BREAKING NEWS
Search

ಹೊಸವರ್ಷಾಚರಣೆಗೆ ಗೋವಾ ಕಾಲಿ ಕಾಲಿ! ಕಾರವಾರದ ಪ್ರವಾಸೋದ್ಯಮದಲ್ಲೂ ಇಳಿಮುಖ ವಿದೇಶಿಗರಿಲ್ಲದೇ ಬಿಕೋ ಎನ್ನುತ್ತಿದೆ ಬೀಚುಗಳು!

633

ಕಾರವಾರ/ಗೋವಾ:- ಪ್ರವಾಸಿಗರ ಸ್ಪರ್ಗ ಗೋವಾ ಎಂದೇ ಪ್ರಸಿದ್ಧ .ಹಾಗೆಯೇ ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆಯೂ ಪ್ರವಾಸೋಧ್ಯಮಕ್ಕೆ ಪ್ರಸಿದ್ಧ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರ ಎಂದರೆ ಹೊಸ ವರ್ಷಾಚರಣೆ ಹಾಗೂ ರಜೆಯ ಮೋಜು ಅನುಭವಿಸಲು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರಾ ಹಾಗೂ ಗೋವಾ ರಾಜ್ಯಕ್ಕೆ ದೇಶ ವಿದೇಶಿಗರು ಮುಗಿ ಬೀಳುತಿದ್ದರು. ಆದರೇ ಈ ವರ್ಷ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗ ಹಾಗೂ ಇದಕ್ಕೆ ಅಂಟಿಕೊಂಡಿರುವ ಗೋವಾ ರಾಜ್ಯದಲ್ಲಿ ದೇಶ ,ವಿದೇಶಿಗರ ಪ್ರವಾಸಿ ಸಂಖ್ಯೆ ಈ ವರ್ಷದ ಕೊನೆ ಅವಧಿಗೆ ಇಳಿಮುಖವಾಗಿದೆ.

ಗೋವಾ ರಾಜ್ಯದಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ದೇಶ ವಿದೇಶದ ಜನರು ಕಿಕ್ಕಿರಿದು ತುಂಬುತಿದ್ದರು.
ಈ ವರ್ಷದ ಕ್ರಿಸ್ ಮಸ್ ಆಚರಣೆಯ ಹಬ್ಬದಂದಿಂದ ಈ ವಾರವಿಡೀ ಪ್ರವಾಸಿಗರ ನಿರೀಕ್ಷೆಯನ್ನು ಮಾಡಲಾಗಿತ್ತು.
ಆದರೇ ನಿರೀಕ್ಷೆಗಳಿಗಿಂತ ಪ್ರವಾಸಿಗರು ಬರಲಿಲ್ಲ.
ಕಳೆದಬಾರಿ ಹೋಲಿಸಿದರೆ ಈ ಭಾರಿ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸಿಗರ ಆಗಮನದ ಸಂಖ್ಯೆ 50% ಇಳಿಮುಖವಾಗಿದೆ.


ಗೋವಾ ರಾಜ್ಯಕ್ಕೆ ಪ್ರತಿ ವರ್ಷ ಆರು ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಗೋವಾ ರಾಜ್ಯದ ಪ್ರವಾಸೋಧ್ಯಮ ಇಲಾಖೆ ಹೇಳುತ್ತದೆ.ಆದರೇ ಈ ಬಾರಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂಬುದರ ಬಗ್ಗೆ ಅಂಕಿ ಅಂಶ ಕಲೆ ಹಾಕುದ್ದು ಈ ವರ್ಷ ದ ಡಿಸೆಂಬರ್ ನಲ್ಲಿ 50% ಕಮ್ಮಿಯಾಗಿರುವ ಕುರಿತು ಮಾಹಿತಿ ನೀಡಿದೆ.

ಗೋವಾ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲು ಕಾರಣಗಳಿವು:-

ದೇಶದಲ್ಲಿ ಪ್ರೊಟೆಸ್ಟ್ ಎಗನೆಸ್ಟ್ ಸಿಟಿಜನ್ ಶಿಪ್ ಯಾಕ್ಟ್ ಪ್ರತಿಭಟನೆ ಕಾವು ಹೆಚ್ಚಾಗಿದೆ.ಇದರ ಜೊತೆಗೆ ಇದೇ ತಿಂಗಳು 31 ರಂದು ಗೋವಾ ದಲ್ಲಿ ಮಹದಾಯಿ ಹೋರಾಟ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಸಲು ಅಲ್ಲಿನ ಸಂಘಟನೆಗಳು ಕರೆಕೊಟ್ಟಿರುವುದು.ಇದರ ಜೊತೆ ದೇಶ ವಿದೇಶದಿಂದ ಪ್ರವಾಸಿಗರನ್ನು ಕರೆ ತರುತಿದ್ದ ಪ್ರವಾಸೋಧ್ಯಮ ಕಂಪನಿಗಳು ಆರ್ಥಿಕ ಸಂಕಟದಿಂದ ಮುಚ್ಚಿರುವುದು ಕೂಡ ಗೋವಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಇನ್ನು TTAG ,ಗೋವಾ ಟೂರಿಜಮ್ ಡವಲಪ್ ಮೆಂಟ್ ಕಾರ್ಪರೇಷನ್ ,ವ್ಯಾಪಾರಿಗಳನ್ನು ಒಳಗೊಂಡ ಸಭೆ ಕರೆದಯ ಪ್ರವಾಸಿರನ್ನು ಸೆಳೆಯಲು ಪ್ರಯತ್ನಿಸಬೇಕೆಂದು ಅತಿಹೆಚ್ಚು ಪ್ರವಾಸಿಗರು ಬರುವ ಕಲಂಗಟ್ ಕಾಸ್ಟೂಯನ್ಸಿಯ ಶಾಸಕ ಮೈಕಲ್ ಲೋಬೋ ಒತ್ತಾಯಿಸಿದ್ದಾರೆ.

ಬಿಕೋ ಬಿಕೋ ಗೋವಾ!


ವರ್ಷದ ಕೊನೆಯ ವಾರ ಸಿಂಕ್ವೇರಿಮ್ ,ಕಲ್ಲಂಗಟ್ ಬೀಚ್,ಕಾಂಡೋಲಿಮ್, ಭಾಗ, ನಾರ್ಥ ಗೋವಾ ಡಿಸ್ಟಿಕ್ ಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತಿದ್ದರು.ಆದರೇ ಈ ಬಾರಿ ಇಳಿಮುಖವಾಗಿದ್ದು ಎಲ್ಲಾ ಬೀಚುಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತಿದ್ದು ಕೆಲವು ಹೋಟಲ್ ,ರೆಸಾರ್ಟ, ಪಬ್ ಗಳಲ್ಲಿ ಪ್ರವಾಸಿಗರ ಆಕರ್ಷಣೆಗೆ ದರ ಕೂಡ ಇಳಿಮುಖ ಮಾಡಿವೆ.ಆದರೇ ಪ್ರವಾಸಿಗರು ಮಾತ್ರ ಇನ್ನೂ ಇತ್ತ ಮುಖ ಮಾಡದಿರುವುದು ಇಲ್ಲಿನ ವ್ಯಾಪಾರಿಗಳಲ್ಲಿ ಭಯ ಹುಟ್ಟಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಇಳಿಮುಖವಾಯ್ತು ಪ್ರವಾಸಿಗರ ಸಂಖ್ಯೆ!

ಚಿತ್ರಗಳು:- ಸಂದೀಪ್ ಸಾಗರ್.

ನೆರೆಯ ಗೋವಾಕ್ಕೆ ಹೋಲಿಸಿದರೆ ಕರ್ನಾಟಕದ ಕರಾವಳಿ ಭಾಗ ಅಲ್ಪ ಮಟ್ಟಿಗೆ ಖುಷಿ ಪಡಬಹುದು.
ಉತ್ತರ ಕನ್ನಡ ಜಿಲ್ಲೆ ಗೋವಾ ರಾಜ್ಯವನ್ನು ಅಂಟಿಕೊಂಡಿದೆ.ಹೀಗಾಗಿ ಗೋವಾಕ್ಕೆ ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುವ ಪ್ರವಾಸಿಗರು ಇಲ್ಲಿನ ಗೋಕರ್ಣ,ಕಾರವಾರ,ಮುರಡೇಶ್ವರದತ್ತ ಮುಖ ಮಾಡುತ್ತಾರೆ‌.ಆದರೇ ಈ ಬಾರಿ ಕಳೆದ ಬಾರಿಗಿಂತ ಇಳಿಮುಖವಾಗಿದ್ದು ಜನರಲ್ಲಿ ಆಸಕ್ತಿ ಕಡಿಮೆ ಮಾಡಿದೆ.
2018 ರ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ ದೇಶಿಯರ ಪ್ರವಾಸಿಗರ ಸಂಖ್ಯೆ -6,10,994 ,ವಿದೇಶಿಗರ ಪ್ರವಾಸಿಗರು-2023,ಒಟ್ಟು 6,13,016 ಲಕ್ಷ ಜನ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದಾರೆ. ಆದರೇ 2019 ರ ಪ್ರಕಾರ ದೇಶಿಯ ಪ್ರವಾಸಿಗರು – 5,21880 ,ವಿದೇಶಿಯ ಪ್ರವಾಸಿಗರು-3839, ಒಟ್ಟು 5,25,719 ಇದ್ದು ಈ ಬಾರಿ ಇಳಿಮುಖವಾಗಿದೆ.

ವಿದೇಶಿ ಪ್ರವಾಸಿಗರಲ್ಲಿ ಏರಿಕೆ


ಕಳೆದ ಬಾರಿ ಹೋಲಿಸಿದರೇ ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.
2018, ಡಿಸೆಂಬರ್ ರಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾದ ಗೋಕರ್ಣ -836, ಓಂ ಬೀಚ್-625 ,ಮುರಡೇಶ್ವರ -395 ,ಕಾರವಾರ ಕಡಲ ತೀರ- 94 ಜನ ಭೇಟಿ ನೀಡಿದ್ದು ಒಟ್ಟು ವಿದೇಶಿ ಪ್ರವಾಸಿಗರು-2023 ಆಗಿದೆ.

2019 ಡಿಸೆಂಬರ್ ನಲ್ಲಿ ಗೋಕರ್ಣ -2568 ,ಓಂ ಬೀಚ್-650,ಮುರಡೇಶ್ವರ -347,ಕಾರವಾರ-100,ಕಾಸರಕೋಡು ಬೀಚ್- 150(ಇತರೆ ಯನ್ನು ಹೊರತುಪಡಿಸಿ ಪ್ರಮುಖ ಸ್ಥಳಗಳದ್ದು ಮಾತ್ರ ಸಂಖ್ಯೆಗಳು)
ಒಟ್ಟು ವಿದೇಶಿಯ ಪ್ರವಾಸಿಗರು-3839 ಆಗಿದ್ದು ಕಳೆದಬಾರಿಗಿಂತ ಈ ಬಾರಿ ಏರಿಕೆ ಕಂಡಿದೆ.

ಹೊಸವರ್ಷಕ್ಕಿಲ್ಲ ಸೆಲಬ್ರೇಷನ್!
ಕಳೆದ ವರ್ಷ ಹೊಸ ವರ್ಷವನ್ನು ದೊಡ್ಡ ದೊಡ್ಡ ಪಾರ್ಟಿಯನ್ನು ಆಚರಿಸಿ ಹೊಸವರ್ಷಾಚರಣೆಯನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಗುತಿತ್ತು‌.ಇದಕ್ಕಾಗಿ ಖಾಸಗಿ ಹೋಟಲ್,ರೆಸಾರ್ಟ ಗಳಲ್ಲಿ ಮ್ಯೂಸಿಕಲ್ ಪಾರ್ಟಿ ಸಹ ಇಡುತಿತ್ತು. ಆದರೇ ಕೇಂದ್ರ ಸರ್ಕಾರದ ಜಿ.ಎಸ್‌ಟಿ ಹಾಗೂ ಮನೋರಂಜನಾ ಶುಲ್ಕ ಆಯೋಜಕರಿಗೆ ದುಬಾರಿಯಾಗಿದ್ದು ಇದರ ಜೊತೆ ಪ್ರವಾಹದಿಂದ ಜಿಲ್ಲೆಗೆ ಆದ ಹಾನಿಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ ಹಾಗೂ ಇತರೆ ಕಾರಣದಿಂದ ಕಾರವಾರ ದಲ್ಲಿ ಕೇವಲ ಒಂದು ಹೋಟೆಲ್ ,ಗೋಕರ್ಣದಲ್ಲಿ ಒಂದು ರೆಸಾರ್ಟ ಹೊರತುಪಡಿಸಿ ಉಳಿದ ಭಾಗದಲ್ಲಿ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳು ಆಯೋಜನೆ ಗೊಂಡಿಲ್ಲ‌‌‌ .
ಒಟ್ಟಿನಲ್ಲಿ ಈ ವರ್ಷದ ಹೊಸವರ್ಷಾಚರಣೆ ಪ್ರವಾಸಿಗರ ಸ್ವರ್ಗದ ನಾಡಿನಲ್ಲಿ ಬಿಕೋ ಎನ್ನಿಸುತಿದ್ದು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉತ್ಸುಕತೆ ಜನರಲ್ಲಿ ಅಷ್ಟಾಗಿ ಕಾಣುತಿಲ್ಲ.




Leave a Reply

Your email address will not be published. Required fields are marked *