ಬನವಾಸಿ ತಾಲೂಕಿಗಾಗಿ ಬೀದಿಗಿಳಿದ್ರು ಜನ!ಸಮಗ್ರ ಉತ್ತರ ಕನ್ನಡಕ್ಕಾಗಿ ಆಗ್ರಹ!

453

ಕಾರವಾರ:- ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ತಾಲೂಕಾಗಿ ಮಾರ್ಪಾಡಿಸಬೇಕು ಹಾಗೂ ಬನವಾಸಿಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಒಂದೂವರೆ ಸಾವಿರಕ್ಕೂ ಅಧಿಕ ಜನರು ಬನವಾಸಿಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.

ಬನವಾಸಿಯ ಮಧುಕೇಶ್ವರ ದೇವಾಲಯದಿಂದ ಪಂಪ ವೃತ್ತದ ವರೆಗೆ ಬನವಾಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಾವಿರಾರು ಜನ ಬೃಹತ್ ಮೆರವಣಿಗೆ ನಡೆಸಿದರು. ಬನವಾಸಿ ಹೋಬಳಿಯನ್ನು ಜಿಲ್ಲೆಯಿಂದ ಬೇರ್ಪಡಿಸುವ ಪ್ರಸ್ತಾವನೆ ವಿರೋಧಿಸಿ ಧಿಕ್ಕಾರ ಕೂಗಿ, ಬನವಾಸಿ ಉಳಿಯಬೇಕು ಎಂದು ಒತ್ತಾಯಿಸಿದರು. ಬನವಾಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಳಿಯಬೇಕು ಎಂದು ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬನವಾಸಿ ಭಾಗದ 10 ಗ್ರಾಮ ಪಂಚಾಯತದ ಅಧ್ಯಕ್ಷ, ಸದಸ್ಯರು, 27 ಕ್ಕೂ ಅಧಿಕ ಹಳ್ಳಿಗಳಿಂದ ಜನರು, ಸ್ವಯಂ ಸೇವಾ ಸಂಘಗಳು, ಮಹಿಳಾ ಸಂಘದ ಪ್ರಮುಖರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸೇರಿ ಪ್ರತಿಭಟನೆಯನ್ನು ನಡೆಸಿದರು. ಬನವಾಸಿಯನ್ನು ಕ್ಷೇತ್ರ ಪರಿಗಣನೆ ಮಾಡಿ ತಾಲೂಕು ರಚನೆ ಮಾಡಿ, ಶಿರಸಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂದು ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮೂಲಕ ಮನವಿ ಸಲ್ಲಿಸಿದರು.
Leave a Reply

Your email address will not be published. Required fields are marked *