BREAKING NEWS
Search

ಝಣ ಝಣ ಕಾಂಚಾಣ!ಯಲ್ಲಾಪುರದಲ್ಲಿ ಜೆಡಿಎಸ್ ನಾಯಕರು ಸೇಲ್!?

618

ಕಾರವಾರ :- ತಮ್ಮ ಅಭ್ಯರ್ಥಿ ಪರ ಪ್ರಚಾರ ಹಾಗೂ ಮತದಾನದ ಸಂದರ್ಭದಲ್ಲಿ ಬೂತ್ ನಲ್ಲಿ ಕಾರ್ಯನಿರ್ವಹಿಸಲು ತಮ್ಮ ಪಕ್ಷದವರಿಂದಲೇ ಹಣ ಬೇಡಿಕೆ ಇಟ್ಟ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ಜೆಡಿಎಸ್ ತಾಲೂಕು ಅಧ್ಯಕ್ಷ ರವಿ ಚಂದ್ರ ನಾಯ್ಕದುಡ್ಡಿಗೆ ಡಿಮ್ಯಾಂಡ್ ಮಾಡಿದ ವ್ಯಕ್ತಿಯಾಗಿದ್ದಾನೆ.

ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ವಿಡಿಯೋ ನೋಡಲು ಈ ಕರಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

ಯಲ್ಲಾಪುರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಿಂದಲೇ ಹಣ ಬೇಡಿಕೆ ಇಟ್ಟ ಜೆಡಿಎಸ್ ತಾಲೂಕು ಅಧ್ಯಕ್ಷ ವಿಡಿಯೋ ನೋಡಿ..

Posted by Kannadavani on Wednesday, December 4, 2019

ಪ್ರತಿ ಬೂತಿಗೆ 10 ಸಾವಿರದಂತೆ 2ಲಕ್ಷೂ ಅಧಿಕ ಮೊತ್ತ ಜೆಡಿಎಸ್ ಅಭ್ಯರ್ಥಿಯಿಂದ ಬೇಡಿಕೆ ಇಟ್ಟಿದ್ದು ಜನ ಸೇರಿಸಲು, ಮತದಾನದ ದಿನ ಬೂತ್ ನಲ್ಲಿ ಕೆಲಸ ಮಾಡಲು ದುಡ್ಡಿನ ಡಿಮ್ಯಾಂಡ್ ಮಾಡಿದ್ದಾರೆ.

ಇದರ ವಿಡಿಯೋ ಕನ್ನಡ ವಾಣಿ ಗೆ ದೊರೆತಿದ್ದು ಹಣ ಬೇಡಿಕೆ ಇಟ್ಟ ಕುರಿತು ಸ್ವತಹಾ ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಒಪ್ಪಿಕೊಂಡಿದ್ದಾರೆ.

ಪಕ್ಷದಲ್ಲಿ ಜಿಲ್ಲಾಧ್ಯಕ್ಷರು ಸೇರಿದಂತೆ ತಾಲೂಕು ಅಧ್ಯಕ್ಷರು ಬಹಿರಂಗವಾಗಿ ಹಣ ನೀಡುವಂತೆ ಕೇಳಿದ್ದಾರೆ ಎಂದ ಚೈತ್ರ ಗೌಡ ಆರೋಪಿಸಿದ್ದು ಫೇಸ್ ಬುಕ್ ನಲ್ಲಿ ಪಕ್ಷೇತರನಾಗಿ ನಿಂತಿದ್ದೇನೋ ಎಂದು ಅನಿಸುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಇನ್ನು ತಮ್ಮ ಪಕ್ಷದಲ್ಲೇ ಇದ್ದುಕೊಂಡು ಕಾಂಗ್ರೆಸ್ ಭೀಮಣ್ಣ ನಾಯ್ಕರಿಗೆ ಜಿಲ್ಲಾಧ್ಯಕ್ಷರು ಹಾಗು ಹಲವು ತಾಲೂಕು ಅಧ್ಯಕ್ಷರು ಸೇರಿದಂತೆ ಪ್ರಮುಖ ಮುಖಂಡರು ಸಹಕಾರ ನೀಡುತಿದ್ದಾರೆ.

ತಮಗೆ ಸಂಬಂಧಿ ಹಾಗೂ ಜಾತಿ ಎನ್ನುವ ಕಾರಣಕ್ಕೆ ಹೀಗೆ ಮಾಡುತಿದ್ದಾರೋ ತಿಳಿದಿಲ್ಲ ,ಜಿಲ್ಲಾಧ್ಯಕ್ಷರು ಟಿಕೇಟ್ ಆಕಾಂಕ್ಷಿಯಾಗಿದ್ದರು ಎಂದು ಜೈತ್ರಾ ಗೌಡ ಅಳಲು ತೋಡಿಕೊಂಡಿದ್ದಾರೆ.

ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗೂ ಜಿಲ್ಲಾ ಮುಖಂಡರು ಪ್ರಚಾರಕ್ಕಾಗಿ ಹಣದ ಬೇಡಿಕೆಯಿಟ್ಟಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಆರೋಪ ವಿರುದ್ಧ ಜೆಡಿಎಸ್ ತಾಲೂಕು ಅಧ್ಯಕ್ಷ ರವಿಚಂದ್ರ ನಾಯ್ಕ್ ಹರಿಹಾಯ್ದಿದ್ದಾರೆ.

ಚೈತ್ರಾ ಗೌಡ ಪ್ರತೀ ಬೂತ್‌ಗೆ 50ಸಾವಿರ ರೂ. ಖರ್ಚು ಮಾಡುತ್ತೇನೆಂದು ವರಿಷ್ಠರಲ್ಲಿ ಹೇಳಿ ಟಿಕೆಟ್ ತೆಗೆದುಕೊಂಡಿದ್ದಳು.

ಆದರೆ, ಇಲ್ಲಿಯವರೆಗೆ ಒಂದೂ ಪೈಸೆ ಚೈತ್ರಾ ಗೌಡ ಖರ್ಚು ಮಾಡಿಲ್ಲ.

ಅವಳು ಹೊರಗೆ ಬಂದಾಗ ಚಹಾ ಕೂಡಾ ನಾವೇ ಕುಡಿಸಿದ್ದು. ಕಾರ್ಯಕರ್ತರ ಊಟ, ವಾಹನ ಪೆಟ್ರೋಲ್‌ ಅಗತ್ಯಕ್ಕೆ ಹಣ ಕೇಳಿದ್ದೆವು. ಆದರೆ, ಅದನ್ನೇ ಉಲ್ಟಾ ಮಾಡಿ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾಳೆ.

ಅವಳು ಗೆಲ್ಲಬೇಕೆಂಬ ಉದ್ದೇಶದಿಂದ ಚುನಾವಣೆಗೆ ನಿಂತಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಂದ ಹಣ ಮಾಡೋ ಉದ್ದೇಶದಿಂದ ನಿಂತಿದ್ದಾಳೆ.

ಮೂರು ಬಿಟ್ಟವರು ನಮ್ಮ ಬಗ್ಗೆ ಮಾತಾಡೋದು ಸರಿಯಲ್ಲ. ನಾನು ಇನ್ನೂ ಜೆಡಿಎಸ್‌ನಲ್ಲೇ ಇದ್ದೇನೆ ಹೊರತು ಕಾಂಗ್ರೆಸ್ ಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಜೆಡಿಎಸ್ ನ ಹಲವು ನಾಯಕರು ಕಾಂಗ್ರೆಸ್ ಭೀಮಣ್ಣ ನಾಯ್ಕ ಪರ ಇದ್ದಾರೆ.ಕೆಲವರು ಬಹಿರಂಗವಾಗಿ ಬೆಂಬಲ ನೀಡಿದರೆ ಹಲವರು ಆಂತರಿಕ ಬೆಂಬಲ ನೀಡಿದ್ದಾರೆ.

ಯಾವ ನಾಯಕರೂ ಬರಲಿಲ್ಲ ಕ್ಷೇತ್ರಕ್ಕೆ!


ಮೊದಲು ಚುನಾವಣೆ ಪ್ರಚಾರಕ್ಕೆ ಪಕ್ಷದ ವರಿಷ್ಠ ದೇವೆಗೌಡ ಹಾಗೂ ಕುಮಾರಸ್ವಾಮಿ ಬರುತ್ತಾರೆ ಎನ್ನಲಾಗಿತ್ತು.ನಂತರ ಪ್ರಜ್ವಲ್ ರೇವಣ್ಣ ಬರುತ್ತಾರೆ ಎನ್ನಲಾಯಿತು ಆದರೇ ಅವರ್ಯಾರೂ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿಲ್ಲ.

ಇನ್ನು ಜಿಲ್ಲೆಯವರೇ ಆದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಚೈತ್ರ ಗೌಡ ಪರ ಪ್ರಚಾರ ಮಾಡುತ್ತಾರೆ ಎನ್ನಲಾಗಿತ್ತು ಆದರೇ ಅವರು ಇತ್ತ ಮುಖ ಹಾಕಿ ಸಹ ನೋಡದೇ ಬೆಂಗಳೂರಿನ ಕಡೆ ತೆರಳಿದ್ದಾರೆ.
ಇನ್ನು ಪಕ್ಷದಿಂದ ಟೋಕನ್ ಕಾರ್ಡ ನಂತೆ ಚೈತ್ರ ಗೌಡರನ್ನು ಬಳಸಿಕೊಂಡಿದ್ದು ಯಾಕಾದ್ರು ಚುನಾವಣೆಗೆ ನಿಂತೆನೋ ಎಂಬಂತಾಗಿದೆ ಎಂದು ಚೈತ್ರ ಗೌಡ ಹಿಡಿ ಶಾಪ ಹಾಕುವಂತಾಗಿದೆ.
Leave a Reply

Your email address will not be published. Required fields are marked *