BREAKING NEWS
Search

ಭಟ್ಕಳ ಯುವಕರು ಕಾರವಾರ ದಲ್ಲಿ ಮೂಡಿಸಿದ್ರು ಆತಂಕ?

3626

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕೊರೋನಾ ಸೊಂಕಿನ ಹೆಚ್ಚಳದಿಂದ ಭಟ್ಕಳ ದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದರೂ ಅನುಮತಿ ಇಲ್ಲದೇ ಭಟ್ಕಳದ ಯುವಕರು ಗೋವಾ ದಿಂದ ಕಾರವಾರದ ಶಿರವಾಡ ಕ್ಕೆ ಬಂದಿದ್ದ ಇಬ್ಬರು ಯುವಕರನ್ನು ಸ್ಥಳೀಯ ಜನರೇ ಗ್ರಾಮಕ್ಕೆ ಪ್ರವೇಶಿಸದಂತೆ ತಡೆದು ನಿಲ್ಲಿಸಿ ಪೊಲೀಸರ ವಶಕ್ಕೆ ನೀಡಿದ ಘಟನೆ ಇಂದು ಸಂಜೆ ನಡೆದಿದೆ.

ಭಟ್ಕಳ ಮೂಲದ ಯುವಕರು

ಭಟ್ಕಳದ ಈ ಯುವಕರು ಗೋವಾದ ಕಾಣಕೋಣಂ ನಿಂದ ಸಂಜೆ ವೇಳೆಗೆ ಕಾರವಾರ ನಗರದ ಶಿರವಾಡದ ಹೆದ್ದಾರಿ ಬಳಿ ಇಬ್ಬರು ಯುವಕರು ನಡೆದುಕೊಂಡು ಹೋಗುತಿದ್ದ ವೇಳೆ ಸ್ಥಳೀಯರು ತಡೆದು ನಿಲ್ಲಿಸಿದ್ದಾರೆ.

ಈ ವೇಳೆ ಯುವಕರಿಬ್ಬರೂ ಭಟ್ಕಳದವರು ಎಂಬ ಮಾಹಿತಿ ತಿಳಿದು ಕೆಲವು ಸಮಯ ಜನರಲ್ಲಿ ಆತಂಕ ಮೂಡಿಸಿತ್ತು.ಇದಲ್ಲದೇ ಭಟ್ಕಳದ ಈ ಯುವಕರು ನೆರೆಯ ಗೋವಾ ದಿಂದ ಯಾವುದೇ ಅನುಮತಿ ಇಲ್ಲದೇ ಕರ್ನಾಟಕ ಪ್ರವೇಶಿಸಿದ್ದು ಅನುಮತಿ ಇರದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಕೈಗಳಿಗೆ ಸೀಲ್ ಹಾಕುವ ಮೂಲಕ ಠಾಣೆಗೆ ಕರೆದೊಯ್ದಿದ್ದಾರೆ.

ಕೈಗೆ ಸೀಲ್ ಹೊಡೆಯುತ್ತಿರುವುದು

ಭಟ್ಕಳದಲ್ಲಿ ಸಂಚಾರ ವ್ಯವಸ್ಥೆಯೇ ಬಂದ್ ಆಗಿದ್ದು ಇಡೀ ಭಟ್ಕಳ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಆದರೂ ಈ ಯುವಕರು ಯಾವುದೇ ಅನುಮತಿ ಪತ್ರ ಸಹ ಇಲ್ಲದೇ ಗೋವಾ ಗಡಿ ದಾಟಿ ಕಾರವಾರಕ್ಕೆ ಬಂದಿದ್ದು ಭಟ್ಕಳಕ್ಕೆ ತೆರಳಲು ಸಿದ್ದರಾಗಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ