ಭಟ್ಕಳ- ಅನಾವಷ್ಯಕವಾಗಿ ಓಡಾಡಿತಿದ್ದ ವ್ಯಕ್ತಿ ಮೇಲೆ ಪ್ರಕರಣ ದಾಖಲು.

1461

ಕಾರವಾರ :- ಹೆಲ್ತ್ ಎಮರ್ಜೆನ್ಸಿ ಇದ್ದರು ಅನವಶ್ಯಕವಾಗಿ ಓಡಾಟ ಮಾಡಿದ ಭಟ್ಕಳದ‌ಲ್ಲಿ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ದಲ್ಲಿ ನಡೆದಿದೆ.

ಕೆ.ಎಮ್‌ ಶಾಝೀರ್ (೩೯) ಎನ್ನುವವನ ವಿರುದ್ಧ ಪ್ರಕರಣ ದಾಖಲಾಗಿದ್ದು ಬೈಕ್ ನಲ್ಲಿ ಅನವಶ್ಯಕವಾಗಿ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಿದ್ದ.ಪ್ರಶ್ನೆ ಮಾಡಿದ ಪೊಲೀಸರಿಗೆ ಬೆದರಿಕೆ ಹಾಕಿದ ‌ಹಿನ್ನಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೨೭೦,೫೦೪,೫೦೬, ಹಾಗೂ ೧೮೮ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಗೆ ಪೆಟ್ರೋಲ್ ಬಂದ್ !

ಜಿಲ್ಲಾಡಳಿತ ಜನರು ಮನೆಯಿಂದ ಹೊರ ಬರದಂತೆ ಆದೇಶ ನೀಡಿದರೂ ಹಲವರು ನಗರ ಪ್ರದೇಶದಲ್ಲಿ ಅನಾವಷ್ಯಕ ಓಡಾಡುತಿದ್ದು ಈ ಹಿನ್ನಲೆಯಲ್ಲಿ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್ ನೀಡುವುದನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕೇವಲ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಮಾತ್ರ ಪೆಟ್ರೋಲ್ ನೀಡಲು ಸೂಚನೆ ನೀಡಿದ್ದು ಜಿಲ್ಲೆಯ ಎಲ್ಲಾ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಮನೆ ಬಾಗಿಲಿಗೆ ಕಳುಹಿಸಿ ಕೊಡಲಾಗುತ್ತಿದೆ. ಜನರು ಇದರ ಉಪಯೋಗ ಪಡೆದುಕೊಂಡು ಮನೆಯಲ್ಲಿರುವಂತೆ ತಿಳಿಸಿದೆ.

ಪತ್ರಕರ್ತರಿಗೆ ಜಿಲ್ಲಾಧಿಕಾರಿಗಳ ಮನವಿ

ಪತ್ರಕರ್ತರು ಹಲವು ಸ್ಥಳಗಳಿಗೆ ತೆರಳಿ ಸುದ್ದಿವಮಾಡುತಿದ್ದು ಕೊರೋನಾ ಪೀಡಿತ ವ್ಯಕ್ತಿಗಳು ಜಿಲ್ಲೆಯ ಹಲವು ಭಾಗದಲ್ಲಿ ಓಡಾಡಿದ್ದರಿಂದ ಜಾಗೃತರಾಗಿರಬೇಕಿದೆ. ಹಾಗಾಗಿ ಪತ್ರಕರ್ತರು ಮನೆಯಲ್ಲಿಯೇ ಇದ್ದು ಸುದ್ದಿ ಮಾಡಬೇಕು.ಆದಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಮನವಿ ಮಾಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ