BREAKING NEWS
Search

ಕಾರವಾರದ ಶಿವಾಜಿ ಕಾಲೇಜಿನಲ್ಲಿ ಅರಳಿದ ರಂಗೋಲಿ-ಹೇಗಿದೆ ಗೊತ್ತಾ!

458

ಕಾರವಾರ‘:- ನವರಾತ್ರಿ ಉತ್ಸವದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸದಾಶಿವಗಡದಲ್ಲಿರುವ ಶಿವಾಜಿ ಕಾಲೇಜಿನಲ್ಲಿ 1967 ರಿಂದ ನವರಾತ್ರಿಯ ದಿನ ಕಾಲೇಜಿನ ಹಳೆಯ ಹಾಗೂ ಪ್ರಸ್ತುತ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಂಗೋಲಿಯನ್ನ ಪ್ರದರ್ಶನವನ್ನು ನಡೆಸಿದರು.

ರಂಗೋಲಿಯಲ್ಲಿ ಅರಳಿದ ವಿವಿಧ ಚಿತ್ರಗಳು ಇಲ್ಲಿವೆ ನೋಡಿ….

ರಂಗೋಲಿ ಪ್ರದರ್ಶನದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ದಿವಂಗತ ಸುಷ್ಮಾ ಸ್ವರಾಜ್ ಕ್ರಿಕೇಟಿಗ ವಿರಾಟ್ ಕೋಹ್ಲಿ, ಸೇರಿದಂತೆ ವಿವಿಧ ಭಾವಚಿತ್ರಗಳು ಜೊತೆಗೆ ಬಗೆ ಬಗೆಯ ಆಕರ್ಷಕ ರಂಗೋಲಿಗಳು ಪ್ರದರ್ಶನ ಗೊಂಡಿತು. ಜಿಲ್ಲೆಯ ಕಾರವಾರದ ಶಿವಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿ ಸಹ 52 ವರ್ಷದ ರಂಗೋಲಿ ಸ್ಪರ್ದೆ ಆಯೋಜನೆ ಮಾಡಲಾಗಿತ್ತು. ಕಾರವಾರ ತಾಲೂಕಿನ ಸುಮಾರು 50 ಕ್ಕೂ ಹೆಚ್ಚು ಕಲಾವಿದರು ಈ ಪ್ರದರ್ಶನದಲ್ಲಿ ಪಾಲ್ಗೊಂಡು ರಂಗೋಲಿಗಳನ್ನ ಬಿಡಿಸಿ ಪ್ರದರ್ಶಿಸಿದರು. ಸದಾಶಿವಗಡ, ಕಾರವಾರ, ಗೋವಾ ಮಹಾರಾಷ್ಟ್ರ, ಬೆಳಗಾವಿ ಸೇರಿದಂತೆ ಹಲವೆಡೆಯಿಂದ ನೂರಾರು ಜನ ಆಗಮಿಸಿ ರಂಗೋಲಿಗಳನ್ನ ನೋಡಿ ಸಕತ್ ಎಂಜಾಯ್ ಮಾಡಿದರು.

ಇನ್ನು ರಂಗೋಲಿ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ದಿವಂಗತ ಸುಷ್ಮಾ ಸ್ವರಾಜ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ರ ಬಾವಚಿತ್ರಗಳು ರಂಗೋಲಿಯಲ್ಲಿ ಮೂಡಿದ್ದು ಜನರ ಆಕರ್ಷಣೆಗೆ ಕಾರಣವಾಗಿತ್ತು. ಇದರ ಜೊತೆ ಹಲವು ನಟರ ಭಾವಚಿತ್ರಗಳನ್ನ ಸಹ ಬಿಡಿಸಲಾಗಿತ್ತು. ಇನ್ನು ಪ್ರಕೃತಿ ಚಿತ್ರದ ರಂಗೋಲಿ, ದೇವರ ಚಿತ್ರಗಳು ಸೇರಿದಂತೆ ಹಲವು ರಂಗೋಲಿಗಳನ್ನ ಬಿಡಿಸಿದ್ದು ಜನರು ಸರತಿ ಸಾಲಿನಲ್ಲಿ ಬಂದು ರಂಗೋಲಿಗಳನ್ನ ನೋಡಿ ಎಂಜಾಯ್ ಮಾಡಿದರು. ಇದಲ್ಲದೇ ಧಾನ್ಯಗಳಿಂದ, ಹೂವಿನಿಂದ ಮಾಡಿದ ವಿವಿಧ ಬಗೆಯ ರಂಗೋಲಿಗಳನ್ನ ಸಹ ಜನರು ವೀಕ್ಷಿಸಿ ಖುಷಿ ಪಟ್ಟರು. ಪ್ರತಿಯೊಂದು ರಂಗೋಲಿಯನ್ನ ಕೈನಿಂದ ರಂಗೋಲಿ ಪುಡಿ ಬಳಸಿಕೊಂಡೇ ಹಾಕಲಾಗಿತ್ತು. ಕೇವಲ ಚಿತ್ರಗಳನ್ನ ಗಮನಿಸಿ ರಂಗೋಲಿ ಹಾಕುವುದು ಇಲ್ಲಿನ ವಿಶೇಷವಾಗಿತ್ತು. ಇನ್ನು ರಂಗೋಲಿ ವೀಕ್ಷಣೆಗೆ ಬಂದ ಸಾರ್ವಜನಿಕರು ಕಲಾವಿದರ ಕಲೆಯನ್ನ ನೋಡಿ ಖುಷಿ ಪಡುವುದರ ಜೊತೆಗೆ ಜನರ ಮೆಚ್ಚುಗೆ ಪಾತ್ರವಾಯಿತು.

ರಂಗೋಲಿ ಪ್ರದರ್ಶನದಲ್ಲಿ ಪಾಲ್ಗೊಂಡು ರಂಗೋಲಿ ಹಾಕಿದವರಿಗೆ ಯಾವುದೇ ಬಹುಮಾನವನ್ನ ಕೊಡುವುದಿಲ್ಲ. ಬದಲಾಗಿ ಪ್ರತಿ ವರ್ಷ ನಡೆಯುವ ಕಾಲೇಜಿನ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಸನ್ಮಾನಿಸಲಾಗುತ್ತದೆ. ಇನ್ನು ಕಲಾವಿದರು ಹಣಕ್ಕಿಂತ ಹೆಚ್ಚಾಗಿ ತಮ್ಮಲ್ಲಿರುವ ಕಲೆಯ ಪ್ರದರ್ಶನ ಮಾಡಲು ಈ ರಂಗೋಲಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಪ್ರತಿ ರಂಗೋಲಿಯನ್ನ ಸುಮಾರು ಎರಡು ದಿನಗಳ ಕಾಲ ಶ್ರಮಪಟ್ಟು ಕಲಾವಿದರು ಬಿಡಿಸಿ ಪ್ರದರ್ಶನವನ್ನ ಮಾಡುತ್ತಾರೆ. ಒಟ್ಟಿನಲ್ಲಿ ಗ್ರಾಮೀಣ ಕಲಾವಿದರನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಿದ್ದ ರಂಗೋಲಿ ಪ್ರದರ್ಶನದಲ್ಲಿ ಮೂಡಿ ಬಂದ ಕಲಾವಿದನ ಕಲೆ ಎಂತವರನ್ನ ಸಹ ಆಕರ್ಷಿಸುವಂತಿದ್ದು ಹಳೆಯ ಸಂಪ್ರದಾಯವನ್ನು ನೆನಪಿಸುವಂತಿತ್ತು.
Leave a Reply

Your email address will not be published. Required fields are marked *