ನಕಲಿ ಆಯುರ್ವೇದ ಆಸ್ಪತ್ರೆ ಮೇಲೆ ಆರೋಗ್ಯಾಧಿಕಾರಿ ದಾಳಿ: ಆಸ್ಪತ್ರೆಗೆ ಬೀಗ!

1165

ಕಾರವಾರ:- ನಕಲಿ ಆಸ್ಪತ್ರೆ ಮೇಲೆ ಆರೋಗ್ಯಾಧಿಕಾರಿಗಳಿಂದ ದಾಳಿ ನಡೆಸಿ ಆಸ್ಪತ್ರೆಯನ್ನು ಬಂದ್ ಮಾಡಿಸಿದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ದಲ್ಲಿ ನಡೆದಿದೆ.

ಅಂಕೋಲ ನಗರದ ಜಟಗೇಶ್ವರ ಆಯುರ್ವೇದ ಆಸ್ಪತ್ರೆಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ನೇತ್ರತ್ವದಲ್ಲಿ ದಾಳಿ ನಡೆದಿದ್ದು ,ಈ ಆಸ್ಪತ್ರೆಯು ಸರ್ಕಾರದ ನಿಯಮದ ಪ್ರಕಾರ ಯಾವುದೇ ಅನುಮತಿ ಪಡೆಯದೇ ನಡೆಸುತಿದ್ದು ವೇಸ್ಟ್ ಮ್ಯಾಬೇಜ್ಮೆಂಟ್ ಸಹ ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ.

ಇನ್ನು ದಾಳಿ ವೇಳೆ ಜಟಗೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿನ ವೈದ್ಯ ವೈ.ಆರ್.ರೆಡ್ಡಿರವರು ತಾವು ಪಡೆದ ಪದವಿ ಸರ್ಟಿಫಿಕೇಟ್ ನೀಡಿರುವುದಿಲ್ಲ. ಹೀಗಾಗಿ ಅವರ ಮೇಲೆ ಪ್ರಕರಣ ದಾಖಲಿಸಿ ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ್ ರವರು ಆಸ್ಪತ್ರೆಯನ್ನು ಬಂದ್ ಮಾಡಿಸಿದ್ದಾರೆ.

ಈ ಹಿಂದೆಯು ಸಹ ಅಂಕೋಲ ತಾಲೂಕಿನಲ್ಲಿ ನಕಲಿ ವೈದ್ಯರು ಪತ್ತೆಯಾಗಿದ್ದು ತಾಲೂಕು ಆರೋಗ್ಯಾಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ