ಪ್ರಾಣವನ್ನೂ ಲೆಕ್ಕಿಸದೇ ಮೂರು ಜನರ ರಕ್ಷಣೆ ಮಾಡಿದ ಲೈಫ್ ಗಾರ್ಡ!

902

ಮುರುಡೇಶ್ವರ:-ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಮೂವರು ಇಂಜಿನಿಯರ್ ಗಳನ್ನು ಲೈಪ್ ಗಾರ್ಡ ಗಳು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದಲ್ಲಿ ನಡೆದಿದೆ.

ರಕ್ಷಣೆ ಮಾಡಿದ ವೀಡಿಯೋ ನೋಡಿ:-https://youtu.be/0cXlVKJ5XPk

ಬೆಂಗಳೂರಿನಿಂದ ಐದು ಜನ ಗೆಳೆಯರೊಂದಿಗೆ ವೀಕೆಂಡ್ ಮಸ್ತಿಗಾಗಿ ಮುರಡೇಶ್ವರಕ್ಕೆ ಆಗಮಿಸಿದ್ದ ಇವರು ಸಮುದ್ರದಲ್ಲಿ ಅಲೆಗಳ ಅಬ್ಬರವಿದ್ದರೂ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗೆ ಮೂರುಜನರು ಕೊಚ್ಚಿಹೋಗಿದ್ದು ಇದನ್ನು ಗಮನಿಸಿದ ಲೈಪ್ ಗಾರ್ಡಗಳು ತಮ್ಮ ಜೀವದ ಹಂಗು ತೊರೆದು ರಭಸದ ಅಲೆಯಲ್ಲಿಯೂ ಮೂರುಜನರನ್ನು ರಕ್ಷಣೆ ಮಾಡಿದ್ದಾರೆ.

ಬೆಂಗಳೂರು ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಹರೀಶ್೨೪,ಆನಂದ್ ೨೪,ಸುರೇಶ್ ೨೪ ರಕ್ಷಣೆಗೊಳಗಾದವರಾಗಿದ್ದು ಶಶಿಧರ್ ನಾಯ್ಕ,ಚಂದ್ರಶೇಖರ್ ಹರಿಕಾಂತ್ ರಕ್ಷಣೆ ಮಾಡಿದ ಲೈಪ್ ಗಾರ್ಡಗಳಾಗಿದ್ದಾರೆ. ಘಟನೆ ಸಂಬಂಧ ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

#Murudeshwara #lifeguard save 3 people




Leave a Reply

Your email address will not be published. Required fields are marked *