BREAKING NEWS
Search

ಅದ್ದೂರಿಯಾಗಿ ಶೃಂಗಾರಗೊಂಡ ಬನವಾಸಿ: ಯಶಸ್ವಿ ಕದಂಬೋತ್ಸವಕ್ಕೆ ಜಿಲ್ಲಾಡಳಿತ ಸಜ್ಜು-ಸಿದ್ದಲಿಂಗಯ್ಯನವರಿಗೆ ಪಂಪ ಪ್ರಶಸ್ತಿ ಪ್ರಧಾನ

209

ಕಾರವಾರ:- ಕನ್ನಡದ ಪ್ರಥಮ ರಾಜಧಾನಿ ಬನವಾಸಿ ಕನ್ನಡದ ಮೊದಲ ರಾಜ ಮನೆತನ ಕದಂಬರ ನೆನಪಿನಲ್ಲಿ ನಡೆಯುವ ಕದಂಬೋತ್ಸವಕ್ಕೆ ಅಣಿಗೊಂಡಿದೆ. ಇದೇ 8 ಮತ್ತು 9 ರಂದು ಏರ್ಪಾಟಾಗಿರುವ ಕದಂಬೋತ್ಸವದ ಸಿದ್ಧತೆ ಗೊಂಡಿದೆ.

ಬನವಾಸಿಯ ಮಾರಿಹಕ್ಕಲು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ವಾಗಿದ್ದು 40ಸಾವಿರ ಚದರ ಅಡಿ ಜಾಗದಲ್ಲಿ ಎಂಟು ಸಾವಿರ ಜನರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.

ಹೊರ ಭಾಗದಲ್ಲಿ 40 ಕ್ಕೂ ಹೆಚ್ಚು ಮಳಿಗೆ ನಿರ್ಮಿಸಲಾಗಿದೆ. ಬನವಾಸಿ ಪಟ್ಟಣ ಮದುಮಗಳಂತೆ ಶೃಂಗಾರಗೊಂಡಿದೆ.

ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದ ಕುರಿತು ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಪ್ರಚಾರ ನಡೆಸುವ ಭಾಗವಾಗಿ ಕ್ರೀಡಾ ಸ್ಪರ್ದೆಗಳು ಇಗಾಗಲೇ ಜರುಗಿದ್ದು, ಫೆ. 8 ರಂದು ಮ್ಯಾರಥಾನ್ ನಡೆಯಲಿದೆ.

ಕದಂಬೋತ್ಸವದ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯದ ಅನೇಕ ವಿವಿಧ ಜಿಲ್ಲೆಗಳ ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ದಲಿತ ಕವಿ ಸಿದ್ದಲಿಂಗಯ್ಯನವರಿಗೆ ಪಂಪ ಪ್ರಶಸ್ತಿ

ದಲಿತ ಕವಿ ಎಂದೇ ಪ್ರಸಿದ್ಧರಾಗಿರುವ ಡಾ.ಸಿದ್ದಲಿಂಗಯ್ಯನವರಿಗೆ ಪಂಪ ಪ್ರಶಸ್ತಿ ಯನ್ನು ನೀಡಲಿದ್ದು ಬನವಾಸಿಯ ಕದಂಬೋತ್ಸವದ ಮಯೂರವರ್ವ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರು ಪ್ರಧಾನ ಮಾಡಲಿದ್ದರೆ. ಐದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ,ಸನ್ಮಾನ ಪತ್ರ ಒಳಗೊಂಡಿರುತ್ತದೆ.
Leave a Reply

Your email address will not be published. Required fields are marked *