯಿಂದ ಗ್ರಾಮದ ರಸ್ತೆಯನ್ನ ಬಂದ್ ಮಾಡಿದ್ದು ಗ್ರಾಮದಿಂದ ಯಾರು ಹೊರಗೆ ಹೋಗಬಾರದು, ಯಾರು ಓಳಗೆ ಬರಬಾರದಂತೆ ಗ್ರಾಮದ ಹಿರಿಯಲು ಎಲ್ಲರಿಗೂ ಸೂಚಿಸಿದ್ದಾರೆ.

ಇನ್ನು ಜಿಲ್ಲೆಯ ಹಲವು ತಾಲ್ಲೂಕು ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ಇದ್ದು ಗ್ರಾಮಸ್ಥರೇ ಮುಂದಾಗಿ ತಮ್ಮ ಗ್ರಾಮಗಳ ಪ್ರವೇಶ ದ್ವಾರಗಳನ್ನ ಬಂದ್ ಮಾಡುತ್ತಿದ್ದಾರೆ. ಈ ಮೂಲಕ ಕೊರೊನಾ ಸೋಂಕು ಗ್ರಾಮಕ್ಕೆ ಬರದಂತೆ ತಡೆಯಲು ಮುಂದಾಗಿದ್ದಾರೆ.

ಶಿರಸಿಯ ಉಪ್ಪಳೇಕೊಪ್ಪದಲ್ಲಿ ರಸ್ತೆ ಬಂದ್!

ನಗರದ ಜನರಿಗಿಂತವ ಹಳ್ಳಿಗಳಲ್ಲಿ ಮಾತ್ರ ಜನರಲ್ಲಿ ಜಾಗೃತಿ ಮೂಡಿದ್ದು ತಮ್ಮ ಊರಿಗೆ ದಿಗ್ಭಂಧನ ಹಾಕಿಕೊಳ್ಳುವ ಮೂಲಕ ಊರಿನಿಂದ ಯಾರು ಹೊರಹೋಗದಂತೆ ಹಾಗೂ ಊರಿಗೆ ಯಾರು ಬರದಂತೆ ರಸ್ತೆಯನ್ನು ಬಂದ್ ಮಾಡಿ ನಾಮಫಲಕ ಅಳವಡಿಸುವ ಮೂಲಕ ದೇಶದ ದ್ವನಿಗೆ ದ್ವನಿಯಾಗಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಪ್ಪಳೇಕೊಪ್ಪ ದ ಗ್ರಾಮಸ್ಥರು.
ಗ್ರಾಮದ ಜನರಿಗೆ ಕೊರೋನಾ ಸೊಂಕು ಹರಡದಂತೆ ಗ್ರಾಮದ ರಸ್ತೆ ಬಂದ್ ಮಾಡಿರುವುದಾಗಿ ಬ್ಯಾನರ್ ಅಳವಡಿಸಿ ರಸ್ತೆಗೆ ಬಿದುರಿನ ಅಡ್ಡಿಗಳನ್ನಿಟ್ಟು ಸಂಚಾರವನ್ನೇ ಬಂದ್ ಮಾಡಿ ಕರೋನಾ ವಿರುದ್ಧ ಹೋರಾಟಕ್ಕೆ ಬೆಂಬಲ ವೆಕ್ತಪಡಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ