ಉತ್ತರ ಕನ್ನಡ ದಲ್ಲಿ 120 ಪಾಸಿಟಿವ್ !ಯಾವ ತಾಲೂಕಿನಲ್ಲಿ ಎಷ್ಟು ವಿವರ ನೋಡಿ

2156

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 120 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 51 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇಂದಿನ ತಾಲೂಕು ವಿವರ ಹೀಗಿದೆ:-

ಕಾರವಾರ-11
ಅಂಕೋಲ-11
ಕುಮಟಾದಲ್ಲಿ 18, ಹೊನ್ನಾವರದಲ್ಲಿ 9, ಭಟ್ಕಳದಲ್ಲಿ 13, ಮುಂಡಗೋಡದಲ್ಲಿ 26, ಹಳಿಯಾಳದಲ್ಲಿ 28 ಹಾಗೂ ಜೊಯಿಡಾದಲ್ಲಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.

51 ಜನ ಗುಣಮುಖ.

ಕಾರವಾರದಲ್ಲಿ ಐವರು, ಅಂಕೋಲಾ, ಮುಂಡಗೋಡದಲ್ಲಿ ತಲಾ ಒಂಬತ್ತು, ಕುಮಟಾ, ಶಿರಸಿಯಲ್ಲಿ ತಲಾ ನಾಲ್ವರು, ಹೊನ್ನಾವರದಲ್ಲಿ ಓರ್ವ, ಸಿದ್ದಾಪುರದಲ್ಲಿ ಇಬ್ಬರು, ಹಳಿಯಾಳದಲ್ಲಿ 17 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಈವರೆಗೆ ಜಿಲ್ಲೆಯ 2,027 ಜನ ಸೋಂಕು ದೃಢಪಟ್ಟಿದ್ದು, 1,268 ಮಂದಿ ಗುಣಮುಖರಾಗಿದ್ದಾರೆ. 22 ಮಂದಿ ಸಾವನ್ನಪ್ಪಿದ್ದು, 663 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದ್ದು, 74 ಸೋಂಕಿತರಿಗೆ ಹೋಮ್ ಐಸೋಲೇಶನ್ ನಲ್ಲಿಡಲಾಗಿದ್ದು ಈ ವಾರದಲ್ಲಿ ಇಂದಿನ ಸೋಂಕಿನ ಸಂಖ್ಯೆ ಏರಿಕೆ ಕಂಡಿದೆ.

ಕರ್ನಾಟಕ ರಾಜ್ಯದ ಜಿಲ್ಲಾವಾರು ಕರೋನಾ ಸೊಂಕಿತರ ವಿವರ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ