BREAKING NEWS
Search

ಶಿರಸಿ-ಅನ್ಯ ಕೋಮಿನ ಯುವಕನಿಂದ ಹಿಂದು ಯುವಕನಿಗೆ ಚಾಕು ಇರಿತ!

1479

ಕಾರವಾರ/ಶಿರಸಿ :- ಹಳೆ ದ್ವೇಷದ ಹಿನ್ನಲೆಯಲ್ಲಿ ಅನ್ಯಕೋಮಿನ ಯುವಕನೊರ್ವ ಹಿಂದೂ ಯುವಕನಿಗೆ ಚಾಕು ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ.

ಶಿರಸಿಯ ಗಣೇಶ ನಗರದ ಸಂದೀಪ ನಾಯ್ಕ ಚಾಕು ಇರಿತಕ್ಕೆ ಒಳಗಾದ ಹಿಂದೂ ಯುವಕನಾಗಿದ್ದಾನೆ. ಚಾಕು ಇರಿದ ಅನ್ಯಕೋಮಿನ ಆರೋಪಿಯೂ ಸಹ ಇದೇ ಬಡಾವಣೆಯವನಾಗಿದ್ದು ಹಳೆ ದ್ವೇಷದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ನಗರದ ಚಿಲಮೆ ಕೆರೆ ಬಳಿ ಇಬ್ಬರು ಕುಡಿದುಕೊಂಡು ಬರುತ್ತಿದ್ದಾಗ ದ್ವೇಷದ ಹಿನ್ನಲೆಯಿಂದ ವಾಗ್ವಾದ ನಡೆದು ಅನ್ಯಕೋಮಿನ ಯುವಕ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ. ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




One thought on “ಶಿರಸಿ-ಅನ್ಯ ಕೋಮಿನ ಯುವಕನಿಂದ ಹಿಂದು ಯುವಕನಿಗೆ ಚಾಕು ಇರಿತ!

Leave a Reply

Your email address will not be published. Required fields are marked *