ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಸಿಲೆಂಡರ್ ಕೃತಕ ಅಭಾವ! ನಕಲಿ ಪಾಸ್ ಗಳ ಹಾವಳಿಗೆ ಸುಸ್ತೋ ಸುಸ್ತು!

457

ಕಾರವಾರ:- ಇಡೀ ಕರ್ನಾಟಕ ಸದುದ್ದೇಶಕ್ಕಾಗಿ ಲಾಕ್ ಡೌನ್ ಮಾಡಲಾಗಿದೆ.ಜನರ ಅಗತ್ಯ ವಸ್ತುಗಳಿಗೆ ತೊಂದತೆಯಾಗಬಾರದು ಎಂದು ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿದೆ.
ಆದರೇ ಲಾಕ್ ಡೌನ್ ನನ್ನೇ ನೆಪವಾಗಿಟ್ಟುಕೊಂಡು ವ್ಯಾಪಾರಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಲಿಗೆ ಮಾಡಲು ಹೊರಟಿದ್ದಾರೆ.ಅದರ ಕೆಲವು ವಿವರಗಳು ಇಲ್ಲಿವೆ.

ಗ್ಯಾಸ್ ಸಿಲೆಂಡರ್ ಇದ್ದರೂ ಸಿಗದ ಸಿಲೆಂಡರ್!

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಭಾರತ್ ಗ್ಯಾಸ್,ಹೆಚ್.ಪಿ ಗ್ಯಾಸ್ ಗಳನ್ನು ಒಂದು ವಾರದ ಹಿಂದೆ ಬುಕ್ ಮಾಡಿದವರಿಗೆ ಈವರೆಗೂ ಗ್ಯಾಸ್ ವಿತರಣೆಯಾಗಿಲ್ಲ. ಜನ ಕೇಳಿದರೆ ಸ್ಟಾಕ್ ಇಲ್ಲಾ ಎನ್ನುತ್ತಾರೆ.ಅಧಿಕಾರಿಗಳನ್ನು ಕೇಳಿದರೆ ಸ್ಟಾಕ್ ಇದೆ ಎನ್ನುತ್ತಾರೆ.ಆದರೇ ಜನರಿಗೆ ಗ್ಯಾಸ್ ಸಿಲೆಂಡರ್ ಮಾತ್ರ ಸಿಗದೇ ಕಾಲಿ ಸಿಲೆಂಡರ್ ನಲ್ಲಿಯೇ ದಿನ ದೂಡುವಂತಾಗಿದ್ದು ಕಷ್ಟಪಟ್ಟು ಪೊಲೀಸರ ಏಟು ತಿಂದು ಗ್ಯಾಸ್ ಏಜನ್ಸಿ ಕಚೇರಿಗೆ ಹೋಗಿ ಗಲಾಟೆ ಮಾಡಿದವರಿಗೆ ಮಾತ್ರ ಗ್ಯಾಸ್ ಕೊಡಲಾಗುತ್ತಿದೆ. ಉಜ್ವಲ ಯೋಜನೆಯಡಿ 80 ಸಾವಿರ ಅಡಿಗೆ ಅನಿಲ ಸಂಪರ್ಕ ಹೊಂದಿದವರಿದ್ದಾರೆ,ಇವರಿಗೆ ಮೂರು ತಿಂಗಳು ಉಚಿತ ಗ್ಯಾಸ್ ಪೂರೈಕೆ ಮಾಡಲಾಗಿತ್ತದೆ,ಗ್ಯಾಸ್ ಪಡೆದುಕೊಂಡ ಗ್ರಾಹಕರಿಗೆ ಸರ್ಕಾರವೇ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡುವುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಉಪನಿರ್ದೇಶಕ ಪುಟ್ಟುಸ್ವಾಮಿಯವರು ಮಾಹಿತಿ ನೋಡಿದ್ದು ಕೃತಕ ಅಭಾವ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ನಿಗದಿಮಾಡಿದ ಬೆಲೆಗಿಂತ ಅಧಿಕ ದರ! ಗ್ರಾಹಕರ ಜೇಬು ಕಾಲಿ!

ಜಿಲ್ಲೆಯಲ್ಲಿ ಆಯಾ ಸ್ಥಳೀಯ ಭಾಗದಲ್ಲಿ ತರಕಾರಿ ಬೆಲೆಗಳನ್ನು ನಿಗದಿಪಡಿಸಲಾಗಿದೆ.ಇದರ ಜೊತೆಗೆ ಜಿನಸಿ ಪದಾರ್ಥಗಳ ಬೆಲೆಯೂ ನಿಗದಿಯಾಗಿದೆ.ಆದರೇ ಕಾರವಾರದಲ್ಲಿ ಸಾಯಿ ಜಿನಸಿ ಸ್ಟೋರ್ ಸೇರಿದಂತೆ ಹಲವು ಕಡೆ ದುಪ್ಪಟ್ಟು ದರ ಪಡೆಯುತಿದ್ದಾರೆ.ಗ್ರಾಹಕರು ಅನಿವಾರ್ಯವಾಗಿ ಕೊಂಡುಕೊಳ್ಳುವ ಸ್ಥಿತಿ ಎದುರಾಗಿದ್ದು ಅಲ್ಪ ಸೊಲ್ಪ ಉಳಿಸಿದ ಹಣವೂ ಕರ್ಚಾಗುವ ಮೂಲಕ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಇದು ಜಿಲ್ಲೆಯ ಉಳಿದಭಾಗಕ್ಕೂ ಹೊರತಾಗಿಲ್ಲ.

ಪಾಸ್ ಗಳ ದುರ್ಭಳಕೆ!


ಜಿಲ್ಲಾಡಳಿತದಿಂದ ವ್ಯಾಪಾರಿಗಳಿಗೆ ಸೇರಿದಂತೆ ಅವಷ್ಯವಿರುವ ಸೀಮಿತ ಪಾಸ್ ಗಳನ್ನು ನೀಡಿದೆ.
ಆದರೇ ಕೆಲವು ಪಾಸ್ ಗಳನ್ನು ನಕಲಿ ಮಾಡಿದರೆ ಇನ್ನು ಕೆಲವು ಪಾಸ್ ಗಳನ್ನು ಅಗತ್ಯ ಇರುದ ಜನರಿಗೂ ನೀಡಿ ಪೊಲೀಸರಿಗೆ ತಲೆನೋವಾಗುವಂತೆ ಮಾಡಲಾಗಿದ್ದು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.

ಹಳಿಯಾಳದಲ್ಲಿ ಜನ ಬೇಕಾಬಿಟ್ಟಿ ಓಡಾಡುತ್ತಿರುವುದು.

ಜಿಲ್ಲೆಯ ಹಳಿಯಾಳದಲ್ಲಿ ಪುರಸಭೆಯಿಂದ – 300
ಹಳಿಯಾಳ ತಹಶೀಲ್ದಾರ್ ಕಚೇರಿಯಿಂದ 150 ಕ್ಕೂ ಹೆಚ್ಚು ,ಎ.ಪಿ.ಎಮ್ ಸಿ ಯಿಂದ 70ಕ್ಕೂ ಹೆಚ್ಚು
ಅಂದಾಜು 500ಕ್ಕೂ ಹೆಚ್ಚು ಪಾಸ್ ನೀಡಲಾಗಿದ್ದು ತುರ್ತು ಸೇವೆಗಳಿಗೆ ಪ್ರತಿನಿತ್ಯ
ಕೊವಿಡ್-19 ಪಾಸ್ ನೀಡಲಾಗುತ್ತಿದೆ.‌ ಆದರೇ ಈ ಪಾಸ್ ಗಳನ್ನು ಅಗತ್ಯವಿಲ್ಲದವರೂ ಪಡೆದುಕೊಂಡು ನಗರದಲ್ಲಿ ಸುತ್ತಾಟ ಮಾಡುತಿದ್ದು ಹಳಿಯಾಳ ಪಟ್ಟಣದಲ್ಲಿ ಪಾಸ್ ಇದ್ದವರ ಸಂತಯೇ ಜರುಗುತಿದ್ದು ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತಿದ್ದಾರೆ.

ಪತ್ರಕರ್ತರ ಪಾಸ್ ದುರುಪಯೋಗ!

ಜಿಲ್ಲಾಧಿಕಾರಿಗಳು ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಯಾಗಬಾರದು ಎಂಬ ಕಾರಣದಿಂದ ಕಾರ್ಯ ನಿರತ ಪತ್ರಕರ್ತರಿಗೆ ವಾರ್ತಾ ಇಲಾಖೆ ಮೂಲಕ ಪಾಸ್ ವಿತರಣೆ ಮಾಡಲಾಗಿದ್ದು ಜಿಲ್ಲಾಧಿಕಾರಿಗಳ ಸಹಿ ಕೂಡ ಇದೆ.
ಆದರೇ ಈ ಪಾಸ್ ನಲ್ಲಿ ಹೆಸರು,ಪತ್ರಿಕೆ ಹೆಸರು ಯಾವುದನ್ನೂ ವಾರ್ತಾ ಇಲಾಖೆ ನಮೋದಿಸದೇ ಬೇಕಾ ಬಿಟ್ಟಿ ಪತ್ರಕರ್ತರಲ್ಲದವರಿಗೂ ನೀಡಿದ್ದು ಪತ್ರಕರ್ತರು ಎಂದು ಹೇಳಿ ಅನಗತ್ಯ ಸಂಚಾರದ ಜೊತೆ ತಮ್ಮ ಸ್ನೇಹಿತರ ವಾಹನಗಳಿಗೆ ಕೆಲವರು ಪೆಟ್ರೋಲ್ ,ಡಿಸೆಲ್ ಹಾಕಿಸಿದರೆ ಇನ್ನು ಕೆಲವರು ಈ ಪಾಸ್ ಬಳಸಿ ಪೆಟ್ರೋಲ್ ಮಾರಾಟ ಸಹ ಮಾಡುತಿದ್ದಾರೆ.ಪತ್ರಕರ್ತರ ಪಾಸ್ ತೋರಿಸುವುದರಿಂದಾಗಿ ಪೊಲೀಸರು ತನಿಖೆ ಮಾಡದೇ ಅವರನ್ನು ಬಿಡುತಿದ್ದಾರೆ.ಇದರ ಜೊತೆ ಪತ್ರಕರ್ತರಲ್ಲದವರೂ ಪ್ರೆಸ್ ಎಂದು ನಾಮಫಲಕ ಹಾಕಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುತಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಜನರ ಒಳಿತಿಗಾಗಿ ಎಲ್ಲಾ ಕಾರ್ಯ ಮಾಡುತ್ತಿದೆ.ಆದರೇ ಹಲವರು ಇದರ ಲಾಭ ಪಡೆದು ಹಣ ಮಾಡಲು ಹೊರಟಿದ್ದಾರೆ. ಇನ್ನು ಕೆಲವರು ಸರ್ಕಾರದ ಆದೇಶ ಉಲ್ಘಂಘಿಸುವ ಜೊತೆ ತಾವು ಬಲಿಯಾಗುವ ಜೊತೆ ಮತ್ತೊಬ್ಬರನ್ನೂ ಬಲಿ ಪಡೆಯುವ ಪ್ರತಿನಿಧಿಗಳಾಗುತಿದ್ದಾರೆ.ಪೊಲೀಸರು ಪ್ರತಿ ದಿನ ಶ್ರಮ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸುತಿದ್ದು ಫಾಸ್ ಗಳ ಹಾವಳಿಯಿಂದ ಜನರನ್ನು ನಿಯಂತ್ರಿಸದ ಸ್ಥಿತಿಗೆ ತಲುಪಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ