45 ದಿನದಲ್ಲಿ ಭಟ್ಕಳದಲ್ಲಿ 22 ಸಾವು! ಅನಂತಕುಮಾರ್ ಹೆಗಡೆ ಭಟ್ಕಳದಲ್ಲಿ ಅಧಿಕಾರಿಗಳೊಂದಿಗೆ ಹೇಳಿದ್ದೇನು?

1788

ಕಾರವಾರ :- ಲಾಕ್ ಡೌನ್ ನಡುವಿನ 45 ದಿನಗಳಲ್ಲಿ ಭಟ್ಕಳ ಪಟ್ಟಣದಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೆಲವು ಸಾವುಗಳ ಯಾವುದೇ ಮಾಹಿತಿಯನ್ನು ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಯ ಗಮನಕ್ಕೆ ತರದೇ ಮೃತದೇಹಗಳನ್ನು ಹೂಳಲಾಗಿದೆ 22 ಜನರ ಸಾವಿನ ಬಗ್ಗೆ ಸಂಶಯಗಳು ಮೂಡಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಭಟ್ಕಳದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಭಟ್ಕಳದಲ್ಲಿ ಆದ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ನೀಡಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು
ಇನ್ನುಮುಂದೆ ತಾಲೂಕಿನಲ್ಲಿ ಯಾರಾದರೂ ಸಾವನ್ನಪ್ಪಿದರೆ ಮಾಹಿತಿ ಕಲೆ ಹಾಕಲು ಯಾವ ಕ್ರಮ ತೆಗೆದುಕೊಳ್ಳಲಿದ್ದೀರಿ ಎಂದು ಕೇಳಿದ್ದು ,

ತಾಲೂಕಿನಲ್ಲಿನ ಎಲ್ಲಾ ಮುಸ್ಲಿಂ ಸಮಾಧಿ ಯಲ್ಲಿ ದಿನ ಪಾಳೆಯದಂತೆ ಇಬ್ಬರು ಬೀಟ್ ಪೊಲೀಸರನ್ನು ನೇಮಿಸಲಾಗುವುದು.

ಭಟ್ಕಳದಲ್ಲಿ ನಡೆಸ ಅಧಿಕಾರಿಗಳ ಸಭೆ .

ಇನ್ನುಮುಂದೆ ಯಾವುದೇ ವ್ಯಕ್ತಿ ಸಾವನ್ನಪ್ಪಿದ್ದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಿ, ಮೃತ ವ್ಯಕ್ತಿಯ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ ಅವರ ವರದಿ ನೆಗೆಟಿವ್ ಬಂದ ಬಳಿಕ ಹೂಳಲು ಅವಕಾಶ ನೀಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಉತ್ತರಿಸಿದ್ದಾರೆ.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಭರತ್ ಎಸ್., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕಕುಮಾರ್, ಆರೋಗ್ಯ ಇಲಾಖೆ ನೋಡೆಲ್ ಅಧಿಕಾರಿ ಡಾ.ಶಾರದ ನಾಯಕ, ತಹಶೀಲ್ದಾರ್ ಎಸ್.ರವಿಚಂದ್ರ., ಡಿವೈಎಸ್‌ಪಿ ಗೌತಮ್ ಕೆ.ಸಿ. ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಸಭೆ ನಡೆಸಿದ ಸಂಸದರು ಕೋವಿಡ್-೧೯ ಕುರಿತು ಭಟ್ಕಳದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
Leave a Reply

Your email address will not be published. Required fields are marked *