BREAKING NEWS
Search

ಕಾರವಾರ-ಕರೋನಾ ವೈರೆಸ್ ದಿಗ್ಬಂಧನಕ್ಕೆ ಮುಕ್ತಿ-ಕೊನೆಗೂ ಜಪಾನ್ ನಿಂದ ಭಾರಕ್ಕೆ ಬಂದ ಕಾರವಾರದ ಅಭಿಷೇಕ್

441

ಕಾರವಾರ :- ಕೊರೋನಾ ಭೀತಿ ಎದುರಿಸುತ್ತಿದ್ದ ಕಾರವಾರದ ಪದ್ಮನಾಭ ನಗರದ ಅಭಿಷೇಕ್ ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದು ಹೆಚ್ಚಿನ ನಿಗಾ ಇಡುವ ಸಲವಾಗಿ ಹರಿಯಾಣಕ್ಕೆ ಇಂದು ರಾತ್ರಿ ಕರೆದೊಯ್ಯಲಾಗುತ್ತದೆ ಎಂದು ಅಭಿಷೇಕ್ ತಂದೆ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಇಂದು ಮುಂಜಾನೆ ಭಾರತೀಯ ಮೂಲದ 127 ಜನರನ್ನು ಜಪಾನ್ ನಿಂದ ದೆಹಲಿಗೆ ಕರೆತರಲಾಗಿತ್ತು.

ಕಳೆದ ಒಂದು ತಿಂಗಳಿಂದ ಜಪಾನಿನ ಯೊಕೊಹಾಮದಲ್ಲಿ ಶಿಪ್‌ನಲ್ಲೇ ಇದ್ದ ಅಭಿಷೇಕ್ರ್ಮು ಡಾ ನೋಂದಣಿಯ ಡೈಮಂಡ್ ಪ್ರಿನ್ಸೆಸ್ ಕ್ರೂಸ್‌ನಲ್ಲಿ ಉದ್ಯೋಗ ಮಾಡುತ್ತಿದ್ದ.ಕಳೆದ 15 ದಿನದ ಹಿಂದೆ ಹಡಗು ಚೈನಾದಿಂದ ಜಪಾನಿಗೆ ತಲುಪುತ್ತಿದ್ದಂತೇ ಕರೋನಾ ವೈರೆಸ್ ಭೀತಿಯಿಂದ ಸಮುದ್ರದಲ್ಲಿ ಅರ್ಧದಲ್ಲೇ ಜಪಾನ್ ಸರ್ಕಾರ ತಡೆ ಹಿಡಿದಿತ್ತ ಆದರೆ, ಕೊನೆಗೂ ಸಮಸ್ಯೆಯಿಂದ ಮುಕ್ತಿ ಪಡೆದ ಅಭಿಷೇಕ್ ಮಗರ್ 15 ದಿನಗಳ ಬಳಿಕ ಕಾರವಾರಕ್ಕೆ ಮರಳಲಿದ್ದಾರೆ.

ಮಗ ಭಾರತಕ್ಕೆ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಅಭಿಷೇಕ್ ತಂದೆ

ಮಗ ನಮ್ಮ ಸಂಪರ್ಕದಲ್ಲಿದ್ದ ಇಂದು ರಾತ್ರಿ ಹರಿಯಾಣಕ್ಕೆ ಕರೆದುಕೊಂಡು ಹೋಗುತ್ತಾರೆ.14 ದಿನ ಹರಿಯಾಣದಲ್ಲಿ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.135 ಭಾರತೀಯರಿದ್ದು ಅದರಲ್ಲಿ ಹತ್ತು ಜನರಿಗೂ ಹೆಚ್ಚು ಜನರಿಗೆ ಪಾಸಿಟಿವ್ ಇದ್ದದ್ದರಿಂದ ಅವರನ್ನು ಅಲ್ಲಿಯೇ ಬಿಟ್ಟು ವೈರೆಸ್ ಸೊಂಕು ಇಲ್ಲದವರನ್ನು ಭಾರತಕ್ಕೆ ಕರೆತರಲಾಗಿದೆ.
ಯಾವರೀತಿ ನಿಗಾ ಇಡುತ್ತಾರೆ, ಏನು ಎಂದು ಈವರೆಗೂ ಮಾಹಿತಿ ಇಲ್ಲ.

ಮಗನನ್ನು ನೋಡಲು ಅವಕಾಶ ಸಿಕ್ಕರೆ ಹರಿಯಾಣಕ್ಕೆ ಹೋಗಿ ಭೇಟಿಯಾಗುತ್ತೇವೆ.
ನನ್ನ ಮಗ ಹಡಗಿನಲ್ಲಿ ವೈರೆಸ್ ಸೊಂಕು ಜನರಿಗೆ ಇದ್ದರೂ ಪ್ರತಿ ದಿನ ಕೆಲಸ ಮಾಡುತಿದ್ದ,ಆತನಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿತ್ತು.

ಊಟಕ್ಕೆ ಏನೂ ತೊಂದರೆ ಇರಲಿಲ್ಲ,ಕೆಲಸದ ಸಮಯದಲ್ಲಿ ಮಾತ್ರ ಕೆಲಸ ಮಾಡಿ ರೂಮಿನಲ್ಲಿ ಇರಬೇಕಿತ್ತು.ಹೊರಗೆ ಅಡ್ಡಾಡುವಂತಿರಲಿಲ್ಲ.ಭಾರತೀಯ ರಾಯಭಾರಿ ಕಚೇರಿ ನಮ್ಮನ್ನು ಸಂಪರ್ಕಿಸಲಿಲ್ಲ.ಜಪಾನಿನಲ್ಲಿ ಹಡಗಿನಲ್ಲಿದ್ದ ಭಾರತಕ್ಕೆ ಬಂದ ಎಲ್ಲರನ್ನೂ ಹರಿಯಾಣಕ್ಕೆ ಕರೆದುಕೊಂಡು ಹೋಗುತಿದ್ದಾರೆ.
ಮಗ ನಮ್ಮ ದೇಶಕ್ಕೆ ಬಂದಿರುವುದೇ ಸಂತೋಷದ ವಿಷಯ.ಅವನನ್ನ ಬೇಟಿಯಾಗಲು ಅವಕಾಶ ಕೊಟ್ಟರೆ ಹೋಗುತ್ತೇನೆ.ದಿನ ನಮ್ಮ ಜೊತೆ ಸಂಪರ್ಕದಲ್ಲಿದ್ದಾನೆ.ಭಯ ದೂರವಾಗಿದೆ ಎಂದು ಅಭಿಷೇಕ್ ತಂದೆ ಬಾಲಕೃಷ್ಣ ರವರು ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡರು.
Leave a Reply

Your email address will not be published. Required fields are marked *