ಉ.ಕ ಜಿಲ್ಲೆಯಲ್ಲಿ ಇಂದು ಏನು?ವಿವರ ನೋಡಿ.

317

ಗೋಕರ್ಣ ಮಹಾಬಲೇಶ್ವರನಿಗೆ ವಿಶೇಷ ಪೂಜೆ ಮಾಡಿಸಿದ ಕೃಷಿ ಸಚಿವ

ಗೋಕರ್ಣ :-ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಇಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ರವರು ಕುಟುಂಬ ಸಮೇತರಾಗಿ ಬಂದು ಮಹಾಬಲೇಶ್ವರನಿಗೆ ಗಂಗಾಭಿಷೇಕ, ನವಧಾನ್ಯ ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ಮಾಡಿದರು. ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು.ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ
ಜಿ ಕೆ ಹೆಗಡೆ ಸಚಿವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ಮಾಮಿ ಜನ್ಮ ದಿನಕ್ಕೆ ವಿಶೇಷ ಪೂಜೆ ನೆರವೇರಿಸಿದ ಚೈತ್ರಾಗೌಡ.

ಯಲ್ಲಾಪುರ:- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಜನ್ಮದಿನದ ಅಂಗವಾಗಿ ಜೆಡಿಎಸ್ ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಚೈತ್ರಾ ಗೌಡರವರು ಯಲ್ಲಾಪುರದ ಗ್ರಾಮದೇವಿ ದೇವಸ್ಥಾನದಲ್ಲಿ ಕುಮಾರಸ್ವಾಮಿ ಹೆಸರಿನಲ್ಲಿ ವಿಷೇಶ ಪೂಜೆ ನೆರವೇರಿಸಿದರು.ಜಿಲ್ಲಾಧ್ಯಕ್ಷರಾದ ತ್ರಿವೇಣಿ,ರಾಮಸಿದ್ದಿ,ಗಣಪತಿ ಭಟ್,ವಿನಾಯಕ್ ಹೆಗಡೆ,ಮಹಾಭಲೇಶ್ವರ ನಾಯ್ಕ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸಿದ್ದರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ನರೇಂದ್ರ ಮೋದಿ.

ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಥೇಟ್ ನರೇಂದ್ರ ಮೋದಿಯಂತೇ ಹೋಲುವ ಉಡುಪಿಯ ಸದಾನಂದ ನಾಯಕ ರವರು ರಾಜೇಶ ನಾಯ್ಕ ಸಿದ್ದರ ಹಾಗು ಅನುಪಮಾ ಗೌಡಾ ಪರವಾಗಿ ಗ್ರಾಮಸ್ಥರಲ್ಲಿ ಮತ ಯಾಚಿಸಿದರು.

ಸಿದ್ದರ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜೇಶ ನಾಯ್ಕ ಸಿದ್ದರ ಕಣದಲ್ಲಿದ್ದು ಅವರ ಪರವಾಗಿ ಜೂನಿಯರ ಮೋದಿ ಖ್ಯಾತಿಯ ಸದಾನಂದ ನಾಯಕ ರವರು ಪ್ರಚಾರಕ್ಕೆ ಬಂದ್ದಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ರಾಜೇಶ ನಾಯ್ಕ ನರೇಂದ್ರ ಮೋದಿ ಯವರ ಅಪ್ಪಟ ಅಭಿಮಾನಿ ಯಾಗಿದ್ದು, ಜೂನಿಯರ್ ಮೋದಿ ಮತ್ತು ರಾಜೇಶ ನಾಯ್ಕ ತುಂಬಾ ಆತ್ಮೀಯರಾಗಿದ್ದು ಅವರ ಪ್ರಚಾರಕ್ಕಾಗಿಯೇ ಸದಾನಂದ ನಾಯ್ಕ ರವರು ಸಿದ್ದರ ಗ್ರಾಮಕ್ಕೆ ಬಂದ್ದಿದ್ದರು.ಇವರ ಪ್ರಚಾರ ನೋಡಿ ಮೊದಿಯೇ ಪ್ರಚಾರ ಮಾಡುತಿದ್ದಾರೆ ಎಂಬುವಂತೆ ತೋರುತಿದ್ದು ವಿಷೇಶವಾಗಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಇಳಿಕೆ ಕಂಡ ಕರೋನಾ ಪಾಸಿಟಿವ್ ಸಂಖ್ಯೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಹತ್ತು ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ತಾಲೂಕುವಾರು ವಿವರ ಈ ಕೆಳಗಿನ ಕೊಷ್ಠಕದಲ್ಲಿ ನೀಡಲಾಗಿದೆ.

ರಂಗಭೂಮಿ ಕಲಾವಿದರಿಗೆ ಮನೋರಂಜನಾ ಕಾರ್ಯಕ್ರಮ ನಡೆಸಲು ಅವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ

ಕಾರವಾರದ ರಂಗಭೂಮಿ ಕಲಾವಿದರ ವೇದಿಕೆ ಸದಸ್ಯರು ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಂಗಭೂಮಿ,ಯಕ್ಷಗಾನ ಮನೋರಂಜನಾ ಕಾರ್ಯಕ್ರಮವನ್ನು ಕೋವಿಡ್ ಕಾರಣದಿಂದ ನಿರ್ಬಂಧಿಸಿರುವುದನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು. ಕೋವಿಡ್ ಕಾರಣದಿಂದ ನಿರ್ಭಂಧ ಮಾಡಲಾಗಿದ್ದು ಇದರಿಂದ ಸಾವಿರಾರು ರಂಗಭೂಮಿ,ಯಕ್ಷಗಾನ ಕಲಾವಿದರು ತೊಂದರೆ ಅನುಭವಿಸುತಿದ್ದು ಇದನ್ನೇ ನಂಬಿ ಬದುಕು ಕಟ್ಟಿಕೊಂಡವರ ಜೀವನ ಕಷ್ಟಸಾಧ್ಯವಾಗಿದೆ.ಹೀಗಾಗಿ ಕೋವಿಡ್ ನಿಯಮವನ್ನು ಪಾಲಿಸಿ ಮನೋರಂಜನೆ ಕಾರ್ಯಕ್ರಮ ನಡೆಸುತ್ತೇವೆ ಇದಕ್ಕೆ ಅವಕಾಶ ನೀಡಬೇಕು ಎಂದು ಕೇಳಿಕೊಂಡರು.

ಮತದಾರರ ಪಟ್ಟಿ ಕುರಿತ ಆಕ್ಷೇಪಣೆ ಸ್ವೀಕಾರ.

ಪಿ.ಮೋಹನ್ ರಾಜ್ .

ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಾದ ಕೆ. ಪಿ. ಮೋಹನರಾಜುರವರು ಮತದಾರರ ನೊಂದಣಿ ಸಂಕ್ಷಿಪ್ತ ಪರಿಷ್ಕರಣಿಯ ಸಾಮಾನ್ಯ ವೀಕ್ಷಕರಾಗಿ ( Role observer) ನೇಮಕವಾಗಿದ್ದು, ಡಿ. 17 ರಂದು ಜಿಲ್ಲೆಯ ಅಣಶಿ ಪ್ರದೇಶದ ಮತಗಟ್ಟೆ ಸಂಖ್ಯೆ 58ಕ್ಕೆ ಬೆಳಿಗ್ಗೆ 11. 30 ಗಂಟೆಗೆ ಭೇಟಿ ನೀಡಿ, ಚುನವಣಾ ಸಂಬಂಧಿತ ಮತದಾದರ ಪಟ್ಟಿಯ ಕುರಿತು ಸಾರ್ವಜನಿಕ ಕುಂದು, ಕೊರತೆ, ಆಕ್ಷೇಪಣೆಗಳನ್ನು ಸ್ವೀಕರಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ ರವರು ತಿಳಿಸಿದ್ದಾರೆ.

ತ್ಯಾಗ ಬಲಿದಾನ ಸ್ಮರಣೆಯೇ ‘ವಿಜಯ ದಿವಸ್’ ಆಚರಣೆ; ಕ್ಯಾಪ್ಟನ್ ಸಜು ಜಾಯ್

‘ವಿಜಯ ದಿವಸ್’ ಕೇವಲ ಆಚರಣೆಯಲ್ಲ ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನ ಸ್ಮರಿಸುವ ಮಹತ್ವದ ದಿನವಾಗಿದೆ ಎಂದು ಐಎನ್‌ಎಸ್ ವಜ್ರಕೋಶದ ಕಮಾಂಡರ್ ಕ್ಯಾಪ್ಟನ್ ಸಜು ಜಾಯ್ ಅಭಿಪ್ರಾಯಪಟ್ಟರು.


ಕಾರವಾರ ನಗರದ ರವಿಂದ್ರನಾಥ ಠ್ಯಾಗೋರ್ ಕಡಲ ತೀರದ ನೌಕಾ ಯುದ್ಧ ಸ್ಮಾರಕದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ‘ವಿಜಯ ದಿವಸ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ಅಪಾರ ಸೇವೆ ಸಲ್ಲಿಸಿದ ವೀರ ಯೋಧರ ಕಾರ್ಯ ಅತ್ಯಂತ ಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಮಾತನಾಡಿ, ದೇಶ ಸೇವೆಗೆ ಅನೇಕ ಸೈನಿಕರನ್ನು ಕಾರವಾರ ಜಿಲ್ಲೆ ನೀಡಿದೆ. ಅಂತಹ ಸೈನಿಕರ ಪೈಕಿ ಕೆಲವರು ವೀರ ಮರಣ ಹೊಂದಿದ್ದು, ಈ ಎಲ್ಲ ಹುತಾತ್ಮ ಯೋಧರು ಜಿಲ್ಲೆಯ ಹೆಮ್ಮೆಯಾಗಿದ್ದಾರೆ. ಸೈನಿಕರ ಸಕಲ ಅಭಿವೃದ್ಧಿಗೆ ಜಿಲ್ಲಾಡಳಿತ ಸದಾ ಸಿದ್ಧವಾಗಿದೆ ಎಂದು ಹೇಳೀದರು.
ಇದೇ ಸಂದರ್ಭದಲ್ಲಿ ಸಶಸ್ತç ಪಡೆಯ ೨೦೨೦ರ ಸಾಂಕೇತಿಕ ಧ್ವ್ವಜ ಬಿಡುಗಡೆ ಮಾಡಲಾಯಿತು. ನಂತರ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರ ಪೋಷಕರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಗಾ ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯ ಉಪ ನಿರ್ದೇಶಕಿ ಇಂದುಪ್ರಭಾ ವಿ.ಕಮಾಂಡರ್ ಸತ್ಯನಾಥ ಬೋಸ್ಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಲು ಸರ್ಕಾರದ ಅದೀನ ಕಾರ್ಯದರ್ಶಿಯಿಂದ ಸೂಚನೆ.

ಆದೇಶ ಪ್ರತಿ.

ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ತಾರತಮ್ಯ ಮಾಡದೇ ಕಚೇರಿಯಲ್ಲಿ ಕುಳ್ಳಿರಿಸಿ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ವರ್ಗ ಇವರು ಇಂದು ಆದೇಶ ಮಾಡಿದ್ದಾರೆ.

ಸೋಮೇಶ್ವರ ದೇವಸ್ಥಾನದಲ್ಲಿ ಮನೆ ಮದ್ದು ಕಾರ್ಯಕ್ರಮ.

ಶಿರಸಿಯ ಬೆಣಗಾಂವದ ಸೋಮೇಶ್ವರ ದೇವಸ್ಥಾನದಲ್ಲಿ ಹಂಸ ಟ್ರಸ್ ವತಿಯಿಂದ ಮನೆ ಮದ್ದು ಕಾರ್ಯಕ್ರಮವನ್ನು ಇಂದು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜುನಾಥ್ ಹೆಗಡೆ ಮನೆ ಮದ್ದಿಗೆ ಮೊದಲ ಪ್ರಾಮುಖ್ಯತೆ ಕೊಡುವ ಅಗತ್ಯವಿದೆ.ಬದಲಾದ ಕಾಲಘಟ್ಟದಲ್ಲಿ ಮಬೆಮದ್ದು ಮುಂಚೂಣೆಯಲ್ಲಿ ಬಂದಿದೆ ಎಂದರು.

ವೇದಿಕೆಯಲ್ಲಿ ಹಂಸ ಟ್ರಸ್ಟ್ ನ ತನುಜಾ ಹೆಗಡೆ,ಕರುಣಾಕರ ಹೆಗಡೆ ಸಂಪಗಾರು ಮುಂತಾದವರು ಉಪಸ್ಥಿತರಿದ್ದರು.

ಪ್ರಿಯ ಓದುಗರೇ ನಿಮ್ಮ ತಾಲೂಕಿನ ಸುದ್ದಿಗಳನ್ನು ನಮಗೆ ತಲುಪಿಸಲು ಈ ಕೆಳಗಿನ ನಂಬರ್ ಗೆ ವಾಟ್ಸ್ ಅಪ್ ಮಾಡಿ:-

9741058799
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ