ಭಟ್ಕಳದಲ್ಲಿ 31 ಕ್ಕೆ ಏರಿಕೆಯಾದ ಕರೋನಾ ಫಾಸಿಟಿವ್ ಸಂಖ್ಯೆ!

3417

ಕಾರವಾರ :- ಭಟ್ಕಳದಲ್ಲಿ ಮತ್ತೆ 7 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿವ ಮೂಲಕ ಸೊಂಕಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ.

ಇಬ್ಬರು ಮಕ್ಕಳು ಸೇರಿ ಏಳು ಮಂದಿಗೆ ಕೊರೋನಾ ಫಾಸಿಟಿವ್ ಪತ್ತೆಯಾಗಿದೆ.
ಎರಡು ವರ್ಷದ ಆರು ತಿಂಗಳ ಬಾಲಕಿ ಹಾಗೂ ಒಂದು ವರ್ಷ ಐದು ತಿಂಗಳ ಬಾಲಕ ಸೇರಿ ಒಟ್ಟು ಏಳು ಜನರಿಗೆ ಸೊಂಕು ದೃಡಪಟ್ಟಿದ್ದು ನಿನ್ನೆ ದೃಢಪಟ್ಟಿರುವ ವ್ಯಕ್ತಿಗಳ ಕುಟುಂಬಸ್ಥರೊಂದಿಗೆ ಸಂಪರ್ಕ ದಿಂದ ಸೋಂಕು ತಗುಲಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಮದೀನ ಕಾಲೋನಿಯ ನಿವಾಸಿಗಳಾಗಿದ್ದು
ಸೊಂಕಿತ ವ್ಯಕ್ತಿಯ ಕುಟುಂಬಸ್ಥರು ಆತನ ಸ್ನೇಹಿತನಿಗೆ ಸೋಂಕು ದೃಡ ಪಟ್ಟಿದೆ.

ಸೊಂಕಿತ p.659 ಮತ್ತು p-740 ರ ಎರಡನೇ ಹಂತದ ಸಂಪರ್ಕ ಹೊಂದಿದ್ದ 60 ಮಂದಿಯ ಗಂಟಲದ್ರವ ತಪಾಸಣೆಗೆ ಜಿಲ್ಲಾಡಳಿತ ಕಳುಹಿಸಿತ್ತು .ಇಂದಿನ ಪರೀಕ್ಷೆಯಲ್ಲಿ ಏಳು ಜನರ ಫಲಿತಾಂಶದಲ್ಲಿ ಫಾಸಿಟಿವ್ ಬಂದಿದ್ದು ಉಳಿದವರ ಫಲಿತಾಂಶ ಬರಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ