add

ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಕೊಡಲು ಸಿದ್ದ|ಆರ್ .ಅಶೋಕ್.

209


ಕಾರವಾರ :- ಬೆಂಗಳೂರಿನಲ್ಲಿ ನಾಳೆ  ನಡೆಯುತ್ತಿರುವ ಪ್ರತಿಭಟನೆ  ಪಕ್ಕಾ ಕಾಂಗ್ರೇಸ್ ಪ್ರಚೋದಿತ ಪ್ರತಿಭಟನೆ.ಕಾಂಗ್ರೇಸ್ ಪ್ರೇರಿತ ಪ್ರತಿಭಟನೆಗೆ ಹೆದರೋಲ್ಲ.ಸರ್ಕಾರ ಇದಕ್ಕೆಲ್ಲ ಬೆಲೆ ಕೊಡಲ್ಲ, 
ಜಗ್ಗಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಇಂದು ಭಟ್ಕಳದ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಹಿಂಭಾಗಿಲಿನ ಮೂಲಕ ರೈತರನ್ನು ಎತ್ತುಕಟ್ಟುವ ಪ್ರಯತ್ನ ಮಾಡುತ್ತಿದೆ ಇದಕ್ಕೆಲ್ಲಾ ಜಗ್ಗಲ್ಲ ಎಂದರು.


 ಇನ್ನು ಶಿವಮೊಗ್ಗದಲ್ಲಿ ನಡೆದ ಸ್ಪೋಟದ ವಿಚಾರವಾಗಿ ಮಾತನಾಡಿದ ಅವರು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ  ಇಲಾಖೆಯಿಂದ ತಂಡ ತನಿಖೆಗೆ ಕಳುಹಿಸಲಾಗಿದೆ,ಸ್ಫೋಟಕ ಕಳುಹಿಸುವ ವ್ಯವಸ್ಯೆ ಹಾಗೂ ಸ್ಟೋರೇಜ್ ಮಾಡುವಂತಹ ಹಾಗೂ ಪರ್ಚೇಸ್ ಮಾಡುವುದನ್ನು ಮಾನೀಟರಿಂಗ್ ಆಗಬೇಕು. ಹಿಂದೆ ಸರಿಯಾದ ಗೈಡ್ ಲೆನ್ಸ್ ಇರಲಿಲ್ಲ. ಇದರಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಕಟ್ಟು ನಿಟ್ಟಿನ ಕಡಿವಾಣ ಹಾಕುತ್ತೇವೆ ಎಂದರು.

ಇನ್ನು ತಾಲೂಕುಪಂಚಾಯ್ತಿ ಯನ್ನು ತೆಗೆಯುವ ಕುರಿತು ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಪರಿಶೀಲನೆ ಮಾಡುತಿದ್ದೇವೆ,ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

ಇನ್ನು ಸಚಿವರ ಖಾತೆ ಪುನರ್ ಹಂಚಿಕೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.


ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜಾಗ ಕೊಡಲು ಸಿದ್ದ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಕಂದಾಯ ಇಲಾಖೆ ಎಲ್ಲಿ ಬೇಕಾದರೂ ಸ್ಥಳ ನೀಡಲು ಸಿದ್ದವಿದೆ ಎಂದು ಕಂದಾಯ ಸಚಿವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ