ಕಾರವಾರ:- ಯಲ್ಲಾಪುರ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ತಮ್ಮ ಅಫಿಡವೀಟ್ ನಲ್ಲಿ ಆಸ್ತಿಗಿಂತ ಸಾಲ ಹೆಚ್ಚು ಎಂದು ನಮೂದಿಸಿದ್ದಾರೆ. ೧೪.೩೨ ಕೋಟಿ ರೂ. ಆಸ್ತಿ ಇದ್ದು, ೧೪.೮೨ ಕೋಟಿ ರೂ. ಸಾಲವಿದೆ.
ಭೀಮಣ್ಣ ನಾಯ್ಕ ಪತ್ನಿ ಮತ್ತು ಪುತ್ರನ ಆದಾಯ ಮತ್ತು ಸಾಲವನ್ನು ಅಫಡವೀಟ್ ನಲ್ಲಿ ನಮೂದು ಮಾಡಲಾಗಿದ್ದು, ಪತ್ನಿಯೂ ಸಹ ಆಸ್ತಿಗಿಂತ ಹೆಚ್ಚಿನ ಸಾಲವನ್ನು ಹೊಂದಿದ್ದಾರೆ. ಪತ್ನಿ ೧೯.೫೦ ಕೋಟಿ ರೂ. ನಷ್ಟು ಆಸ್ತಿ ಹೊಂದಿದ್ದು, ೨೦.೩೨ ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ. ಪುತ್ರನ ಬಳಿ ೩.೯೫ ಕೋಟಿ ರೂ. ಆಸ್ತಿಯಿದ್ದು, ೯೮.೯೧ ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ.
ಭೀಮಣ್ಣ ನಾಯ್ಕ ಬಳಿ ೮.೮೧ ಕೋಟಿ ಚರ, ೫.೫೦ ಸ್ಥಿರ ಆಸ್ತಿ, ಪತ್ನಿ ಗೀತಾ ಬಳಿ ೫೧.೩೪ ಲಕ್ಷ ಚರ, ೧೯.೫೮ ಕೋಟಿ ಸ್ಥಿರ, ಪುತ್ರ ಅಶ್ವಿನ್ ಬಳಿ ೨.೭೦ ಕೋಟಿ ಚರ, ೧.೨೫ ಕೋಟಿ ಸ್ಥಿರ ಆಸ್ತಿಯಿದೆ. ಭೀಮಣ್ಣ ಬಳಿ ೧೯.೩೧ ಲಕ್ಷ, ಪತ್ನಿ ಬಳಿ ೧೬.೮೨ ಲಕ್ಷ, ಪುತ್ರ ೮.೫೦ ಲಕ್ಷ ನಗದು ಹೊಂದಿದ್ದಾರೆ. ಮೂವರೂ ತಲಾ ೩ ವಿವಿಧ ವಾಹನಗಳನ್ನು ಹೊಂದಿದ್ದಾರೆ. ಭೀಮಣ್ಣ ಬಳಿ ೭.೫೬ ಲಕ್ಷ ಮೌಲ್ಯದ ಬಂಗಾರ, ಪತ್ನಿಯ ಬಳಿ ೧೯.೧೧ ಲಕ್ಷದ ಬಂಗಾರ, ೧.೧೨ ಲಕ್ಷದ ಬೆಳ್ಳಿ, ಪುತ್ರನ ಬಳಿ ೭.೫೬ ಲಕ್ಷ ದ ಬಂಗಾರವಿದೆ. ಭೀಮಣ್ಣ ೧೪.೮೨ ಕೋಟಿ, ಪತ್ನಿ ೨೦.೩೨ ಕೋಟಿ, ಪುತ್ರ ೯೮.೮೧ ಲಕ್ಷ ಸಾಲವನ್ನು ವಿವಿಧ ಬ್ಯಾಂಕ್ ಗಳಲ್ಲಿ ಮಾಡಿದ್ದಾರೆ.
