BREAKING NEWS
Search

ಕೊನಗೂ ಸಿಕ್ತು ಉತ್ತರ ಕನ್ನಡ ಸಂತ್ರಸ್ತರಿಗೆ ಹೊಸ ಪರಿಹಾರ:ಸಂಸದರ ನಿಯೋಗದಿಂದ ಸಿಕ್ಕಿದ್ದೇನು ಗೊತ್ತಾ?!

544

ಬೆಂಗಳೂರು:-ಉತ್ತರ ಕನ್ನಡ ಜಿಲ್ಲೆಯ ನೆರೆಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಟಿ ನೀಡದೇ ಇಲ್ಲಿನ ಜನರ ಅಕ್ರೋಶಕ್ಕೆ ಕಾರಣವಾಗಿದ್ರು.
ಇನ್ನೂ ನಮ್ಮ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೆಲವು ಪ್ರದೇಶಕ್ಕೆ ಬೇಟಿ ನೀಡಿ ಅಧಿಕಾರಿಗಳು ಎಲ್ಲವನ್ನೂ ನೋಡಿಕೊಳ್ತಾರೆ ಎಂದು ಹೇಳುವ ಮೂಲಕ ಸ್ಥಳದಲ್ಲೇ ಜನರಿಂದ ಅಕ್ರೋಶವನ್ನು ಎದುರಿಸಬೇಕಾಯ್ತು.
ಇನ್ನು ಕದ್ರ,ಮಲ್ಲಾಪುರ ಭಾಗದಲ್ಲಿ ಪ್ರವಾಹದಿಂದ ಅಂಗಡಿ ಕಳೆದುಕೊಂಡಿದ್ದ ಸಂತ್ರಸ್ಥರಿಗೆ ಹಣ ಖಾತೆಗೆ ಬಂದು ವಾಪಾಸಿಗಿದ್ದರೇ ಕೃಷಿ ಜಮೀನು, ಬಗರ್ ಹುಕುಂ ,ನದಿ ತಡದಲ್ಲಿ ಮನೆ ನಿರ್ಮಿಸಿಕೊಂಡು ತೊಂದರೆ ಅನುಭವಿಸಿದ ಹಲವರಿಗೆ ಹಣವೇ ಬರಲಿಲ್ಲ.

ಆದರೇ ಕೊನೆಗೂ ನಮ್ಮ ಜಿಲ್ಲೆಗೆ ಆದ ಅನ್ಯಾಯವನ್ನು ಸರಿಪಡಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಂಸದರೊಂದಿಗೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ನೆರೆಯಿಂದ ಆದ ಸಮಸ್ಯೆ,ಪರಿಹಾರ ಮತ್ತು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ರು.
ಇದರ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಸಂಸದರೊಂದಿಗೆ ಸಿ.ಎಂ ಭೇಟಿಯಾದ ಸಂದರ್ಭ.

ಕೃಷಿ ಜಮೀನಿನಲ್ಲಿ ಕಂದಾಯ ಕಟ್ಟದ ಹಾಗೂ ಅತಿಕ್ರಮಣ ಮನೆಗಳಿಗೆ ಹಣ ಮಂಜೂರಿಗೆ ಒಪ್ಪಿಗೆ ನೀಡಲಾಗಿದೆ.

ಇದರಿಂದ ಜಿಲ್ಲೆಯ ಹಳಿಯಾಳ,ದಾಂಡೇಲಿ, ಯಲ್ಲಾಪುರ,ಅಂಕೋಲ,ಶಿರಸಿ,ಕಾರವಾರ ಭಾಗದ ಸಂತ್ರಸ್ತರಿಗೆ ಅನುಕೂಲವಾಗಲಿದೆ.

ನದಿ ತಡದಲ್ಲಿರುವ ಎಲ್ಲಾ ಮೀನುಗಾರ ಕುಟುಂಬಕ್ಕೆ ತಲಾ 10 ಸಾವಿರ ಮಂಜುರು.

ಇದರಿಂದ ಕರಾವಳಿ ಭಾಗದ ಅಘನಾಶಿನಿ,ಶರಾವತಿ,ಕಾಳಿ ನದಿ ಭಾಗದ ಸಂತ್ರಸ್ತರಿಗೆ ಅನುಕೂಲವಾಗಲಿದೆ.

ಪ್ರವಾಹದಿಂದ ಕಮರ್ಷಿಯಲ್ ಅಂಗಡಿಗಳಿಗೆ ತಲಾ 10 ಸಾವಿರ ಮಂಜೂರು.

ಇದರಿಂದ ಕದ್ರ,ಮಲ್ಲಾಪುರ,ಕಾರವಾರ ಸೇರಿದಂತೆ ಹಲವು ಸಂತ್ರಸ್ಥ ವ್ಯಾಪಾರಿಗಳಿಗೆ ಅನುಕೂಲ ಆಗಲಿದೆ.

ಕುಮಟಾ ಭಾಗದಲ್ಲಿನ ಕಿಣಿ ಯಲ್ಲಿ ಮೀನುಗಾರ ಕುಟುಂಬಕ್ಕೆ ಅಪಾರ್ಟಮ್ಮೆಂಟ್ ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ಆದೇಶ, ಒಂದು ಕುಟುಂಬಕ್ಕೆ ತಲಾ ಏಳುವರೆ ಲಕ್ಷದಂತೆ 5ಲಕ್ಷ ರಾಜೀವ್ ಗಾಂಧಿ ನಿಗಮ,ಎರಡೂವರೆ ಲಕ್ಷ ಮೀನುಗಾರಿಕಾ ಇಲಾಖೆ ಯಿಂದ ಮಂಜೂರಾತಿ. ಪ್ರಾಯೋಗಿಕವಾಗಿ 50 ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸೂಚನೆ.

ಕುಮಟಾ ದಲ್ಲಿ ಹಾಲಕ್ಕಿ ಗೌಡ ಜನಾಂಗದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಕೋಟಿ ಮಂಜೂರು.

ಜಿಲ್ಲೆಯಲ್ಲಿ ಈ- ಸೊತ್ತು ಸಮಸ್ಯೆಯಾಗಿದ್ದು ಸರಳೀಕರಣಕ್ಕೆ ಸಮ್ಮತಿ.

60 ಪಟ್ಟಣ ಪಂಚಾಯ್ತಿ/ಪುರಸಭೆಗಳು ಈ ವರೆಗೂ ಚುನಾವಣೆ ನಡೆಯದೆ ಕೆಲವು ಕೋರ್ಟ ಮೆಟ್ಟಿಲೇರಿದ್ದು ಯಾವ ಪ.ಪಂ/ಪುರಸಭೆಗಳು ಕೋರ್ಟ ಗೆ ಹೋಗಿಲ್ಲವೂ ಅವುಗಳಿಗೆ ಚುನಾವಣೆ ನಡೆಸಲು ಸಂಬಂಧ ಪಟ್ಟ ಇಲಾಖೆಗೆ ಯಡಿಯೂರಪ್ಪ ನವರಿಂದ ಆದೇಶ.

ಇನ್ನು ನೆರೆ ಪ್ರದೇಶದ ಪ್ರತಿ ತಾಲೂಕಿಗೂ 1ಕೋಟಿ ಅನುದಾನ ನೀಡಲಾಗಿದೆ. ಇದಲ್ಲದೇ ಶರಾವತಿ ಎಡ ಮತ್ತು ಬಲ ದಂಡೆಯಮೇಲೆ ವಾಸಿಸುತ್ತಿರುವ ನೆರೆ ಹಾವಳಿ ಸಂತ್ರಸ್ತರ ಮನೆ ದುರಸ್ತಿಗಾಗಿ 1ಲಕ್ಷ ,ಸಂಪೂರ್ಣ ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ಹಣವನ್ನು ತಕ್ಷಣದಲ್ಲಿ ಮಂಜೂರು ಮಾಡಲು ಸೂಚನೆ ನೀಡಿದ್ದು ಈ ತಿಂಗಳ ಕೊನೆಯೊಳಗೆ ಜಾರಿ ಬರಲಿದೆ.

ಸಂಸದ ಅನಂತಕುಮಾರ್ ಹೆಗಡೆಯವರ ನಿಯೋಗದಲ್ಲಿ ಹಳಿಯಾಳ ಮಾಜಿ ಶಾಸಕ ಸುನಿಲ್ ಹಗಡೆ,ಕಾರವಾರದ ಶಾಸಕಿ ರೂಪಾಲಿ ನಾಯ್ಕ,ಕುಮಟಾ ಶಾಸಕ ದಿನಕರ ಶಟ್ಟಿ,ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಪ್ರಮುಖರಿದ್ದರು.
Leave a Reply

Your email address will not be published. Required fields are marked *