BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಏನು! ಯಾವ ತಾಲೂಕಿನಲ್ಲಿ ಏನು ವಿಶೇಷ ಇಲ್ಲಿದೆ ನೋಡಿ

494

ಅರಣ್ಯಾಧಿಕಾರಿಗಳಿಗೆ ಅರಣ್ಯಹಕ್ಕುಗಳ ಹೋರಾಟ ವೇದಿಕೆಯಿಂದ ಏಳು ಪ್ರಶ್ನೆಗಳ ಬಹಿರಂಗ ಪತ್ರ

ಯಲ್ಲಾಪುರ:- ಯಲ್ಲಾಪುರ ದಲ್ಲಿ ಅರಣ್ಯಹಕ್ಕುಗಳ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಅರಣ್ಯ ವಾಸಿಗಳಿಗೆ ಹಾಗೂ ಒತ್ತುವರಿ ದಾರರಿಗೆ ಅರಣ್ಯ ಸಿಬ್ಬಂದಿಗಳಿಂದ ಆಗುತ್ತಿರು ಕಿರುಕುಳ ಸಂಬಂಧ ಇಂದು ಯಲ್ಲಾಪುರ ನಗರದ ಅರಣ್ಯಹಕ್ಕುಗಳ ಹೋರಾಟ ವೇದಿಕೆಯ ಕಚೇರಿಯಲ್ಲಿ ಅರಣ್ಯ ಇಲಾಖೆಗೆ ಏಳು ಪ್ರಶ್ನೆಗಳಿರುವ ಬಹಿರಂಗ ಪತ್ರ ವನ್ನು ಇಂದುಬರೆಯುವ ಮೂಲಕ ವಿನೂತನ ಪ್ರತಿಭಟನೆ ನಡೆದಿದರು .ಅರಣ್ಯವಾಸಿಗಳ ಕ್ಷೇತ್ರ ದಲ್ಲಿ ಕೃಷಿ ಚಟುವಟಿಕೆಗೆ ಮಾಡಲು ಅವಕಾಶವಿದೆಯೇ ಎನ್ನುವ ಪ್ರಶ್ನೆಯಿಂದ ಹಿಡಿದು ಅರಣ್ಯ ಸಿಬ್ಬಂದಿಗಳು ಎಫ್.ಐ.ಆರ್ ದಾಖಲಿಸಲು ಅವಕಾಶ ವಿದೆಯೇ ಎನ್ನುವಕುರಿತಂತೆ ಒಟ್ಟು ಏಳು ಪ್ರಶ್ನೆಗಳನ್ನು ಕೇಳಿ ಅರಣ್ಯಾಧಿಕಾರಿಗಳಿಗೆ ಕಳುಹಿಸಲಾಯಿತು.

ಶಿರಸಿಯಲ್ಲಿ 7560 ರುಪಾಯಿ ಮೌಲ್ಯದ ಅಕ್ರಮ ಗಾಂಜ ವಶ

ಶಿರಸಿಯ ಇಂದು ಗ್ರಾಮೀಣ ಠಾಣೆವ್ಯಾಪ್ತಿಯ ಹುಲೇಕಲ್ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತಿದ್ದ ಇಲ್ಲಿನ ಮರಾಠಿ ಕೊಪ್ಪದ ನಾಗ ನೆಹರು ನಗರದ ದೀಪು ಎಂಬುವವರನ್ನು ಬಂಧಿಸಿ
7560ರಪಾಯಿ ಮೌಲ್ಯದ 378 ಗ್ರಾಮ್ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.ಘಟನೆ ಸಂಬಂಧ ಶಿರಸಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿ.ವೈ.ಎಸ್ಪಿ ಗೋಪಾಲಕೃಷ್ಣ ನೇತ್ರತ್ವದಲ್ಲಿ ಸಿಪಿಐ ಪ್ರದೀಪ್ ರವರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನ ಮಳೆ ವರದಿ ಹಾಗೂ ಜಲಾಶಯದ ಮಟ್ಟದ ವಿವರ ಇಲ್ಲಿದೆ.

ವಿವರ ನೋಡಿ:-


ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ:-

ಅಂಕೋಲಾದಲ್ಲಿ 0.0 ಮಿ.ಮೀ, ಭಟ್ಕಳ 7.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.0 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ.
ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.

ಕದ್ರಾ: 34.50ಮೀ (ಗರಿಷ್ಟ), 30.64 ಮೀ (2020), 10275.00 ಕ್ಯೂಸೆಕ್ಸ್ (ಒಳಹರಿವು) 10946.00 ಕ್ಯೂಸೆಕ್ಸ (ಹೊರ ಹರಿವು)

ಕೊಡಸಳ್ಳಿ: 75.50 ಮೀ (ಗರಿಷ್ಟ), 67.30 ಮೀ. (2020), 3174.0 ಕ್ಯೂಸೆಕ್ಸ್ (ಒಳ ಹರಿವು) 9338.0 (ಹೊರ ಹರಿವು)

ಸೂಪಾ: 564.00 ಮೀ (ಗ), 558.44 ಮೀ (2020), 1288.344 ಕ್ಯೂಸೆಕ್ಸ್ (ಒಳ ಹರಿವು), 2198.36 ಕ್ಯೂಸೆಕ್ಸ್ (ಹೊರ ಹರಿವು)

ತಟ್ಟಿಹಳ್ಳ: 468.38ಮೀ (ಗ), 466.50 ಮೀ (2020), 196.00 ಕ್ಯೂಸೆಕ್ಸ್ (ಒಳ ಹರಿವು) 784.00 ಕ್ಯೂಸೆಕ್ಸ್ (ಹೊರ ಹರಿವು),

ಬೊಮ್ಮನಹಳ್ಳಿ: 438.38 ಮೀ (ಗ), 435.71 ಮೀ (2020), 3781.0 ಕ್ಯೂಸೆಕ್ಸ್ (ಒಳ ಹರಿವು) 3916.0 ಕ್ಯೂಸೆಕ್ಸ್ (ಹೊರ ಹರಿವು)

ಗೇರುಸೊಪ್ಪ: 55.00 ಮೀ (ಗ), 46.78 ಮೀ (2020) 6111.1.0 ಕ್ಯೂಸೆಕ್ಸ್ (ಒಳ ಹರಿವು) 11569.334 ಕ್ಯೂಸೆಕ್ಸ್ (ಹೊರ ಹರಿವು)

ಲಿಂಗನಮಕ್ಕಿ :1819.00 ಅಡಿ (ಗ), 1814.00 ಅಡಿ (2020). 3515.00 ಕೂಸೆಕ್ಸ (ಒಳ ಹರಿವು) 6783.56 ಕ್ಯೂಸೆಕ್ಸ್ (ಹೊರ ಹರಿವು)
ಯುವಕ- ಯುವತಿಯರಿಗಾಗಿ ತೆಂಗಿನ ಮರ ಏರುವ ತರಬೇತಿ

ಯುವಕ- ಯುವತಿಯರಿಗಾಗಿ ತೆಂಗಿನ ಮರ ಏರುವ ತರಬೇತಿ

ಶಿರಸಿ: ಯಂತ್ರದ ಮೂಲಕ ತೆಂಗಿನ ಮರ ಹತ್ತುವ ಮತ್ತು ತೆಂಗಿನ ಸಸ್ಯ ಸಂರಕ್ಷಣೆ ಕುರಿತು ಐದು ದಿನದ ತರಬೇತಿಯನ್ನು ನಗರದ ಕೃ.ವಿ.ಕೇಂದ್ರದಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ ಶಿರಸಿ ಹಾಗೂ ಕದಂಬ ಟ್ರಸ್ಟ್ ಶಿರಸಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ತರಬೇತಿಗೆ 18 ರಿಂದ 35 ವರ್ಷದೊಳಗಿನ ಯುವಕ- ಯುವತಿಯರು ಅರ್ಹರಾಗಿರುತ್ತಾರೆ.
ತರಬೇತಿಯಲ್ಲಿ ಉಚಿತವಾಗಿದ್ದು ಶಿರಸಿ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಲು ಕೋರಿದೆ.
ತರಬೇತಿಯಲ್ಲಿ 20 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಹೆಸರನ್ನು ನೋಂದಾಯಿಸಲು ಡಾ. ಮಂಜು ಎಮ್. ಜಿ. ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಶಿರಸಿ ಇವರ ಮೊಬೈಲ್ ಸಂಖ್ಯೆ: 9448495345 ಗೆ ಸಂಪರ್ಕಿಸಬಹುದು.

ಅ.17 ಕ್ಕೆ ಯುವ ರೈತರಿಗಾಗಿ ಜೇನು ಕೃಷಿ ಕಾರ್ಯಾಗಾರ

ಶಿರಸಿ: ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಕದಂಬ ಆರ್ಗ್ಯಾನಿಕ್ ಮತ್ತು ಮಾರ್ಕೆಟಿಂಗ್ ಟ್ರಸ್ಟ್ ಶಿರಸಿ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಅ. 17 ಶನಿವಾರದಂದು ನಗರದ ಕದಂಬ ಮಾರ್ಕೆಟಿಂಗ್ ಆವಾರದಲ್ಲಿ ಯುವ ರೈತರಿಗಾಗಿ ಜೇನು ಕೃಷಿ ಕಾರ್ಯಾಗಾರ ಆಯೋಜಿಸಿದೆ.ಮೊದಲು ಹೆಸರು ನೊಂದಾಯಿಸಿದ 35 ವರ್ಷದ ಒಳಗಿನ 25 ಜನ ಯುವಕ- ಯುವತಿಯರಿಗಾಗಿ ಮಾತ್ರ ಈ ಕಾರ್ಯಾಗಾರದಲ್ಲಿ ಅವಕಾಶ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಡಾ.ಮಂಜು ಎಂ ಜೆ 9448156904 ಅಥವಾ ಮಂಜುನಾಥ ಹೆಗಡೆ 7892957523ರವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕುಮಟಾ ಪುರಸಭೆ ಪ್ರಕಟಣೆ.

ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ (1 ರಿಂದ 10 ನೇ ತರಗತಿ) , ಮೆಟ್ರಿಕ್ ನಂತರದ (ಪಿ.ಯು.ಸಿ ಯಿಂದ ಪಿ.ಎಚ್.ಡಿ ವರೆಗಿನ) ಹಾಗೂ ಮೆರಿಟ್-ಕಂ-ಮೀನ್ಸ್ (ತಾಂತ್ರಿಕ, ವೃತ್ತಿಪರ ಕೋರ್ಸ್‍ಗಳಿಗೆ) ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ 31 ಕೊನೆಯದಿನವಾಗಿರುತ್ತದೆ http://www.gokdom.kar.nic. in ಅಥವಾ https://scholarship.gov.in/ ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಯಸುವ, ವಿದ್ಯಾರ್ಥಿಯ ಪಾಲಕರ ವಾರ್ಷಿಕ ಆದಾಯಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ರೂ.1 ಲಕ್ಷ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ರೂ.2 ಲಕ್ಷ, ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿವೇತನಕ್ಕೆ ರೂ.2.50 ಲಕ್ಷ ಒಳಗಿರಬೇಕು. ಮತ್ತು ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ 50% ಗಿಂತ ಹೆಚ್ಚಿನ ಅಂಕ ಗಳಿಸಿರಬೇಕು, ಹಾಗೂ ಕರೆಸ್ಪಾಂಡೆನ್ಸ್ ಶಿಕ್ಷಣ, ಸರ್ಟಿಫಿಕೇಟ್ ಕೋರ್ಸ, ತರಬೇತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‍ಸೈಟ್ www.gokdom.kar.nic. in ಅಥವಾ ಆಯಾ ತಾಲೂಕಿನ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ ಅಥವಾ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರವಾರ ಕಚೇರಿ ದೂರವಾಣಿ ಸಂಖ್ಯೆ 08382-220336 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐದು ರಸ್ತೆ ವೃತ್ತ ಅಗಲೀಕರಣ ಪ್ರಕ್ರಿಯೆಗೆ ಖಂಡಸಿ ಸಚಿವ ಹೆಬ್ಬಾರರಿಗೆ ಮನವಿ.

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯವರು ಐದು ರಸ್ತೆ ವೃತ್ತವನ್ನು ಬ್ಲಾಕ್ ಸ್ಪಾಟ್ ಎಂದು ಪರಿಗಣಿಸಿ ಅಭಿವೃದ್ಧಿ ದೃಷ್ಠಿಯಿಂದ ಹಣಕಾಸು ಇಲಾಖೆಯ ಮಂಜೂರಿ ಪಡೆದು ಕಾಮಗಾರಿ ಗುತ್ತಿಗೆಯನ್ನು ಬಳ್ಳಾರಿಯವರಿಗೆ ನೀಡಲಾಗಿದೆ. ಅವರು ಅವೈಜ್ಞಾನಿಕವಾಗಿ ಭೂ ಸ್ವಾದೀನ ಪ್ರಕ್ರಿಯೆಗೆ ಮುಂದಾಗಿರುವುದನ್ನು ಖಂಡಿಸಿ ಐದು ರಸ್ತೆ ವೃತ್ತದ ಆಸುಪಾಸಿನ ನಿವಾಸಿಗಳು ಯಲ್ಲಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‍ರವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಛಾಯಾಗ್ರಾಹಕ ಸಂಘದಿಂದ ಬೆಂಗಳೂರು ಚಲೋ ಪ್ರತಿಭಟನೆ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಛಾಯಾಗ್ರಾಹಕರ ಸಂಘದ ವತಿಯಿಂದ ಛಾಯಾಗ್ರಾಹಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 31 ರ ಶನಿವಾರ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಕೋವಿಡ್ ನಿಂದ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ನೆರವು ಘೋಷಣೆ,ಛಾಯಾಗ್ರಾಹಕ ಅಕಾಡೆಮಿ ಸ್ಥಾಪನೆ,ಕೆಪಿಎ ಛಾಯಾ ಭವನಕ್ಕೆ ನಿವೇಶನ ಮಂಜುರಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಹರೀಶ್ .ಪಿ ನರಳಿಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡವಾಣಿಗೆ ಸುದ್ದಿ ಕಳುಹಿಸುವವರು ಈಮೇಲ್ ಮಾಡಿ:-
Kannadavaninewsportal@gmail.com
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ