ಶರಾವತಿ ಉಳುವಿಗಾಗಿ ಹೊನ್ನಾವರ ಬಂದ್!

43

ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವುದನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜೀವನದಿ ಶರಾವತಿ ಉಳಿಸಿ ಹೋರಾಟ ಸಮಿತಿಯಿಂದ ಇಂದು ಬಂದ್ ಆಚರಿಸಲಾಯಿತು.

ಶರಾವತಿ ನದಿ ನೀರು ಬೆಂಗಳೂರಿಗೆ ಕೊಡುವುದನ್ನ ವಿರೋಧಿಸಿ ನಡೆದ ಬಂದ್ ಗೆ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದ್ದು ಪಟ್ಟಣದ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ನಗರದ ಶರಾವತಿ ಸರ್ಕಲ್ ಬಳಿ ಸೇರಿರುವ ಪ್ರತಿಭಟನಾಕಾರರು ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯನ್ನು ವಿರೋಧಿಸಿದರು. ನಂತರ ತಹಶಿಲ್ದಾರರ ಕಚೇರಿಗೆ ತೆರಳಿ ಮನವಿ ನೀಡಲಾಯಿತು.

ಬಂದ್ ನಿಂದಾಗಿ ಹೊನ್ನಾವರ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು.

ಬಸ್, ಟೆಂಪೋ, ಆಟೋ ಸಂಚಾರ ಎಂದಿನಂತಿತ್ತು.




Leave a Reply

Your email address will not be published. Required fields are marked *