BREAKING NEWS
Search

ರಂಜಾನ್ ಹಬ್ಬದಲ್ಲಿ ಮಾತ್ರ ಕರೋನಾ ಬರುತ್ತಾ? ಹಿಂದು ಹಬ್ಬದಲ್ಲಿ ಕರೋನಾ ಹೋಗುತ್ತೆ!ನಮ್ಮ ಜನರ ತಾಕತ್ತು ಎಲ್ಲಿ ಹೋಯಿತು -ಭಟ್ಕಳದ ಬುರ್ಕಾ ಮಹಿಳೆ ವಿವಾದಿತ ಹೇಳಿಕೆಗೆ ದೂರು ದಾಖಲು.

3466

ಕಾರವಾರ :- ರಂಜಾನ್ ಹಬ್ಬದಲ್ಲಿ ಮಾತ್ರ ಕರೋನಾ ಬರುತ್ತಾ ಹಿಂದು ಹಬ್ಬದಲ್ಲಿ ಮಾತ್ರ ಕರೋನಾ ಬರೋದಿಲ್ಲ. ರಂಜಾನ್ ಹಬ್ಬಕ್ಕೆ ಮಾತ್ರ ಲಾಕ್ ಡೌನ್ ಮಾಡುತ್ತಾರೆ. ನಮ್ಮ ಜನ ಯಾಕೆ ಹೀಗೆ ಕೂತಿದ್ದಾರೆ, ನಮ್ಮ ಜನರ ತಾಕತ್ತು ಎಲ್ಲಿ ಹೋಯಿತು.ಹೀಗಂತ ಭಟ್ಕಳದ “ಶಾಬಂದ್ರಿ ಆನ್ ಲೈನ್ ಭಟ್ಕಳ ನ್ಯೂಸ್” ಎಂಬ ಯೂಟ್ಯೂಬ್ ನಲ್ಲಿ ಬುರ್ಕಾ ಹಾಕಿದ ಮಹಿಳೆಯೊಬ್ಬಳು ಬೇಕಾಬಿಟ್ಟಿ ಹರಟಿದ್ದಾಳೆ.

17 ನಿಮಿಷಕ್ಕೂ ಹೆಚ್ವು ಸಮಯ ಯ್ಯೂಟೂಬ್ ನಲ್ಲಿ ಮಾತನಾಡಿರುವ ಈಕೆ ರಂಜಾನ್ ಮಾಡಲು ಷಾಪಿಂಗ್ ಮಾಲ್ ,ಬಟ್ಟೆ ಅಂಗಡಿ ತೆರೆಯಬೇಕು ,ಬಟ್ಟೆ ಅಂಗಡಿ ತೆರೆದರೆ ಕರೋನಾ ಹೇಗೆ ಬರುತ್ತೆ ಎಂದು ಪ್ರಶ್ನೆ ಮಾಡಿರುವ ಈಕೆ ತರಕಾರಿ ತೆಗೆದುಕೊಂಡ್ರೆ ಕರೋನಾ ಬರೋದಿಲ್ಲವಾ ಎಂದು ಪ್ರಶ್ನೆ ಮಾಡಿದ್ದಾಳೆ.

ವಿವಾದಿತ ಹೇಳಿಕೆ ನೀಡಿದ ಭಟ್ಕಳದ ಮಹಿಳೆ.

ಹೀಗೆ ಮುಂದುವರೆದು ಮಾತನಾಡಿರುವ ಆಕೆ ಕರೋನಾ ಕತಂ ಆಗಿದೆ, ಟಿವಿಯವರು ಕರೋನಾ ಹೆಚ್ಚಾಗಿದೆ ಎಂದು ಹೆದರಿಸುತ್ತಾರೆ,ಹೆದರಬೇಡಿ,ಮನೆಯಲ್ಲೇ ಇರಿ,ಆಸ್ಪತ್ರೆಗೆ ಹೋಗಬೇಡಿ,ಕರೋನಾ ಇಂಜಕ್ಷನ್ ಕೊಟ್ಟು ಜನರಿಗೆ ನಿಶ್ಚಕ್ತಿ ಮಾಡುತಿದ್ದಾರೆ. ನಾಲ್ಕು ಜನರಿಗೆ ಗುಣವಾಗೋ ಇಂಜಕ್ಷನ್ ಕೊಟ್ಟು ನಾಲ್ಕು ಜನರಿಗೆ ಸಾಯುವ ಇಂಜಕ್ಷನ್ ಕೊಡುತ್ತಾರೆ,ಇಂಜಕ್ಷನ್ ನಿಂದ ದೇಹ ನಿಶ್ಚಕ್ತಿಯಾಗಿ ಮೂಳೆ ಸವೆಯುತ್ತದೆ.ಜನರು ಯಾವ ಇಂಜಕ್ಷನ್ ಕೊಟ್ಟಿದ್ದಾರೆ ಎಂದು ಕೇಳಬೇಕು,ಯಾರೂ ಕೂಡ ಆಸ್ಪತ್ರೆಗೆ ಹೋಗಬೇಡಿ ಎಂದು ಜನರಿಗೆ ಯೂಟ್ಯೂಬ್ ಮೂಲಕ ತಪ್ಪು ಮಾಹಿತಿ ಹಾಗೂ ಕೋಮು ದ್ವೇಶ ಬರುವ ಮಾತುಗಳನ್ನಾಡಿದ್ದು, ಈಕೆಯ ಈ ವೀಡಿಯೋ ವಾಟ್ಸ್ ಅಪ್ ಮೂಲಕ ಭಟ್ಕಳದಲ್ಲಿ ವೈರಲ್ ಆಗಿದೆ.

ಈ ಹಿನ್ನಲೆಯಲ್ಲಿ ಶನಿವಾರ ಈಕೆಯ ವಿರುದ್ಧ ಭಟ್ಕಳ ಠಾಣೆಯಲ್ಲಿ ಪ್ರಕರಣ ವನ್ನು ಪಿಎಸ್ಐ ಸುಮಾ ಬಿ ರವರು ದಾಖಲಿಸುದ್ದು ತನಿಖೆ ಕೈಗೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!