ಯು.ಎ.ಇ ನಿಂದ ಭಟ್ಕಳದ ಯುವಕನಿಂದ ಮಾಸ್ಕನಲ್ಲಿ ಚಿನ್ನ ಸಾಗಾಟ-ಕೊನೆಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ?

403

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳಕ್ಕೂ ಹಾಗೂ ಅರಬ್ಬ್ ರಾಷ್ಟ್ರಗಳೊಂದಿಗೆ ಔದ್ಯೋಗಿಕ ಹಾಗೂ ವ್ಯವಹಾರಿಕ ಸಂಬಂಧಗಳಿವೆ.

ಇಲ್ಲಿನ ಯುವಕರು ದುಡಿಮೆಗಾಗಿ ಅರಬ್ ರಾಷ್ಟ್ರಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಹಾಗೆಯೇ ಅರಬ್ ರಾಷ್ಟ್ರಗಳಲ್ಲಿ ಸಿಗುವ ಅಗ್ಗದ ಚಿನ್ನವನ್ನು ಕಷ್ಟಮ್ ಅಧಿಕಾರಿಗಳ ಕಣ್ಣು ತಪ್ಪಿಸಿ ಇಲ್ಲಿಗೆ ಅಕ್ರಮವಾಗಿ ತರುವ ಮೂಲಕ ಇಲ್ಲಿನ ಮೌಲ್ಯದಲ್ಲಿ ಮಾರಾಟ ಮಾಡುತ್ತಾರೆ.

ಹಣದ ಆಸೆಗಾಗಿ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲು ಅನೇಕರು ವಿವಿಧ ರೀತಿಯ ಪ್ರಯತ್ನ ನಡೆಸುತ್ತಾರೆ. ಈ ಹಿಂದೆ, ಆಲಂಕಾರಿಕ ರಿಬ್ಬನ್, ಕುಕ್ಕರ್, ಅಡಾಪ್ಟರ್ ಗಳು ಮತ್ತು ಮಿಕ್ಸರ್ ಮೋಟರ್‌ಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಕ್ಕಾಗಿ ಹಲವರನ್ನು ಬಂಧಿಸಿರುವ ಪ್ರಕರಣಗಳು ನಡೆದಿವೆ. ಪ್ಯಾಂಟ್ ನ ಸೊಂಟದ ಭಾಗದಲ್ಲಿ, ಬೂಟುಗಳ ಒಳಭಾಗದಲ್ಲಿ ಚಿನ್ನವನ್ನಿಟ್ಟುಕೊಂಡು ಸಾಗಿಸಲು ಯತ್ನಿಸಿರುವುದೂ ಇದೆ‌.

ಆದರೇ ಕರೋನಾ ಸೋಂಕು ಬಾರದಂತೆ ರಕ್ಷಣೆಗೆ ಬಳಸುವ ಮಾಸ್ಕ ನಲ್ಲಿ ಚಿನ್ನ ಇಟ್ಟು ಸಾಗಿಸಿದ ಭಟ್ಕಳದ ಅಮರ್ ಎಂಬುವವನ್ನು ಕೇರಳ ರಾಜ್ಯದ ಕರಿಪುರಂ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.

ಯುಎಇ ಇಂದ ಮಾಸ್ಕ ನಲ್ಲಿ 2ಲಕ್ಷ ಮೌಲ್ಯದ 40 ಗ್ರಾಮ್ ಚಿನ್ನ ಅಡಗಿಸಿ ಅಲ್ಲಿನ ಏರ್ ಪೋರ್ಟ ಅಧಿಕಾರಿಗಳಿಗೆ ಯಾಮಾರಿಸಿ ಕೇರಳದ ಕರಿಪುರಂ ವಿಮಾನ ನಿಲ್ದಾದಲ್ಲಿ ಇಳಿದಿದ್ದ. ಈತನನ್ನು ಅನುಮಾನಗೊಂಡು ಕೋಝಿಕೋಡೆ ಏರ್ ಇಂಟಲಿಜೆನ್ಸಿ,‌ಕ್ಯಾಲಿಕಟ್ ಯುನಿಟ್, ಕೊಚ್ಚಿನ್ ಕಸ್ಟಮ್ಸ್ ಪ್ರಿವೆಂಟಿವ್ ಅಧಿಕಾರಿಗಳು ತಪಾಸಣೆ ನಡೆಸಿದ್ದು ಈ ವೇಳೆ ಈತನ ಮಾಸ್ಕ್ ಅಸಿಲಿಯತ್ತು ಬೆಳಕಿಗೆ ಬಂದಿದ್ದು ಈತನನ್ನು ಬಂಧಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ