ಕಾರವಾರ : ಭಟ್ಕಳದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪತ್ತೆ ಯಾಗುವ ಮೂಲಕ ಜಿಲ್ಲೆಯಲ್ಲಿ 42 ಕ್ಕೆ ಸೊಂಕಿನ ಸಂಖ್ಯೆ ಏರಿಕೆಯಾಗಿದೆ.
ಭಟ್ಕಳದ ಸೋಂಕಿತೆ ಸಂಖ್ಯೆ 740ರ 18 ವರ್ಷದ ಯುವತಿಯೊಂದಿಗೆ ಸಂಪರ್ಕದ 68 ವರ್ಷದ ವ್ಯಕ್ತಿಗೆ ಸೊಂಕು ತಗುಲಿರಯವುದು ತಡವಾಗಿ ದೃಡವಾಗಿದೆ.
ಈ ಮೂಲಕ ಉತ್ತರಕನ್ನಡ ಜಿಲ್ಲೆಯಲ್ಲಿ 31 ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ ಯಾಗಿದ್ದು
ನಾಲ್ಕು ದಿನಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣ ಪತ್ತೆಯಾದಂತಾಗಿದೆ.
ತಡವಾಯ್ತು ವರದಿ ಬರುವುದು?
ಈ ಹಿಂದೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಿ ಸೊಂಕು ತಗಲಿಸಿಕೊಂಡಿದ್ದ ಸೊಂಕಿತ ಸಂಖ್ಯೆ p659 ರ 18 ವರ್ಷದ ಯುವತಿ ಸಂಪರ್ಕ ಹೊಂದಿದ್ದ ಈಕೆಯ ಗೆಳತಿ p740 ರ ಸಂಪರ್ಕದಲ್ಲಿದ್ದ 68 ವರ್ಷದ ವೃದ್ದನ ಗಂಟಲು ದ್ರವವನ್ನು ಇದೇ ತಿಂಗಳ ಮೇ.9 ರಂದು ಫಲಿತಾಂಶ ನಿರೀಕ್ಷೆ ಮಾಡಲಾಗಿತ್ತು. ಆದರೇ
ಆದರೇ ಗಂಟಲದ್ರವದ ವರದಿ ಬರುವುದು ತಾಂತ್ರಿಕ ಸಮಸ್ಯೆ ಆದ್ದರಿಂದ ತಡವಾಗಿ ಪತ್ತೆಯಾಗಿದ್ದು ಈತನನ್ನು ಈ ಹಿಂದೆಯೇ ಕ್ವಾರಂಟೈನ್ ಮಾಡಲಾಗಿತ್ತು.
ಇದಲ್ಲದೇ ಒಂದು ವಾರದ ಹಿಂದೆ ಫಲಿತಾಂಶ ನಿರೀಕ್ಷೆ ಇದ್ದರೂ ಈತನ ಗಂಟಲು ದ್ರವವನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಅದರ ವರದಿ ಇಂದು ಬಂದಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟೂ 42 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ವರೆಗೆ
11 ಮಂದಿ ಗುಣಮುಖರಾಗಿ 31 ಮಂದಿಗೆ ಚಿಕಿತ್ಸೆ ಮುಂದುವರೆದಿದೆ.