ಮಲ್ಪೆ ಯಲ್ಲಿ ಕಾಣೆಯಾದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾಯ್ತ!?ಮತ್ತೊಮ್ಮೆ ಗೊಂದಲ ಮೂಡಿಸಿದ ಅನಾಮಿಕ ಸುವರ್ಣ ತ್ರಿಭುಜ ರಹಸ್ಯ!

3193

ಕಾರವಾರ :- ಮಹಾರಾಷ್ಟ್ರ ರಾಜ್ಯದ ಕಡಲ ತೀರದಲ್ಲಿ ಮುಳುಗಿದ್ದ ಬೋಟಿನ ಬಿಡಿ ಭಾಗವು ಮಹರಾಷ್ಟ್ರದ ರತ್ನಗಿರಿ ಬಳಿ ಪತ್ತೆಯಾಗಿದ್ದು ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆಯನ್ನು ಕಾರವಾರ ಮೂಲದ ಮೀನುಗಾರರು ವ್ಯಕ್ತಪಡಿಸಿದ್ದಾರೆ.

ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರರ ಕಣ್ಣಿಗೆ ಈ ಅವಶೇಷಗಳು ಕಾಣಿಸಿದ್ದು ,ಬಿದ್ದ ಬೋಟಿನ ಅವಶೇಷ ಮಲ್ಪೆ ಮೂಲದ ಬೋಟಿನದ್ದು ಎನ್ನಲಾಗಿದೆ.

ಈ ಬಗ್ಗೆ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಅವಶೇಷಗಳ ಪೋಟೋ ಮಾಹಿತಿಯನ್ನು ಪ್ರತ್ಯಕ್ಷ ದರ್ಶಿ ಮೀನುಗಾರರು ನೀಡಿದ್ದಾರೆ.

ಘಟನೆ ಏನು ?

ಡಿಸೆಂಬರ್ ೧೩ ರಂದು ಮಲ್ಪೆಯಿಂದ ಮಹರಾಷ್ಟ್ರದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ನಾಪತ್ತೆಯಾಗಿ ಬೋಟಿನಲ್ಲಿದ್ದ ರಾಜ್ಯದ ೭ ಮೀನುಗಾರರು ನಾಪತ್ತೆಯಾಗಿದ್ದರು.
ಈ ಬೋಟುನಲ್ಲಿ ಉತ್ತರ ಕನ್ನಡ ಜಿಲ್ಲೆಯ 5 ಹಾಗೂ ಉಡುಪಿಯ 2 ಮೀನುಗಾರರು ನಾಪತ್ತೆಯಾಗಿದ್ದರು.

ನಾಪತ್ತೆಯಾದ ನಂತರ ಇವರ ಕುರಿತು ಯಾವುದೇ ಮಾಹಿತಿ ದೊರೆತಿರಲಿಲ್ಲ ,ಈ ಕಾರಣದಿಂದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಬೃಹತ್ ಪ್ರತಿಭಟನೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.

ಪದೇ ಪದೇ ಹುಸಿ ಮಾಹಿತಿಯಿಂದ ಕಂಗಾಲಾಗಿದ್ದಾರೆ ಮೀನುಗಾರರು!?ಕುಟುಂಬವೂ ಆರಂಕ!

ಒಂದೆಡೆ ಮಹಾರಾಷ್ಟ್ರದ ರತ್ನಗಿರಿ ಬಳಿ ಮೀನುಗಾರಿಕೆ ಬೋಟ್ ಬಾಪತ್ತೆ ಯಾಗುತಿದ್ದಂತೆ ಕಡಲಕಳ್ಳರು ಅಪಹರಿಸಿದ್ದಾರೆ ಎಂಬ ಅನುಮಾನ ಕಾಡಿತ್ತು.ಆದರೇ ಬೋಟುಗಳ ಜಿ.ಪಿ.ಆರ್. ಎಸ್. ಅಥವಾ ಮೊಬೈಲ್ ಟ್ರಾಕ್ ಆಗಬೇಕಿತ್ತು ,ಇದ್ಯಾವುದೂ ಆಗದಿದ್ದುದ್ದು ಭಯೋತ್ಪಾದಕರು ಅಪಹರಿಸಿರಬಹುದೇ ಎಂಬ ಶಂಕೆಯನ್ನು ಸ್ವತಹ ಪೊಲೀಸರು ಹಾಗೂ ನೌಕಾದಳ ಅಧಿಕಾರಿಗಳು ವ್ಯಕ್ತಪಡಿಸಿದ್ದರು.
ಕೊನೆಗೆ ಯುದ್ದ ಹಡಗು ಡಿಕ್ಕಿಯಾಗಿತ್ತು ಎನ್ನು ಮಾತುಗಳೂ ಕೇಳಿಬಂದಿತ್ತು.

ಇನ್ನು ಸಮುದ್ರದಲ್ಲಿ ಕೆಲವು ವಸ್ತುಗಳು ತೇಲಿದ್ದರಿಂದ ಇದು ಸುವರ್ಣ ತ್ರಿಭುಜದ ಬೋಟ್ ನದ್ದು ಎನ್ನಲಾಗಿತ್ತು ಆದರೇ ಅಧಿಕೃತವಾಗಿ ಅಧಿಕಾರಿಗಳು ಇದನ್ನು ತಳ್ಳಿಹಾಕಿದ್ದರು.
ಸರ್ಕಾರ ಕೂಡ ಇವರ ಹುಡುಕಾಟಕ್ಕೆ ಬಾಹ್ಯಾಕಾಶ,ವಾಯು,ನೌಕಾದಳದ ಸಹಕಾರ ಪಡೆದಿದ್ದು ಈವರೆಗೂ ಯಾವೊಂದು ಸುಳಿವೂ ದೊರೆತಿರಲಿಲ್ಲ.

ಇನ್ನು ಎರಡು ತಿಂಗಳುಗಳು ಕಳೆದರೂ ಮೃತರಾಗಿದ್ದಲ್ಲಿ ಶವ ಸಿಗಬೇಕಿತ್ತು ಅಥವಾ ಅವಶೇಷವಾದ್ರೂ ಸಿಗಬೇಕಿತ್ತು, ಆದರೇ ಇದ್ಯಾವುದೂ ಸಿಗದೇ ಸಾಕಷ್ಟು ಗೊಂದಲ ಸಂಶಯ ಆಕಾಂಕ್ಷೆಗಳು ಕಾಣೆಯಾದ ಕುಟುಂಬದ್ದಾಗಿದೆ.
ಇನ್ನು ಇವರ ಪತ್ತೆಗಾಗಿ ಉಡುಪಿಯಲ್ಲಿ ದೈವದ ಮೊರೆ ಕೂಡ ಹೋಗಿದ್ದು ತುಂಬು ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.

ಸಮುದ್ರದಲ್ಲಿ ಸಿಕ್ಕ ಅವಶೇಷ ಸುವರ್ಣ ತ್ರಿಭುಜದ್ದಲ್ಲ!

ಅಂಕೋಲದ ಬೇಲಿಕೇರಿ ಮೀನುಗಾರರಿಗೆ ಇದೇ ತಿಂಗಳ 5 ನೇ ತಾರೀಕಿನಂದು ಮಹಾರಾಷ್ಟ್ರದ ರತ್ನಗಿರಿ ಬಳಿ ಸಮುದ್ರದಲ್ಲಿ ತೇಲುತ್ತಿರುವ ಕಬ್ಬಿಣದ ತಗಡಿನಂತಿರುವ ಅವಶೇಷ ಇದಾಗಿದ್ದು ಇದರ ರಚನೆ ಹಾಗೂ ಪೋಟೋದಲ್ಲಿ ಕಂಡ ಚಿತ್ರಣಗಳನ್ನು ಮಲ್ಪೆಯ ಪರ್ಶಿಯನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ರವಿರವರು ವೀಕ್ಷಣೆಗೆ ತೆರಳಿದ್ದರು,ಆದರೇ ಇದು ಮಲ್ಪೆ ಗೆ ಸೇರಿದ ಸುವರ್ಣ ತ್ರಿಭುಜ ಫರ್ಷಿಯನ್ ಬೋಟ್ ನ ಅವಶೇಷಗಳಲ್ಲ ಅದರ ರಚನೆ ಹೀಗಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಇನ್ನು ಹಲವು ಗೊಂದಲಗಳು ಕಾಡುತಿದ್ದು ನೌಕಾದಳ ಅಧಿಕಾರಿಗಳು ಹಾಗೂ ಕರವಾಳಿ ಪೊಲೀಸರು ಈ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತಿದ್ದಾರೆ.
One thought on “ಮಲ್ಪೆ ಯಲ್ಲಿ ಕಾಣೆಯಾದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾಯ್ತ!?ಮತ್ತೊಮ್ಮೆ ಗೊಂದಲ ಮೂಡಿಸಿದ ಅನಾಮಿಕ ಸುವರ್ಣ ತ್ರಿಭುಜ ರಹಸ್ಯ!

Leave a Reply

Your email address will not be published. Required fields are marked *

error: Content is protected !!