29-11-2020 ರ ಇಂದಿನ ಉತ್ತರ ಕನ್ನಡ ಜಿಲ್ಲೆಯ ಕರೋನಾ ಪಾಸಿಟಿವ್ ವಿವರ.

464

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 19 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.32 ಜನ ಕರೋನಾ ದಿಂದ ಗುಣಮುಖರಾಗಿದ್ದಾರೆ.37 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಯ 125 ಜನರು ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ಇಂದು ಕರೋನಾಕ್ಕೆ ಅಂಕೋಲದಲ್ಲಿ ಒಂದು ಸಾವು ಸಂಭವಿಸಿದ್ದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 179 ಕ್ಕೆ ಏರಿಕೆ ಕಂಡಿದೆ.ಜಿಲ್ಲೆಯಲ್ಲಿ 13448 ಜನ ಜರೋನಾ ದಿಂದ ಗುಣಮುಖರಾಗಿದ್ದು ಈ ವರೆಗೆ 13789 ಜನ ಕರೋನಾ ಸೊಂಕಿಗೆ ಒಳಗಾಗಿದ್ದಾರೆ.

ಸಿದ್ದಾಪುರದಲ್ಲಿ ಈವರೆಗೆ ಎಷ್ಟು ಜನರಿಗೆ ಕರೋನಾ ಪಾಸಿಟಿವ್!ವಿವರ ಇಲ್ಲಿದೆ.

ಸಿದ್ದಾಪುರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಮ್ಮಿ ಕರೋನಾ ಪಾಸಿಟಿವ್ ವರದಿಯಾಗುತ್ತಿರುವ ತಾಲೂಕುಗಳಲ್ಲಿ ಸಿದ್ದಾಪುರವು ಒಂದು. ಕಳೆದ ಎರಡು ದಿನದಿಂದ ಸಿದ್ದಾಪುರ ತಾಲೂಕಿನಲ್ಲಿ ಒಂಬತ್ತು ಪ್ರಕರಣಗಳು ಬೆಳಕಿಗೆ ಬಂದಿವೆ.ಇಂದು ಒಂದೇ ದಿನದಲ್ಲಿ ಏಳು ಪ್ರಕರಣ ವರದಿಯಾಗಿದ್ದು ಈವರೆಗೆ 647 ಜನರು ಕರೋನಾ ಸೋಂಕಿತರಾಗಿದ್ದಾರೆ.ಸದ್ಯ 616 ಜನ ಕರೋನಾ ದಿಂದ ಗುಣಮುಖರಾಗಿದ್ದು ತಾಲೂಕಿನಲ್ಲಿ ಈವರೆಗೆ ಏಳು ಸಾವುಗಳು ಕರೋನಾ ದಿಂದ ಸಂಭವಿಸಿದೆ.

ಅಂಕೋಲದಲ್ಲಿ ಇಂದು ಒಂದು ಸಾವು!

ಅಂಕೋಲ ತಾಲೂಕಿನಲ್ಲಿ ಇಂದು ಕರೋನಾಕ್ಕೆ ಒಂದು ಬಲಿ ಪಡೆದಿದೆ.ಅಂಕೋಲ ತಾಲೂಕಿನಲ್ಲಿ ಒಟ್ಟು 874 ಜನ ಕರೋನಾ ಸೋಂಕಿತರಾಗಿದ್ದರು.ಇಂದು ಕೂಡ ಕರೋನಾ ದಿಂದ ನಾಲ್ಕು ಜನ ಗುಣಮುಖರಾಗಿದ್ದರು.ಆದರೇ ಇಂದು ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಇಂದು ಉಸಿರಾಟದ ತೊಂದರೆಯಿಂದ ಸಾವು ಕಂಡಿದ್ದು ಅಂಕೋಲ ತಾಲೂಕಿನಲ್ಲಿ ಈವರೆಗೆ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆ ಕಂಡಿದೆ.

ಜಿಲ್ಲಾವಾರು ವಿವರ ಇಲ್ಲಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ