ಯಲ್ಲಾಪುರ-ಸರಣಿ ಅಪಘಾತ ದಲ್ಲಿ ಕಾರವಾರ ಡಿಪೋ ಚಾಲಕ ಸಾವು!10 ಕ್ಕೂ ಹೆಚ್ಚು ಜನರಿಗೆ ಗಾಯ

704

ಕಾರವಾರ:-ಎರಡು ಬಸ್ ಹಾಗೂ ಟಾಟಾ ಬೊಲೆರೋ ವ್ಯಾನ್ ನಡುವೆ ಸರಣಿ ಅಪಘಾತ ಗೊಂಡು ಬಸ್ ಚಾಲಕ ಸ್ಥಳದಲ್ಲೇ ಸಾವು ಕಂಡು 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಕೋಳಿಕೇರಿ ಬಳಿ ನಡೆದಿದೆ.

ಘಡನೆಯಲ್ಲಿ ಗಾಯ ಗೊಂಡವರನ್ನು ಯಲ್ಲಾಪುರ ಆಸ್ಪತ್ರೆ ಗೆ ಸಾಗಿಸಿದ್ದು ಕಾರವಾರ ದಿಂದ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತಿದ್ದ ಸರಕಾರಿ ಸಾರಿಗೆ ಹಾಗೂ ನರಗುಂದಕ್ಕೆ ಹೋಗುತಿದ್ದ ಸರಕಾರಿ ಸಾರಿಗೆ ಬಸ್ ಮಳೆಯಿಂದಾಗಿ ಗಟ್ಟದ ಅಲ್ಪ ತಿರುವಿನಲ್ಲಿ ಬಸ್ ಸ್ಕಿಡ್ ಆಗಿದ್ದಿ ಈ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರವಾರದಿಂದ ಹುಬ್ಬಳ್ಳಿ ಗೆ ಹೋಗುತಿದ್ದ ಕಾರವಾರ ಡಿಪೋದ ಬಸ್ ಚಾಲಕ ಯಮುನಪ್ಪ ಎಂಬುವವರು ಸಾವು ಕಂಡಿದ್ದಾರೆ.
ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *