ಉತ್ತರ ಕನ್ನಡ ಜಿಲ್ಲೆಯಲ್ಲಿ 24 ಕ್ಕೆ ಏರಿಕೆಯಾದ ಕರೋನ!ಐದು ತಿಂಗಳ ಮಗುವನ್ನೂ ಬಿಡಲಿಲ್ಲ!

1283

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೊಂಕಿತರ ಸಂಖ್ಯೆ 24 ಕ್ಕೆ ಏರಿಕೆ ಆಗುವ ಮೂಲಕ ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.

ಇಂದು ಐದು ತಿಂಗಳ ಮಗುವಿಗೂ ಸೊಂಕು ತಗಲಿದ್ದು ಈ ದಿನದಲ್ಲೇ 12 ಪ್ರಕರಣ ವರದಿಯಾಗಿದೆ.

18 ವರ್ಷದ ಯುವತಿಯಿಂದ 12 ಜನರಿಗೆ ಹರಡಿತು!

ಕೊರೋನಾ ಸೋಂಕಿತೆ ಸಂಖ್ಯೆ 659 18 ವರ್ಷದ ಯುವತಿಯಾಗಿದ್ದು ಇವಳ ಸಂಪರ್ಕದಲ್ಲಿದ್ದವರಲ್ಲಿ ಕೋವಿಡ್-19 ಜಿಲ್ಲೆಯ ಭಟ್ಕಳ ಪಟ್ಟಣ ದಲ್ಲಿ ವರದಿಯಾಗಿದೆ.
5 ತಿಂಗಳ ಶಿಶು, 3 ವರ್ಷದ ಮಗು, 7 ಮಂದಿ ಮಹಿಳೆಯರು, 3 ಮಂದಿ ಪುರುಷರಿಗೆ ಸೋಂಕು ದೃಢ ಪಟ್ಟಿದೆ.

ಎಪ್ರಿಲ್ 20ರಂದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಿದ್ದ 18 ವರ್ಷದ ಮಹಿಳೆ ಹಾಗೂ ಸಂಬಂಧಿಕರು ತೆರಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾದವರಿಂದ ಯುವತಿಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

ಯುವತಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮನೆಯ ಸದಸ್ಯರ ಗಂಟಲ ದ್ರವ ಪರೀಕ್ಷೆ ಮಾಡಲಾಗಿತ್ತು.

ಪರೀಕ್ಷಾ ವರದಿಯಲ್ಲಿ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಇನ್ನು ಯುವತಿಯ ಭಾವ ಮತ್ತು ಅಕ್ಕ ಅವರ ಮನೆಯ ಸುತ್ತಮುತ್ತ ಓಡಾಡಿದ್ದು ಹಲವರನ್ನು ಸಂಪರ್ಕ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಅವರ ಮನೆಯ ಸುತ್ತಮುತ್ತ ಸಂಪರ್ಕಕ್ಕೆ ಬಂದ ಒಟ್ಟು 100 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ಒಟ್ಟು 35 ಮನೆಗಳ ಹಾಗೂ ಕುಟುಂಬದ ಮೇಲೆ ನಿಗಾ ಇಡಲಾಗಿದೆ.

ಇದಲ್ಲದೇ ಭಟ್ಕಳವನ್ನು ಸಂಪೂರ್ಣ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು ಹೆಚ್ಚಿನ ಪೊಲೀಸ್ ವ್ಯವಸ್ಥೆ ಕಲ್ಪಿಸಲು ಸಿದ್ದತೆ ನಡೆದಿದೆ.

ಸದ್ಯ ಭಟ್ಕಳದಲ್ಲಿ ಮಾತ್ರ ಸೊಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದ್ದು ಮುಂದಿನ ದಿನ ದಲ್ಲಿ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ